
ಕಲಬುರಗಿ,ನ.28-ಮನೆ ಬೀಗ ಮುರಿದು 1.47 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಉದನೂರ ಕ್ರಾಸ್ನ ಅಮೋಘ ನಗರದಲ್ಲಿ ನಡೆದಿದೆ.
ಗದ್ವಾಲ್ ಉಮೇಶ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 1.20 ಲಕ್ಷ ರೂ.ನಗದು, 5 ಸಾವಿರ ರೂ.ಮೌಲ್ಯದ 50 ಗ್ರಾಂ.ಬೆಳ್ಳಿಯ ಲಕ್ಷ್ಮೀ ಮೂರ್ತಿ, 10 ಸಾವಿರ ರೂ.ಮೌಲ್ಯದ ಬೆಳ್ಳಿ ಸಾಮಾನು, 12 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಸುತ್ತುಂಗುರ, 8 ಸಾವಿರ ರೂ.ಮೌಲ್ಯದ 6 ಗ್ರಾಂ.ಬೆಳ್ಳಿಯ ರಿಂಗ್ ಸೇರಿ 1,47,800 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಇವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಪತ್ನಿಯ ತವರೂರಾದ ರಾಯಚೂರಿಗೆ ಭವಾನಿ ದೇವಿಯ ಪೂಜೆಗೆ ಹೋದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.





















