
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳಲ್ಲಿ ರೈತರು ತೀವ್ರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು ರೈತರು ರೈತರು ಸಂಕಷ್ಟದಲ್ಲಿದ್ದು ಗುಳೆ ಹೋಗುತ್ತಿದ್ದಾರೆ ಈ ಎರಡೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕೆಂದು ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಬಿ.ಬಿ. ಪಾಟೀಲ್(ಹಿರೇಮುರಾಳ) ಆಗ್ರಹಿಸಿದರು.
ಬುಧುವಾರರಂದು ಜೆಡಿಎಸ್ ತಾಲೂಕ ಘಟಕದಿಂದ ಮುದ್ದೇಬಿಹಾಳ ತಾಳಿಕೋಟಿ ತಾಲೂಕು ಬರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಹಮ್ಮಿಕೊಂಡ ಹೋರಾಟವನ್ನುದ್ದೇಶಿಸಿ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸರಕಾರ ಬಿಡುಗಡೆ ಮಾಡಿರುವ ಬರ ಪಟ್ಟಿಯಲ್ಲಿ ನಮ್ಮ ತಾಲೂಕಿನ ಹೆಸರುಗಳು ಇಲ್ಲ ಕೂಡಲೇ ಸ್ಥಳೀಯ ಶಾಸಕರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬರ ಘೋಷಣೆ ಮಾಡಿಸಬೇಕು ಆಡಳಿತ ಸರಕಾರದ ಯಾವೊಬ್ಬ ಸಚಿವರಿಗೆ ಬಗ್ಗೆ ಆಸಕ್ತಿ ಇಲ್ಲ ತಮ್ಮ ಅಧಿಕಾರ ಮಂತ್ರಿ ಸ್ಥಾನಕ್ಕೆ ಬಡಿದಾಡುತ್ತಿದ್ದಾರೆ ತೀವ್ರ ಬರಗಾಲಕ್ಕೆ ಸಿಲುಕಿದೆ ರೈತರ ಪ್ರತಿ ಎಕರಗೆ ೫೦ ಸಾವಿರ ಪರಿಹಾರ ನೀಡಬೇಕು ಇಲ್ಲವಾದಲ್ಲಿ ತಹಶಿಲ್ದಾರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನೀರಾವರಿ ಕಾಲುವೆ ನವೀಕರಣಕ್ಕೆ ಹಾಗೂ ರೈತಪರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಪ್ರತಿ ವರ್ಷ ೨೦ ಸಾವಿರ ಕೋಟಿ ಬಿಡುಗಡೆ ಮಾಡಿದ್ದರಲ್ಲದೇ ಬರ ಸಂದರ್ಭದಲ್ಲಿ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದರು ಕಾರಣ ರೈತರ ಬಗ್ಗೆ ಅವರಿಗೆ ಇದ್ದ ಕಾಳಜಿ ಈಗಿನ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಇದು ರೈತ ವಿರೋಧಿ ಕಾಂಗ್ರೆಸ್ ಸರಕಾರವಾಗಿದೆ ಎಂದು ಆರೋಪಿಸಿದರು.
ಈ ವೇಳೆ ಪಕ್ಷದ ಮುಖಂಡರಾದ ಪವಾಡೆಪ್ಪ ಹವಾಲ್ದಾರ್, ಮಹಾದೇವಿ ಪಾಟೀಲ್, ರೈತ ಮಹಿಳೆ ರೇಣುಕಾ ಝಳಕಿ ಮಾತನಾಡಿ ರೈತರು ಎದರುಸತ್ತಿರುವ ಸಮಸ್ಯೆಗಳು, ಬೆಲೆ ಏರಿಕೆಯಿಂದ ಆಗಿರುವ ಸಂಕಷ್ಟ ಬಡಜನರಿಗೆ ಹಾಗೂ ಮಧ್ಯಮ ವರ್ಗಕ್ಕೆ ಅಳಲನ್ನು ಕಾಂಗ್ರೆಸ್ ಸರಕಾರ ಆಲಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಪತ್ರವನ್ನು ತಹಶಿಲ್ದಾರ ಆನಂದ ಕೋಲಾರ ಅವರಿಗೆ ನೀಡಿದರು.
ಬಸವಂತರಾಯ ದೇಸಾಯಿ, ಈ ಸಂದರ್ಭದಲ್ಲಿ ವೀರಮ್ಮ ಚೆನ್ನಿಗಾವಿ, ಬಸವಂತರಾಯ ದೇಸಾಯಿ, ಸೈಯದ್ ಸುಲೇಮಾನ, ಕುಶಾಲ್ ವಾಲಿಕಾರ, ಶಿವಣ್ಣ ವಾಲಿಕಾರ, ಅಶೋಕ ಗುರಿಕಾರ, ಪ್ರಹ್ಲಾದ ಹಜೇರಿ, ಎಂ.ಬಿ ಅಕ್ಕಿ, ಎಸ್ ಆರ್ ಬಿರಾದಾರ, ಕೆ ಎಂ ಹಗರಟಗಿ, ಎನ್ ಎನ್ ಅಗಸಬಾಳ, ಬುಡ್ಡೇಸಾಬ ನಾವದಗಿ, ಮೊದಲಾದವರು ಉಪಸ್ತಿತರಿದ್ದರು.































