
ಕಲಬುರಗಿ,ನ.28-ಬಸ್ ಹತ್ತುವಾಗ ಮಹಿಳೆಯರಿಬ್ಬರ 1 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ.
ನಗರದ ರಾಣೇಶಪೀರ್ ದರ್ಗಾ ರಸ್ತೆಯ ಆಶ್ರಯ ಕಾಲೋನಿಯ ಲಕ್ಷ್ಮೀ ವಿಕಾಸ ಹುಲಸಗುಡ ಅವರು ತಮ್ಮ ಸ್ವ ಗ್ರಾಮವಾದ ಕಮಲಾಪುರ ತಾಲ್ಲೂಕಿನ ಜೀವಣಗಿಗೆ ಹೋಗಲು ಹುಮನಾಬಾದ ರಿಂಗ್ ರೋಡ್ನಲ್ಲಿ ಬಸ್ ಹತ್ತಿದ್ದು, ಈ ವೇಳೆ ಅವರ ಬ್ಯಾಗಿನಲ್ಲಿ ಇದ್ದ 15 ಸಾವಿರ ರೂಪಾಯಿ ಮೌಲ್ಯದ 1.50 ಗ್ರಾಂ.ಬಂಗಾರದ ಕಿವಿಯೋಲೆ, 30 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಸುತ್ತುಂಗುರ ಮತ್ತು ಅವರ ಪಕ್ಕದಲ್ಲಿ ಕುಳಿತಿದ್ದ ಕಾಳಗಿ ತಾಲ್ಲೂಕಿನ ಹುಳಗೇರಾ ಗ್ರಾಮದ ಅಜ್ಜಿ ಮಹಿಬೂಬಿ ರಸೂಲಸಾಬ್ ಅವರ ಬ್ಯಾಗ್ನಲ್ಲಿ ಇದ್ದ 55 ಸಾವಿರ ರೂ.ಮೌಲ್ಯದ 5.5 ಗ್ರಾಂ.ಬಂಗಾರದ ಕಿವಿಯೋಲೆ ಸೇರಿ 1 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿವೆ.
ಲಕ್ಷ್ಮೀ ವಿಕಾಸ ಹುಲಸಗುಡ ಅವರು ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.





















