
ಕಲಬುರಗಿ: ಜೂ.17:ಶರಣಬಸವ ವಿಶ್ವವಿದ್ಯಾಲಯದ ವಿಶೇಷವಾಗಿ ಮಹಿಳೆಯರಿಗಾಗಿ ನಡೆಸಲಾಗುತ್ತಿರುವ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ವಿಭಾಗದ ದಾಖಲೆಯ 28 ವಿದ್ಯಾರ್ಥಿನಿಯರು ವಿವಿಧ ಸಾಫ್ಟ್‍ವೇರ್ ಕಂಪನಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆಕರ್ಷಕ ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ.
ವಿದ್ಯಾರ್ಥಿನಿಯರಾದ ಶಿವಾನಿ ಪಾಟೀಲ, ಸುμÁ್ಮ ಹಾಗೂ ಫರಿಯಾ ಅಂಜುಮ್ ಅವರು ಜಾಗತಿಕ ಮಟ್ಟದ ಆನ್‍ಲೈನ್ ವೃತ್ತಿಪರ ತರಬೇತಿ ಸಂಸ್ಥೆಯಾದ ಇಂಟೆಲಿಪಾಟ್ ಸಾಫ್ಟ್‍ವೇರ್ ಸೊಲ್ಯೂಷನ್ಸ್‍ನಲ್ಲಿ ವಾರ್ಷಿಕ 8 ಲಕ್ಷ ರೂ. ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ.
ಇನ್ನೂ ಐವರು ವಿದ್ಯಾರ್ಥಿನಿಯರು ವಿವಿಧ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ತಲಾ ವಾರ್ಷಿಕ 3 ಲಕ್ಷ ರೂ. ವೇತನದೊಂದಿಗೆ ನೇಮಕಗೊಂಡಿದ್ದಾರೆ. ಆರು ವಿದ್ಯಾರ್ಥಿನಿಯರು ತಲಾ ವಾರ್ಷಿಕ 2.5 ಲಕ್ಷ ರೂ. ವೇತನದೊಂದಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದು, ಹತ್ತು ವಿದ್ಯಾರ್ಥಿನಿಯರು ತಲಾ ವಾರ್ಷಿಕ 2 ಲಕ್ಷ ರೂ. ವೇತನದೊಂದಿಗೆ ವಿವಿಧ ಸಂಸ್ಥೆಗಳಲ್ಲಿ ನೇಮಕಗೊಂಡಿದ್ದಾರೆ.
ಉದ್ಯೋಗ ಪಡೆದ ವಿವಿಯ ಬಿಬಿಎ ವಿದ್ಯಾರ್ಥಿನಿಯರ ವಿವರ ಈ ಕೆಳಗಿನಂತಿದ್ದು, ಶಿವಾನಿ ಪಾಟೀಲ, ಸುμÁ್ಮ ಹಾಗೂ ಫರಿಯಾ ಅಂಜುಮ್ (ಇಂಟೆಲಿಪಾಟ್ ಸಾಫ್ಟ್‍ವೇರ್ ಸೊಲ್ಯೂಷನ್ಸ್, ವಾರ್ಷಿಕ 8 ಲಕ್ಷ ರೂ.), ಶೀತಲ್ ಹಾಗೂ ಲಿಪ್ಸಿತಾ ದಾಸ್ (ಬೆಲ್‍ಫಾಸ್ಟ್ ಮ್ಯಾನೇಜ್‍ಮೆಂಟ್ ಲಿಮಿಟೆಡ್, ವಾರ್ಷಿಕ 3 ಲಕ್ಷ ರೂ.), ಶಾಂಭವಿ, ನಾಗರತ್ನ ಮತ್ತು ಸೋನಿಕಾ (ಮ್ಯಾಗ್ನಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಾರ್ಷಿಕ 3 ಲಕ್ಷ ರೂ.), ಸೃಷ್ಟಿ ಎಂ. ಪೆÇದ್ದಾರ್, ಅಂಕಿತಾ ಹಾಗೂ ಲಕ್ಷ್ಮೀ ನಾಯಕ್ ಬುಪುರ (ಸ್ಕಿಲ್ ಆರ್ಬಿಟ್ ಪ್ರೈವೇಟ್ ಲಿಮಿಟೆಡ್, ವಾರ್ಷಿಕ 2.5 ಲಕ್ಷ ರೂ.), ಸಾಕ್ಷತಾ (ವಿಜೇಶಾ ಐಟಿ ಸರ್ವೀಸಸ್ ಎಲ್‍ಎಲ್‍ಪಿ, ವಾರ್ಷಿಕ 2.5 ಲಕ್ಷ ರೂ.), ಅರ್ಪಿತಾ ಸಿ. ಹಾಗೂ ಶ್ರೇಯಾ ವೈ. (ಮಥಿಸಿ ಎಡ್‍ಟೆಕ್, ವಾರ್ಷಿಕ 2.5 ಲಕ್ಷ ರೂ.), ಸೌಜನ್ಯ ಗುತ್ತೇದಾರ ಮತ್ತು ಪ್ರಿಯಾಂಕಾ (ಕ್ವಾಂಟಮ್ ಪೋಡ ಟೆಕ್ನಾಲಜೀಸ್, ವಾರ್ಷಿಕ 2 ಲಕ್ಷ ರೂ.), ಪ್ರಭಾ, ಭಾಗ್ಯಶ್ರೀ ರಾಮಲಿಂಗ, ಸ್ನೇಹಾ ಚವಾಣ್ ಹಾಗೂ ಸಂಜನಾ (ಒರಲ್ಯಾನ್ ಗ್ರೂಪ್, ವಾರ್ಷಿಕ 2 ಲಕ್ಷ ರೂ.), ನಂದಿನಿ ಶ್ರೀಮನ್ ಹಾಗೂ ತೇಜಸ್ವಿನಿ ಎಂ. (ರಾಜ್ ಟೂಲ್ಸ್ ಅಂಡ್ ಸ್ಯಾಂಪ್ಲಿಂಗ್, ಪುಣೆ, ವಾರ್ಷಿಕ 2 ಲಕ್ಷ ರೂ.), ಗೌರಿ ಎಂ.ಎಚ್. (ಮಹೀಂದ್ರ ರೈಜ ಶಹಾ ಮೋಟಾರ್ಸ್, ವಾರ್ಷಿಕ 2 ಲಕ್ಷ ರೂ.), ಭಾಗ್ಯಶ್ರೀ ನಿಗೂಡಿ (ಅರ್ವಾಡೆ ಇನ್‍ಫ್ರಾಸ್ಟ್ರಕ್ಚರ್, ಪುಣೆ, ವಾರ್ಷಿಕ 2 ಲಕ್ಷ ರೂ.), ಭುವನೇಶ್ವರಿ ಎಚ್. (ಗೌರನಿತಾಲ್ ಟೆಕ್ನಾಲಜೀಸ್, ವಾರ್ಷಿಕ 1.5 ಲಕ್ಷ ರೂ.), ಪ್ರಗತಿ (ದ್ವಾರಕಾ ಸ್ಕೈಲೈನ್ ಎಲ್‍ಎಲ್‍ಪಿ, ಹೈದರಾಬಾದ್, ವಾರ್ಷಿಕ 1.5 ಲಕ್ಷ ರೂ.), ಭವಾನಿ (ಸೆಕಪಾಡ್ ಟೆಕ್ನಾಲಜೀಸ್, ವಾರ್ಷಿಕ 1 ಲಕ್ಷ ರೂ.) ಹಾಗೂ ಪಿ. ಪಲ್ಲವಿ (ರಾಯರ್ ಇಂಟರ್‍ನ್ಯಾಷನಲ್ ಪ್ರೈವೇಟ್ ಲಿಮಿಟೆಡ್, ವಾರ್ಷಿಕ 1 ಲಕ್ಷ ರೂ.) ಈ ಎಲ್ಲರೂ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಹತ್ತರ ಸಾಧನೆಗಾಗಿ ವಿದ್ಯಾರ್ಥಿನಿಯರು, ಬೋಧಕ ಸಿಬ್ಬಂದಿಯವರನ್ನು ಹಾಗೂ ಬಿಬಿಎ ವಿಭಾಗದ ಚೇರಪರ್ಸನ್ ಪೆÇ್ರ. ಶಿಲ್ಪಾ ಕಂದಗೂಳ ಅವರನ್ನು ಸನ್ಮಾನಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ವಿದ್ಯಾರ್ಥಿನಿಯರು ಮತ್ತು ಎಲ್ಲಾ ಶಿಕ್ಷಕರನ್ನು ಅಭಿನಂದಿಸಿ, ಇದು ಅತ್ಯಂತ ಶ್ಲಾಘನೀಯ ಹಾಗೂ ಮಾದರಿ ಸಾಧನೆಯಾಗಿದೆ ಎಂದು ಪ್ರಶಂಸಿಸಿದರು.
ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕುಲಸಚಿವರಾದ ಡಾ. ಲಕ್ಷ್ಮೀ ಪಾಟೀಲ ಮಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ ಹಾಗೂ ಹಣಕಾಸು ಅಧಿಕಾರಿ ಡಾ. ಕಿರಣ್ ಮಕಾ ಸೇರಿದಂತೆ ಅನೇಕ ಗಣ್ಯರು ಬಿಬಿಎ ವಿಭಾಗದ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.


























