
ಕೋಲಾರ,ಜು,೨- ಕೋಲಾರದಲ್ಲಿ ೨ ನೇ ಬಾರಿಗೆ ರಾಜ್ಯ ಮಟ್ಟದ ಚೆಸ್ ಪಂದ್ಯವಳಿ ದಿನಾಂಕ ಜು.೫ರ ಭಾನುವಾರದಂದು ನಗರದ ಯುವಜನ ಸೇವಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಡಾ.ಜಿ.ಎಂ.ಶ್ರೀನಿವಾಸ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೋಲಾರ ಜಿಲ್ಲಾ ಚೆಸ್ ಅಸೋಸಿಯೇಷನ್ ಈ ಪಂದ್ಯಾವಳಿಯನ್ನು ನಡೆಸಿಕೊಡಲಿದ್ದು, ಆಸಕ್ತಿಯುಳ್ಳ ಎಲ್ಲಾ ಚೆಸ್ ಕ್ರೀಡಾ ಪಟುಗಳು ಆಟದಲ್ಲಿ ಪಾಲ್ಗೋಳ್ಳಬೇಕಾಗಿ ಕೋರಿದ್ದಾರೆ.
ಗೆದ್ದವರಿಗೆ ೩೦ ಸಾವಿರ ರೂಪಾಯಿಗಳ ನಗದು ಪುರಸ್ಕಾರ ನೀಡಲಾಗುವುದು. ೫೦ ಟ್ರೋಪಿಸನ್ನು ನೀಡಲಾಗುವುದು. ೦೯ ವರ್ಷ ವಯೋಮಿತಿಯ ಬಾಲಕ ಬಾಲಕಿಯರಿಗೆ ಪ್ರಥಮ ಬಹುಮಾನ ೨ ಸಾವಿರ ರೂಪಾಯಿಗಳು ಹಾಗು ಟ್ರೋಪಿ, ದ್ವಿತೀಯ ಬಹುಮಾನ ೧ ಸಾವಿರ ರೂಪಾಯಿ ಹಾಗೂ ಟ್ರೋಪಿ, ೩ ರಿಂದ ೧೦ರವರೆಗೆ ಟ್ರೋಪಿ ನೀಡಲಾಗುವುದು.
ಇದರ ಜತೆಗೆ ಇ ಸರ್ಟಿಫಿಕೇಟ್‌ಗಳನ್ನು ನೀಡಲಾಗುವುದು. ೧೩ ವರ್ಷ ವಯೋಮಿತಿಯ ಬಾಲಕ ಬಾಲಕಿಯರಿಗೆ ಪ್ರಥಮ ಬಹುಮಾನ ೨ ಸಾವಿರ ರೂಪಾಯಿಗಳು ಹಾಗು ಟ್ರೋಪಿ, ದ್ವಿತೀಯ ಬಹುಮಾನ ೧ ಸಾವಿರ ರೂಪಾಯಿಗಳು ಹಾಗು ಟ್ರೋಪಿ, ಹಾಗೂ ೩ ರಿಂದ ೧೦ರವರೆಗೆ ಟ್ರೋಪಿ ನೀಡಲಾಗುವುದು ಇ-ಸರ್ಟಿಫಿಕೇಟ್‌ಗಳನ್ನು ನೀಡಲಾಗುವುದು.
ವಯೋಮಿತಿ ೧೩ ವರ್ಷ ಮೇಲ್ಪಟ್ಟವರು ಒಪನ್ ವಿಭಾಗದಲ್ಲಿ ಭಾಗವಹಿಸಲು ಕೋರಿದೆ. ಪ್ರಥಮ ಬಹುಮಾನ ೫ ಸಾವಿರ ರೂಪಾಯಿಗಳು ಹಾಗೂ ಟ್ರೋಪಿ, ದ್ವಿತೀಯ ಬಹುಮಾನ ೪ ಸಾವಿರ ರೂಪಾಯಿಗಳು ಮತ್ತು ಟ್ರೋಪಿ, ತೃತೀಯ ಬಹುಮಾನ ೩ ಸಾವಿರ ರೂಪಾಯಿಗಳು ಮತ್ತು ಟ್ರೋಪಿ, ೪ ನೇ ಬಹುಮಾನ ೨ ಸಾವಿರ ರೂಪಾಯಿಗಳು ಮತ್ತು ಟ್ರೋಪಿ, ೫ ನೇ ಬಹುಮಾನ ೧ ಸಾವಿರ ರೂಪಾಯಿಗಳು ಮತ್ತು ಟ್ರೋಪಿ, ೩ ರಿಂದ ೧೦ರವರೆಗೆ ಟ್ರೋಪಿ ನೀಡಲಾಗುವುದು ಹಾಗೂ ಇ ಸರ್ಟಿಪಿಕೇಟ್ ನೀಡಿ ಗೌರವಿಸಲಾಗುವುದು.
ಕೋಲಾರ ಜಿಲ್ಲೆಯ ಎಲ್ಲಾ ಚೆಸ್ ಆಟಗಾರರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಜಿಲ್ಲಾ ಚೆಸ್ ಅಸೋಸಿಯೇಷನ್ ಕೋರಿದೆ. ಆಟಗಾರರು ಆನ್‌ಲೈನ್‌ನಲ್ಲಿ ನೊಂದಣಿಮಾಡಕೊಳ್ಳಬೇಕು. ಚೆಸ್ ಆಟ ಸರಿಯಾಗಿ ೧೦ ಗಂಟೆಗೆ ಪ್ರಾರಂಭವಾಗುವುದು, ಆಟಗಾರರು ಬೆಳಿಗ್ಗೆ ೯.೩೦ ಕ್ಕೆ ಖಡ್ಡಾಯವಾಗಿ ಹಾಜರಿರಬೇಕಾಗಿ ಮನವಿ ಮಾಡಲಾಗಿದೆ.
ಮುಕ್ತಾಯ ಸಮಾರಂಭ ಸಂಜೆ ೬ ಗಂಟೆಗೆ ನೆರೆವೇರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಾ. ಶ್ರೀನಿವಾಸ ಜಿ.ಎಂ ೯೧೪೧೭೯೮೪೧೫, ಶಿವಕುಮಾರ್ ೯೦೩೬೩ ೩೬೭೫೨, ಉಮೇಶ್ ೯೮೪೫೦೧೮೫೯೯, ಚೀಫ್ ಆರ್ಬಿಟರ್ ಶ್ರೀಪತಿ ಮೋ ನಂ ೯೩೪೨೮೧೫೯೨೬, ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಆಟಗಾರರು ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರವನ್ನು ಬರುವಾಗ ತರಬೇಕು. ಎಲ್ಲಾ ಆಟಗಾರರಿಗೂ ಇ-ಸರ್ಟಿಪಿಕೇಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

































