Home ಜಿಲ್ಲೆ ಕಲಬುರಗಿ ಯೋಗದಿಂದ ಆರೋಗ್ಯಕರ ಜೀವನ

ಯೋಗದಿಂದ ಆರೋಗ್ಯಕರ ಜೀವನ

ಕಲಬುರಗಿ,ಜೂ.22-12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಆಚರಿಸಲಾಯಿತು.
ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆರ್ಟ್ ಆಫ್ ಲೀವಿಂಗ್ ಸಂಸ್ಥೆ ವತಿಯಿಂದ ಆಗಮಿಸಿದ ಯೋಗ ಶಿಕ್ಷಕ ದತ್ತಾತ್ರೇಯ ಚಿಂಚೂರ್‍ರವರು ಮಾತನಾಡುತ್ತ, ಯೋಗದಿಂದ ಸಂತೋಷದ ಜೀವನ ಆರೋಗ್ಯಕರ ಜೀವನ ಮತ್ತು ಸಾಮರಸ ಜೀವನ ವಿಧಾನವನ್ನು ಕಲಿಸಿಕೊಡುವುದಾಗಿ ಯೋಗ ನಮ್ಮ ಒಳಗಿನ ಆತ್ಮ ಶಕ್ತಿಯನ್ನು ಪ್ರಜ್ವಲಿಸುವಂತೆ ಮಾಡುತ್ತದೆ. ದೇಹ, ಮನಸ್ಸು, ಆತ್ಮದ ವಿಕಸನಕ್ಕೆ ಯೋಗ ಸಹಾಯಕವಾಗಿದೆ ಎಂದು ಹೇಳಿದರು.
ಈ ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕಾಂಬಳೆರವರು ಮಾತನಾಡುತ್ತ, ಮೊದಲಿಗೆ ಯೋಗ ದಿನಾಚರಣೆಯ ಶುಭಾಯಶವನ್ನು ಕೋರಿದರು. ಭಾರತ ದೇಶÀ ಜಗತ್ತಿಗೆ ನೀಡಿದ ಅದ್ಭುತ ಕೊಡುಗೆಗಳಲ್ಲಿ ಯೋಗ ಶಾಸ್ತ್ರವು ಒಂದು. ಸರಿ ಸುಮಾರು 6000 ವರ್ಷಗಳ ಪೂರ್ವದಲ್ಲಿಯೇಯೋಗವನ್ನು ಶಾಸ್ತ್ರಗಳ ರೂಪದಲ್ಲಿ ನೀಡಿ ಜೀವನ ಶೈಲಿಯಲ್ಲಿ ಅದನ್ನು ಅಳವಡಿಸಿಕೊಳ್ಳಲು ತಿಳಿಸಲಾಗಿತ್ತು.
ಜೂನ್-21 ವಿಶೇಷವಾದ ದಿನ ಏಕೆಂದರೆ ಈ ದಿನ ಅತೀ ದೀರ್ಘವಾದ ದಿನವಾಗಿದೆ. (ಉತ್ತರ ಗೋಳಾರ್ಧಾದ ಅತೀ ಉದ್ದದ ಹಾಗೂ ದಕ್ಷಿಣ ಗೋಳಾರ್ಧಾದ ಚಿಕ್ಕ ದಿನವಾಗಿದೆ) ಹಗಲು ದೀರ್ಘ ದಿನವಿರುವ ದಿನವಾಗಿದೆ. ಅಲ್ಲದೇ ಶಿವನು ಈ ದಿನ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸಿದ ದಿನ ಎಂದು ನಂಬಿಕೆ ಇದ್ದು, ಶಿವನು ಯೋಗದ ಆದಿ ಗುರು ಆದ ದಿನವೂ ಕೂಡ ಇದು ಆಗಿದೆ ಎಂಬ
ಪ್ರತಿತವಿದೆ. ಎಲ್ಲಾ ರೋಗಗಳಿಗೆ ಯೋಗ ರಾಮಬಾಣವಾಗಿದೆ.2026ರ ” ಆರೋಗ್ಯಕ್ಕಾಗಿ ವೃದ್ದಾಪ್ಯಕ್ಕಾಗಿ ಯೋಗ ” ಅಂದರೆ ನಾವು ನಮ್ಮನ್ನು ವಯಸ್ಸಾದಂತೆ ಶಾರೀರ ದುರ್ಬಲಗೊಳ್ಳುವ ಸ್ಥಿತಿಯಲ್ಲಿ ಇರುತ್ತದೆ. ಅದನ್ನು ಸದೃಡ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗವನ್ನು ನಿತ್ಯ ಅನುಸರಿಕೊಂಡಲ್ಲಿ ನಿರೋಗಿಯಾಗಿ ವೃದ್ದಾಪ್ಯ ಜೀವನವನ್ನು ಸಂತೋಷದಾಯಕವಾಗಿ ಬದುಕಲು ದಾರಿ ಮಾಡಿಕೊಡುತ್ತದೆ. ಆದ ಕಾರಣ ಎಲ್ಲಾರು ಪ್ರತಿನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಕರೆ ನೀಡಿದರು. ಆರ್ಟ್ ಆಫ್ ಲಿವೀಂಗ್ ಸಂಸ್ಥೆಯ ವತಿಯಿಂದ ಕೇಂದ್ರ ಕಾರಾಗೃಹದಲ್ಲಿರು ಬಂದಿಗಳು ನಿರಂತರವಾಗಿ ಯೋಗ, ಧ್ಯಾನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ 02 ಸಂಖ್ಯೆ ಜಮಖಾನೆಗಳನ್ನು ದೇಣಿಗೆಯಾಗಿ ಈ ಸಂಸ್ಥೆಗೆ ನೀಡಿರುತ್ತಾರೆ. ಇಲಾಖೆ ವತಿಯಿಂದ ಆರ್ಟ್ ಆಫ್ ಲೀವಿಂಗ್ ಸಂಸ್ಥೆಗೆ ಅಭಿನಂದನೆಗಳನ್ನು ತಿಳಿಸಿದರು.
ಆರ್ಟ್ ಆಫ್ ಲಿವೀಂಗ್ ಸಂಸ್ಥೆಯ ವತಿಯಿಂದ ಆಗಮಿಸಿದ ಯೋಗ ಗುರುಗಳಾದ ದತ್ತಾತ್ರೇಯ ಚಿಂಚೂರ್ 100 ಜನ ಅಧಿಕಾರಿ/ಸಿಬ್ಬಂದಿಗಳು ಹಾಗೂ 210 ಜನ ಬಂದಿಗಳಿಗೆ ಒಟ್ಟು 310 ಜನರಿಗೆ ಯೋಗವನ್ನು ಮಾಡಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಜೈಲರ್‍ಗಳಾದ ಶ್ರೀಮಂತಗೌಡ ಪಾಟೀಲ್, ಶಾಮರಾವ ಬಿದ್ರಿ, ಉಳಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದರು. ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ. ಸುರೇಶ್, ರವರು ಸಂಸ್ಥೆಯಲ್ಲಿ ದಿನನಿತ್ಯ ಯೋಗಾಸನವು ನಿರಂತರವಾಗಿ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಮನಃ ಪರಿವರ್ತನೆಗಾಗಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಲಾಭವನ್ನು ಪಡೆಯಬೇಕೆಂದು ಕರೆ ನೀಡುತ್ತಾ, ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಸಂಸ್ಥೆ ಶಿಕ್ಷಕ ನಾಗರಾಜ ಮೂಲಗೆ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.