
ತಾಳಿಕೋಟೆ: ಮಾತಾಪಿತರು ಮಕ್ಕಳಿಗೆ ಚಿಕ್ಕವಯಸ್ಸಿಯಲ್ಲಿಯೇ ಶಿಸ್ತು ಸಂಯಮತೆ ಹಾಗೂ ನಮ್ಮ ಭಾರತೀಯ ಸಂಸ್ಕಾರವನ್ನು ಇಂದಿನ ದಿನಮಾನದಲ್ಲಿ ಬೆಳೆಸುವದು ಅಗತ್ಯವಾಗಿದೆ ಎಂದು ಸಾಹಿತಿ ಹಾಗೂ ಶಿಕ್ಷಕಿಯರಾದ ಶ್ರೀಮತಿ ಶಿವಲೀಲಾ ಮುರಾಳ ಅವರು ನುಡಿದರು.
ಜೇವರ್ಗಿ ಪಟ್ಟಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಸಜ್ಜನ ಕಲ್ಯಾಣ ಮಂಟಪದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಟಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಡುಗೆ ತೊಡುಗೆಗಳು ಮತ್ತು ಜೀವನಶೈಲಿಯಲ್ಲಿ ಉತ್ತಮ ಪರಂಪರೆ ಸಾಂಪ್ರದಾಯಕವೇ? ಅಥವಾ ಆಧುನಿಕವೇ? ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಮಕ್ಕಳಿಗೆ ಉಡುಗೆ ತೊಡುಗೆ ಸಂಸ್ಕಾರ ಹಾಗೂ ಸಾಂಪ್ರದಾಯಕಗಳ ಕುರಿತು ಹಾಗೂ ಆಹಾರ ಪದ್ದತಿ ಜೀವನಶೈಲಿ ಕುರಿತು ಜ್ಞಾನಮೂಡಿಸುವ ಕಾರ್ಯವನ್ನು ಮಾಡುತ್ತಾ ಸಾಗಿದ್ದೇವೆ ಮಕ್ಕಳು ಆದರ್ಶಪ್ರೀಯರಾಗಿ ಬೆಳೆಯಲು ಸಹಾಯಕಾರಿಯಾಗಲಿದೆ ಎಂದರು ಬಾಲ್ಯದಿಂದಲೇ ನಮ್ಮ ಸಂಸ್ಕೃತಿ ಸಂಪ್ರದಾಯ ಹಾಗೂ ಆಚಾರ ವಿಚಾರಗಳ ಪರಿಚಯ ಮಾಡಿಕೊಳ್ಳುವ ಕಾರ್ಯವಾಗಬೇಕು ಅಂದರೆ ಮುಂದಿನ ಪೀಳಿಗೆಯಲ್ಲಿಯೂ ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದರು. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಸಂಸ್ಕಾರಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಹತ್ವದ ವಿಚಾರಗಳನ್ನು ವಿವರಿಸಿದರು.
ಬಿಜೆಪಿ ಮುಖಂಡರಾದ ಮಲಶೆಟ್ಟಪ್ಪಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೇವರ್ಗಿಯ ಮಾಜಿ ಪುರಸಭೆಯ ಸದಸ್ಯರಾದ ಶ್ರೀಮತಿ ಪ್ರೇಮಾ ನರಿಬೋಳ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರ ಸಬಲೀಕರಣಕ್ಕೆ ಆರ್ಥಿಕ ಭದ್ರತೆಗೆ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಸಹಾಯಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯನಿ ಶ್ರೀಮತಿ ಸುನಂದಾ ಡಿ.ಕಲ್ಲಾ, ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಜೋಳದ(ಕಲ್ಬುರ್ಗಿ ವಿಭಾಗ), ತಾಲೂಕಾ ಘಟಕದ ಯೋಜನಾಧಿಕಾರಿ ಮುಲತೇಶ, ವಲಯ ಜ್ಞಾನವಿಕಾಸ ಮುಖ್ಯಸ್ಥರಾದ ಶ್ರೀಮತಿ ಗೀತಾ ಸಜ್ಜನ ಮೊದಲಾದವರು ಉಪಸ್ತಿತರಿದ್ದರು.























