Home ಜಿಲ್ಲೆ ಅಲಿಯಂಬರ್‌ನಲ್ಲಿ ನಾಲಾ ತಿರುವು ಕಾಮಗಾರಿ

ಅಲಿಯಂಬರ್‌ನಲ್ಲಿ ನಾಲಾ ತಿರುವು ಕಾಮಗಾರಿ

ಬೀದರ್: ವಿಬಿ ಜಿ ರಾಮ್ ಜಿ ಯೋಜನೆಯಡಿ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಶನಿವಾರ ನಾಲಾ ತಿರುವು ಕಾಮಗಾರಿ ಕೈಗೊಳ್ಳಲಾಯಿತು.
ಕಾರ್ಮಿಕರು ಗ್ರಾಮದ ಶಾಂತಮ್ಮ ಕಂಬಾರ ಅವರ ಹೊಲದಿಂದ ಸಿದ್ಧರಾಮ ಸಂತೋಷ್ ಅವರ ಹೊಲದವರೆಗೆ ನಾಲಾ ತಿರುವು ಕಾಮಗಾರಿ ಕೈಗೊಂಡರು.
ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಕಷ್ಟದಲ್ಲಿದ್ದಾರೆ. ವಿಬಿ ಜಿ ರಾಮ್ ಜಿ ಯೋಜನೆ ಕಾರ್ಮಿಕರಿಗೆ ವರದಾನವಾಗಿದೆ ಎಂದು ಕಾಮಗಾರಿಯ ಮೇಟಿ ಮಂಗಲಾ ಮರಕಲೆ ತಿಳಿಸಿದರು.
ಜಿಲ್ಲೆಯವರೇ ಆದ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ತೋರಿದ್ದಾರೆ. ಕಾರ್ಮಿಕರು ಗುಳೆ ಹೋಗುವುದನ್ನು ತಡೆಯಲು ಕಾರ್ಮಿಕರಿಗೆ ಆಯಾ ಊರುಗಳಲ್ಲೇ ಕೆಲಸ ದೊರೆಯುವಂತೆ ಕ್ರಮ ಕೈಗೊಂಡಿದ್ದಾರೆ. ಸಚಿವರ ಕಾರ್ಯಕ್ಕೆ ಕಾರ್ಮಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.