Home ಮುಖಪುಟ ಸುದ್ದಿ ಸಂಘರ್ಷ ಅಂತ್ಯಕ್ಕೆ ಇರಾನ್- ಅಮೆರಿಕ ಒಪ್ಪಿಗೆ

ಸಂಘರ್ಷ ಅಂತ್ಯಕ್ಕೆ ಇರಾನ್- ಅಮೆರಿಕ ಒಪ್ಪಿಗೆ

ಜಿನೇವಾ,ಜೂ.೨೨- ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಕೊನೆಗಾಣಿಸಲು ಅಮೆರಿಕ ಮತ್ತು ಇರಾನ್ ೬೦ ದಿನಗಳ ಮಾರ್ಗಸೂಚಿ ಜಾರಿ ಮಾಡಲು ಒಪ್ಪಿಕೊಂಡಿದ್ದು ಮಧ್ಯಸ್ಥಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜಕೀಯ ಮೇಲ್ವಿಚಾರಣೆ ಮತ್ತು ನಿರ್ದೇಶನ ನೀಡುವ ಉನ್ನತ ಮಟ್ಟದ ಸಮಿತಿ ಸ್ಥಾಪಿಸಲು ಒಪ್ಪಿಕೊಂಡಿವೆ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳ ನಂತರ ಅಂತಿಮ ಶಾಂತಿ ಒಪ್ಪಂದ ತಲುಪುವ ಗುರಿ ಹೊಂದಿರುವ ೬೦ ದಿನಗಳ ಚೌಕಟ್ಡಿನ ಮಾರ್ಗಸೂಚಿಗೆ ಅಮೆರಿಕ ಮತ್ತು ಇರಾನ್ ಒಪ್ಪಿಕೊಂಡಿವೆ ಎಂದು ಕತಾರ್ ಮತ್ತು ಪಾಕಿಸ್ತಾನ ಘೋಷಿಸಿದ್ದು ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವಿನ ಹೊಸ ರಾಜತಾಂತ್ರಿಕ ಒತ್ತಡ ಹೊಸ ಹಂತ ಪ್ರವೇಶಿಸಿದೆ.

ಪರಮಾಣು ಸಂಬಂಧಿತ ವಿಷಯಗಳ ಮೇಲೆ ಕೇಂದ್ರೀಕರಿಸಿದ ಪ್ರತ್ಯೇಕ ಕಾರ್ಯ ಗುಂಪುಗಳನ್ನು ಮುನ್ನಡೆಸುವ ಮುಖ್ಯ ಸಮಾಲೋಚಕರಿಂದ ಸಮಿತಿ ನಿಯಮಿತ ಮೇಲ್ವಿಚಾರಣೆ ಮಾಡಲಿದೆ ಎನ್ನಲಾಗಿದೆ.

“ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದ ಅಡಿಯಲ್ಲಿ ಮೊದಲ ಸುತ್ತಿನ ಚರ್ಚೆಗಳು ಬರ್ಗೆನ್‌ಸ್ಟಾಕ್‌ನಲ್ಲಿ ಮುಕ್ತಾಯಗೊಂಡಿದ್ದು ಇರಾನ್, ಅಮೆರಿಕ, ಕತಾರ್ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಮಾತುಕತೆಗಳಲ್ಲಿ ಭಾಗವಹಿಸಿದ್ದರು.

ಕತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಮಾತುಕತೆಯ ನಂತರ ಅಂತಿಮ ಒಪ್ಪಂದಕ್ಕೆ ಬರಲು ೬೦ ದಿನಗಳ ಮಾರ್ಗಸೂಚಿಗೆ ಅಮೆರಿಕ, ಇರಾನ್ ಒಪ್ಪಿಗೆ ನೀಡಿದ್ದು ಯೋಜನೆ ಪರಿಶೀಲನೆ, ನಿರ್ಬಂಧಗಳು, ಕಡಲ ಸುರಕ್ಷತೆ ಮತ್ತು ಲೆಬನಾನ್ ಸಂಘರ್ಷ ನಿವಾರಣೆಯ ಕುರಿತು ತಾಂತ್ರಿಕ ಮಾತುಕತ ನಡೆಸಲು ಸಮ್ಮತಿಸಿವೆ.

ಮಧ್ಯವರ್ತಿಗಳಾದ ಕತಾರ್ ಮತ್ತು ಪಾಕಿಸ್ತಾನ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಅಮೆರಿಕ, ಇರಾನ್ ಮಾತುಕತೆಗಳು “ಸಕಾರಾತ್ಮಕ ಮತ್ತು ರಚನಾತ್ಮಕ ವಾತಾವರಣದಲ್ಲಿ” ನಡೆದಿವೆ. ಅಮೆರಿಕ ಮತ್ತು ಇರಾನ್ ನಡುವಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಕ್ಷಗಳು “ಪ್ರೋತ್ಸಾಹದಾಯಕ ಪ್ರಗತಿ” ಸಾಧಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.

ಶೃಂಗಸಭೆಯ ಅತಿದೊಡ್ಡ ಬೆಳವಣಿಗೆಯೆಂದರೆ ೬೦ ದಿನಗಳಲ್ಲಿ ಅಂತಿಮ ಒಪ್ಪಂದ ತಲುಪಲು ಮಾರ್ಗಸೂಚಿಯ ಅನುಮೋದನೆ, ತಾಂತ್ರಿಕ ಮಟ್ಟದ ಮಾತುಕತೆಗಳು ತಕ್ಷಣವೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಹೊಸ ಕಾರ್ಯವಿಧಾನ ರಾಜಕೀಯ ಬದ್ಧತೆ ಮೀರಿ ಚರ್ಚೆಗಳ ಅನುಷ್ಠಾನ, ಪರಿಶೀಲನೆ ಮತ್ತು ಅನುಸರಣೆಯ ಕುರಿತು ವಿವರವಾದ ವ್ಯವಸ್ಥೆಗಳ ಕಡೆಗೆ ಸಾಗಿಸುವ ಗುರಿ ಹೊಂದಿದೆ ಎಂದು ತಿಳಿಸಿವೆ.

ಮಾತುಕತೆಯ ಅವಧಿಯಲ್ಲಿ ತಪ್ಪು ತಿಳುವಳಿಕೆ ತಡೆಗಟ್ಟಲು, ಉಲ್ಬಣಗೊಳ್ಳುವ ಅಪಾಯ ಕಡಿಮೆ ಮಾಡಲು ಮತ್ತು ಮುಂದಿನ ಘಟನೆ ನಿರ್ವಹಿಸಲು ಪಕ್ಷಗಳ ನಡುವೆ ನೇರ ಮಾತುಕತೆ ಮಾರ್ಗವನ್ನು ಸಹ ರಚಿಸಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಿದೆ.

ವಿಶ್ವದ ಅತ್ಯಂತ ಕಾರ್ಯತಂತ್ರದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾದ ಮತ್ತು ಅಮೆರಿಕ-ಇರಾನ್ ಸಂಘರ್ಷದಲ್ಲಿ ಪ್ರಮುಖ ಫ್ಲ್ಯಾಶ್ ಪಾಯಿಂಟ್ ಆಗಿರುವ ಹೊರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸುರಕ್ಷಿತ ಸಾಗಣೆ ಖಚಿತಪಡಿಸಿಕೊಳ್ಳುವತ್ತಲೂ ಈ ಕಾರ್ಯವಿಧಾನ ಗಮನಹರಿಸಿವೆ.

ಪರಮಾಣು ಸಂಬಂಧ ಚರ್ಚೆ
ಪರಮಾಣು ಸಂಬಂಧಿತ ಸಮಸ್ಯೆಗಳು, ನಿರ್ಬಂಧಗಳು, ಮೇಲ್ವಿಚಾರಣಾ ಕಾರ್ಯವಿಧಾನಗಳು, ವಿವಾದ ಪರಿಹಾರ ವ್ಯವಸ್ಥೆಗಳು ಮತ್ತು ತಿಳುವಳಿಕೆ ಪತ್ರದ ಅನುಷ್ಠಾನಕ್ಕೆ ಸಂಬಂಧಿಸಿದ ಇತರ ವಿಷಯಗಳ ಮೇಲೆ ಕೇಂದ್ರೀಕರಿಸಿದ ಪ್ರತ್ಯೇಕ ಕಾರ್ಯ ಗುಂಪು ಮುನ್ನಡೆಸುವ ಅವಕಾಶ ನೀಡಲಾಗಿದೆ.

ಮತ್ತೊಂದು ಪ್ರಮುಖ ಹೆಜ್ಜೆಯಲ್ಲಿ, ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಅನುಷ್ಠಾನ ಮೇಲ್ವಿಚಾರಣೆ ಮಾಡಲು ಮತ್ತು ಹೊಸ ಘರ್ಷಣೆ ತಡೆಗಟ್ಟಲು ಕತಾರ್ ಮತ್ತು ಪಾಕಿಸ್ತಾನದ ಅನುಕೂಲದೊಂದಿಗೆ ಇರಾನ್, ಅಮೆರಿಕ ಮತ್ತು ಲೆಬನಾನ್ ಅನ್ನು ಒಳಗೊಂಡ ಸಂಘರ್ಷ ನಿವಾರಣಾ ಕೋಶ ಸ್ಥಾಪಿಸಲು ಪಕ್ಷಗಳು ಒಪ್ಪಿಕೊಂಡಿವೆ

ಮೇಲ್ವಿಚಾರಣಾ ಸಮಿತಿ ರಚನೆ
ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಅನುಷ್ಠಾನ ಮೇಲ್ವಿಚಾರಣೆ ಮಾಡಲು ಮತ್ತು ಹೊಸ ಘರ್ಷಣೆಗ ತಡೆಯಲು ಕತಾರ್ ಮತ್ತು ಪಾಕಿಸ್ತಾನದ ಅನುಕೂಲದೊಂದಿಗೆ ಇರಾನ್, ಅಮೆರಿಕ ಮತ್ತು ಲೆಬನಾನ್ ಅನ್ನು ಒಳಗೊಂಡ ಸಂಘರ್ಷ ನಿವಾರಣಾ ಕೋಶವನ್ನು ಸ್ಥಾಪಿಸಲು ಒಪ್ಪಿಕೊಂಡಿವೆ

ಪ್ರಸ್ತಾವಿತ ಚೌಕಟ್ಟಿನ ವಿವರಗಳ ಕುರಿತು ಸಮಾಲೋಚಕರು ಕೆಲಸ ಮಾಡುತ್ತಿರುವುದರಿಂದ, ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ತಾಂತ್ರಿಕ ಚರ್ಚೆಗಳು ವಾರವಿಡೀ ಮುಂದುವರಿಯುವ ನಿರೀಕ್ಷೆಯಿದೆ. ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನ ಒಳಗೊಂಡ ಚತುರ್ಭುಜ ಮಾತುಕತೆಗಳಲ್ಲಿ ನಿಯೋಗ ಭಾಗವಹಿಸಿದ್ದವು ಎಂದು ಹೇಳಿವೆ