ನಗರದ ಸಂಪಂಗಿರಾಮನಗರ, ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಹಾಗೂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ದೇವರ ೨೭ನೇ ವಾರ್ಷಿಕೋತ್ಸವ ಹಾಗೂ ರಾಜಗೋಪುರ, ವಿಮಾನ ಗೋಪುರ ವರ್ಣಲೇಪನ ಪ್ರಯುಕ್ತ ವಿಶೇಷ ಪೂಜೆ ಹಾಗೂ ಕುಂಭಾಭಿಷೇಕ ನೆರವೇರಿಸಲಾಯಿತು. ಪ್ರಧಾನ ಅರ್ಚಕರುಗಳಾದ ಡಿ. ಭಕ್ತವತ್ಸಲ ಭಟ್ಟರ್, ಬಿ. ನರಹರಿ ಭಟ್ಟರ್, ಸಹಾಯಕ ಅರ್ಚಕ ಬಿ. ಸುಧನ್ವ ಭಟ್ಟರ್ ಮತ್ತಿತರರು ಭಾಗವಹಿಸಿದ್ದರು.