Home ಜಿಲ್ಲೆ ದ್ರಾಕ್ಷಿ ದಾಳಿಂಬೆ ಬೆಳೆಗಾರರಿಗೆ ವಿಮಾ ಪರಿಹಾರ : ಸಚಿವ ಲಕ್ಷ್ಮಣ ಸವದಿ ಪ್ರಯತ್ನಕ್ಕೆ ರೈತ ಮುಖಂಡರಿAದ...

ದ್ರಾಕ್ಷಿ ದಾಳಿಂಬೆ ಬೆಳೆಗಾರರಿಗೆ ವಿಮಾ ಪರಿಹಾರ : ಸಚಿವ ಲಕ್ಷ್ಮಣ ಸವದಿ ಪ್ರಯತ್ನಕ್ಕೆ ರೈತ ಮುಖಂಡರಿAದ ಹರ್ಷ

ಅಥಣಿ: ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಾಲೂಕಿನ ೮ ಸಾವಿರಕ್ಕೂ ಅಧಿಕ ದ್ರಾಕ್ಷಿ ಬೆಳೆಗಾರರಿಗೆ ೭೯ ಕೋಟಿ ೯೭ ಲಕ್ಷ ರೂ. ವಿಮಾ ಪರಿಹಾರ ದೊರಕಿದ್ದು, ದಾಳಿಂಬೆ ಬೆಳೆಗಾರರಿಗೆ ೧೬.೬೦ ಲಕ್ಷ ರೂ.ವಿಮಾ ಮೊತ್ತ ಬಿಡುಗಡೆಯಾಗಿದ್ದು, ರೈತ ನಾಯಕರಾಗಿರುವ ಸಚಿವ ಲಕ್ಷ್ಮಣ ಸವದಿ ಅವರ ಪ್ರಯತ್ನಕ್ಕೆ ತಾಲೂಕಿನ ಎಲ್ಲ ರೈತರು ಹರ್ಷ ವ್ಯಕ್ತಪಡಿಸಿದ್ದು, ಮಳೆ ಇಲ್ಲದೆ ತೀವ್ರ ಬರಗಾಲದ ಸನ್ನಿವೇಶ ಎದುರಿಸುತ್ತಿರುವ ತಾಲೂಕಿನ ರೈತರಿಗೆ ಇದರಿಂದ ಜೀವಕಳೆ ಬಂದAತಾಗಿದೆ. ತಾಲೂಕಿನ ಎಲ್ಲಾ ರೈತರ ಪರವಾಗಿ ಸಚಿವರನ್ನ ಅಭಿನಂದಿಸುತ್ತೇವೆ ಎಂದು ರೈತ ಮುಖಂಡ ಚಂದ್ರಶೇಖರ ನೇಮಗೌಡ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ ತಾಲೂಕಿನ ರೈತರು ನಿಜವಾಗಲೂ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ ಬಹಳಷ್ಟು ಆರ್ಥಿಕ ನಷ್ಟ ಉಂಟಾಗಿತ್ತು, ಇತ್ತೀಚಿಗೆ ದ್ರಾಕ್ಷಿ ಬೆಳೆಗಾರರಲ್ಲ ಸೇರಿಕೊಂಡು ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಿದಾಗ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ದ್ರಾಕ್ಷಿ ಬೆಳೆಗಳನ್ನ ಸರ್ವೆ ಮಾಡಿಸಿ ಬೆಳೆ ವಿಮೆ ಪಾವತಿಸಿದ ರೈತರಿಗೆ ವಿಮಾ ಕಂಪನಿಯಿAದ ಪರಿಹಾರ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಅನುಕೂಲವಾಗಿದೆ ಎಂದರು.
ಅಥಣಿ ತಾಲೂಕು ತೀವ್ರ ಬರಪೀಡಿತ ಪ್ರದೇಶವಾಗಿದ್ದು, ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಪ್ರಮಾಣವನ್ನು ವೈಜ್ಞಾನಿಕವಾಗಿ ದಾಖಲಿಸುವ ಮಳೆ ಮಾಪನ ಕೇಂದ್ರಗಳಲ್ಲಿ ಉಂಟಾಗಿದ್ದ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯಕ್ಕೂ ಗಮನ ನೀಡಲಾಗಿದೆ ಇದರಿಂದ ರೈತರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರೈತ ಮುಖಂಡ ಶಿವು ಗುಡ್ಡಾಪೂರ ಮಾತನಾಡಿ ಕೆಲವು ವಿರೋಧ ಪಕ್ಷದ ನಾಯಕರು ಹಾಗೂ ರೈತ ಮುಖಂಡರು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಅನಗತ್ಯ ಹೋರಾಟಗಳನ್ನು ನಡೆಸಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಬದಲು ಸಮಸ್ಯೆಗೆ ಸಂಬoಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಆಡಳಿತದೊಂದಿಗೆ ಸಹಕರಿಸಿ ಲೋಪಗಳನ್ನು ಸರಿಪಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಹಿರಿಯ ರೈತ ಮುಖಂಡ ಸಿದರಾಯ ಯಲ್ಲಡಗಿ ಮಾತನಾಡಿ, “ನಾವು ನೇರವಾಗಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿಸಿದರೆ ಅವರು ಸ್ಪಂದಿಸುವ ಪ್ರವೃತ್ತಿ ಹೊಂದಿದ್ದಾರೆ. ಅನಗತ್ಯವಾಗಿ ಪ್ರತಿಭಟನೆ, ಧರಣಿ ನಡೆಸುವುದಕ್ಕಿಂತ ಸಮಸ್ಯೆಗಳನ್ನು ನೇರವಾಗಿ ಅವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ವಿರೋಧ ಪಕ್ಷದವರಾಗಲಿ, ರೈತ ಸಂಘಟನೆಗಳಾಗಲಿ, ಯಾರೇ ಮನವಿ ಮಾಡಿದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಅಥಣಿ ಮತಕ್ಷೇತ್ರದ ದ್ರಾಕ್ಷಿ ಬೆಳೆಗಾರರು ಹಾಗೂ ರೈತರ ಪರವಾಗಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಹಾರ ದೊರಕಿಸಲು ಹಾಗೂ ಅಥಣಿ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸುವ ನಿಟ್ಟಿನಲ್ಲಿಯೂ ಸಚಿವ ಲಕ್ಷ್ಮಣ ಸವದಿ ಅವರು ಸತತವಾಗಿ ಪ್ರಯತ್ನಿಸಿದ್ದಾರೆ ಎಂದು ಹೇಳಿದರು.

ತೆಲಸಂಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಮೋಘ ಖೋಬ್ರಿ ಮಾತನಾಡಿ ಅಥಣಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವ ನಿಟ್ಟಿನಲ್ಲಿಯೂ ಲಕ್ಷ್ಮಣ ಸವದಿ ಅವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಬರಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮಗಳಿಗೆ ಒತ್ತು ನೀಡಿದ್ದಾರೆ. ರೈತರ ಸಂಕಷ್ಟವನ್ನು ಅರ್ಥಮಾಡಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸವದಿ ಅವರ ಪ್ರಯತ್ನಕ್ಕೆ ಎಲ್ಲರೂ ಬೆಂಬಲ ನೀಡಬೇಕು. ರೈತರ ಸಂಕಷ್ಟದ ಸಮಯದಲ್ಲಿ ರಾಜಕೀಯಕ್ಕಿಂತ ಪರಿಹಾರ ಮುಖ್ಯ. ಸರ್ಕಾರ, ಅಧಿಕಾರಿಗಳು ಹಾಗೂ ರೈತರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಇನ್ನಷ್ಟು ರೈತರಿಗೆ ನ್ಯಾಯ ದೊರಕಿಸಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನೂರಮಹ್ಮದ ಡೊಂಗರಗಾAವ, ಗುರು ದಾಶ್ಯಾಳ. ರಾಘು ದೊಡ್ಡನಿಂಗಪ್ಪಗೋಳ, ರಾಮಣ್ಣ ದರಿಗೌಡ, ಆರ್.ಆರ್. ತೇಲಸಂಗ, ವೆಂಕಣ್ಣ ಅಸ್ಕಿ ಲಕ್ಷ್ಮಣ ಮುಗಳಖೋಡ, ಈರಗೌಡ ಪಾಟೀಲ, ಗುರು ಕಾಮನ್. ಶಂಕರ ಪೂಜಾರಿ. ಬಿ.ಎಸ್. ಬಿರಾದಾರ, ಶಿವು ತೇಲಿ, ಶಿವು ನೇಮಗೌಡ, ಶಂಕರ ಪೂಜಾರಿ, ಅನಂತ ಬಸರಿಖೋಡಿ. ರಾಹುಲ ನಾಯಿಕ ಸೇರಿದಂತೆ ರೈತ ಮುಖಂಡರು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರು ಉಪಸ್ಥಿತರಿದ್ದರು.


ಸಚಿವ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ
೨೦೨೫-೨೬ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಥಣಿ ತಾಲೂಕಿನ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಯುವ ಸುಮಾರು ೮ ಸಾವಿರ ರೈತರಿಗೆ ಸುಮಾರು ೮೦ ಕೋಟಿ ಬೆಳೆ ವಿಮೆ ಪರಿಹಾರ ದೊರೆತಿದೆ. ಇದಕ್ಕಾಗಿ ಸಚಿವ ಲಕ್ಷ್ಮಣ ಸವದಿ ಅವರಿಗೆ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ.
ತಾಂತ್ರಿಕ ದೋಷಗಳಿಂದ ಇನ್ನೂ ಕೆಲವು ರೈತರು ಪ್ರಸ್ತುತ ಬೆಳೆ ವಿಮಾ ಯೋಜನೆಯ ಪರಿಹಾರದಿಂದ ಹೊರಗುಳಿದಿದ್ದಾರೆ. ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೆಲವೇ ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ.

    ಶಿವು ಗುಡ್ಡಾಪೂರ. ರೈತ ಮುಖಂಡ

“ಪ್ರಸ್ತುತ ತಾಲೂಕಿನಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವ ಬದಲು ರೈತರಿಗೆ ಯಾವ ರೀತಿಯ ಪರಿಹಾರ ಕಲ್ಪಿಸಬಹುದು ಎಂಬುದರ ಬಗ್ಗೆ ಗಮನಹರಿಸಬೇಕು. ಅಧಿಕಾರದಲ್ಲಿರುವವರು ಹಗಲು-ರಾತ್ರಿ ಕೆಲಸ ಮಾಡಬೇಕು. ವಿರೋಧ ಪಕ್ಷದವರು ಹಾಗೂ ರೈತ ಸಂಘಟನೆಗಳು ಕೂಡ ಪರಿಹಾರ ಕಂಡುಕೊಳ್ಳುವ ಕಾರ್ಯಕ್ಕೆ ಸಹಕಾರ ನೀಡಬೇಕು

       ಅಮೋಘ ಖೋಬ್ರಿ 

ತೆಲಸಂಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ