
ಕಲಬುರಗಿ,ಜೂ.22-ನಗರದ ಕನ್ನಡ ಭವನದಲ್ಲಿ ಭಾನುವಾರ ಸೋನಿ ಕ್ಯಾಮೆರಾ ಕಂಪನಿ ಹಾಗೂ ಕಲಬುರಗಿ ಜಿಲ್ಲಾ ಫೆÇೀಟೋಗ್ರಾಫರ್ಸ ಅಸೋಸಿಯೇಷನ್ ಸಹಯೋಗ ದೊಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತುದಾರರಾಗಿ ಆಗಮಿಸಿದ್ದ ಮುಸ್ತಫಾ ಭಾಶಾ ಅವರು ಸೋನಿ ಕ್ಯಾಮೆರಾ ಬಗ್ಗೆ ತರಬೇತಿ ನೀಡಿದರು. ಇದೆ ಸಂಧರ್ಬದಲ್ಲಿ ಕಲಬುರಗಿ ಹಿರಿಯ ಛಾಯಾಗ್ರಾಹಕರಾದ ಜಯಶ್ರೀ ಗಂಗಾರಾಮ ರಾಠೋಡ ಮತ್ತು ಆಳಂದ ಹಿರಿಯ ಛಾಯಾಗ್ರಾಹಕರಾದ ಪ್ರಕಾಶ ಜಂಗಲೆ ಅವರು ಬೆಂಗಳೂರಿನಲ್ಲಿ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪಡೆದ ನಿಮಿತ್ಯ ಕನ್ನಡ ಸಾಹಿತ್ಯ ಪರಿಷತ್ತ ಅದ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ ಅವರು ಅಸೊಶಿಯೇಶನ್ ವತಿಯಿಂದ ಸನ್ಮಾನಿಸಿದರು.
ಕಲಬುರಗಿ ಅಸೊಶಿಯೇಶನ್ ಅಧ್ಯಕ್ಷರಾದ ಬಸವರಾಜ ಸಿ ತೋಟದ ಅವರು ಅದ್ಯಕ್ಷತೆ ವಹಿಸಿ ಮಾತನಾಡಿದರು.
ತರಬೇತಿಯ ನಂತರ ಕಲಬುರಗಿ ಜಿಲ್ಲಾ ಫೆÇೀಟೊಗ್ರಾಫರ್ಸ ಅಸೊಶಿಯೇಶನ್ ರಿ. ಯ 2024-25 ಹಾಗೂ 2025-26 ನೇ ಸಾಲಿನ ಸರ್ವ ಸದಸ್ಯರ ಸಾಮನ್ಯ ಸಭೆಯ ಲೆಕ್ಕ ಪತ್ರವು ಕಜಾಂಚಿಯಾದ ಶ್ರೀನಿವಾಸ ಮಡಕಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸೈಯದ್ ನಸಿರುದಿನ್ ಕೆ ಪಟೇಲ್ ಕಾರ್ಯದರ್ಶಿ ಮಹಮ್ಮದ್ ಅಪ್ಸರ್ ಪಟೇಲ್ ಸಹ ಕಾರ್ಯದರ್ಶಿ ಯಾದ ಅನೀಲಕುಮಾರ ಗಣೇಶಕರ್ ಖಜಾಂಚಿ ಶ್ರೀನಿವಾಸ್ ಮಡಕಿ ಹಾಗೂ ಗೌರವ ಸಲಹೆಗಾರರಾದ ಚಂದ್ರಶೇಖರ್ ಬ್ಯಾಕೋಡ್ ಮಹಮ್ಮದ್ ಅಯಾಜುದ್ದೀನ್ ಪಟೇಲ್ ನಾಗೇಂದ್ರ ಸಕ್ಕರಗಿ.ಪ್ರಭುಲಿಂಗ ಜುಮ್ಮಣ್ಣ. ನಾರಾಯಣ ಎಂ ಜೋಶಿ. ಪ್ರಕಾಶ್ ಜಂಗ್ಲೆ ಶ್ರೀಕಾಂತ್ ಎಸ್ ಪಾಟೀಲ್ ವಿಜಯಕುಮಾರ್ ರಾಠೋಡ್ ಫಿರೋಜ್ ಖಾನ್ ಹಮೀದ್ ಪ್ರಕಾಶ ಶೇರಖಾನೆ ಅಭಿಲಾಷ ಸರಸಂಬಿ ಸಿದ್ದು ಚೇಟ್ಟಿ. ಅಂಬಾದಾಸ್ ಗಾಯಕವಾಡ ಆಕಾಶ್ ಪೂಜಾರಿ ಸಿದ್ದರಾಮಯ್ಯ ಬೆಲ್ಲದಮಠ ಮಲ್ಲಿಕಾರ್ಜುನ್ ತುಪ್ಪದಮಠ ಹಾಗೂ ಎಲ್ಲಾ ತಾಲ್ಲೂಕಿನ ಅದ್ಯಕ್ಷರು ಸೇರಿದಂತೆ ನೂರಾರು ಫೆÇೀಟೋಗ್ರಾಫರ್ಸ ಭಾಗವಹಿಸಿದರು.


























