Home ಜಿಲ್ಲೆ ಕಲಬುರಗಿ ಕಾಳಗಿ : ಅಂಬಾ ಭವಾನಿ ಜಾತ್ರೆ ನಾಳೆ

ಕಾಳಗಿ : ಅಂಬಾ ಭವಾನಿ ಜಾತ್ರೆ ನಾಳೆ

ಕಾಳಗಿ: ಪಟ್ಟಣದ ಭರತನೂರ ರಸ್ತೆಯ ಸಮೀಪದಲ್ಲಿರುವ ಅಂಬಾ ಭವಾನಿ ದೇವಿಯ ಜಾತ್ರಾ ಮಹೋತ್ಸವವು ನಾಳೆ ಸೋಮವಾರ (ಅ. ೨೬) ಅದ್ದೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಸುಭಾಷ ಕದಂ ತಿಳಿಸಿದ್ದಾರೆ.
ಈ ಜಾತ್ರೆಯು ಹುಣ್ಣಿಮೆಯಂದು ನಡೆಯಲಿದ್ದು, ಈ ಅವಧಿಯಲ್ಲಿ ಗ್ರಾಮದಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ ಮನೆಮಾಡಲಿದೆ. ಕಾಳಗಿ ಗ್ರಾಮದ ಧಾರ್ಮಿಕ ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿರುವ ಅಂಬಾ ಭವಾನಿ ದೇವಿಯ ಜಾತ್ರೆಗೆ ವಿಶೇಷ ಮಹತ್ವವಿದೆ.
ಜಾತ್ರೆಯ ಸಂದರ್ಭದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಜಾತ್ರಾ ಮಹೋತ್ಸವದಲ್ಲಿ ಭಕ್ತರು, ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂಬಾ ಭವಾನಿ ದೇವಿಯ ಆಶೀರ್ವಾದ ಪಡೆಯಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸುರೇಶ ಬಾಂಬೆ, ಗೌರವಾಧ್ಯಕ್ಷ ತುಳಸಿರಾಮ ಚವ್ಹಾಣ, ಅಧ್ಯಕ್ಷ ಸುಭಾಷ ಕದಂ, ಕಾರ್ಯದರ್ಶಿ ಸುರೇಶ ಸೇಗಾಂವಕರ, ಮಹೇಶ ಸೇಗಾಂವಕರ, ಕುಪ್ಪಣ್ಣ ಬಾಂಬೆ, ರಾಜು ಜಾಧವ, ಲಕ್ಷ್ಮಣ ಡಪ್ಪುರ, ಭಾವೇಶ ಸೇಗಾಂವಕರ, ರೋಹನ್ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.