Home ಜಿಲ್ಲೆ ಪದಗ್ರಹಣ ಹಾಗೂ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ

ಪದಗ್ರಹಣ ಹಾಗೂ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ

ರೋಣ (ಗದಗ),ಜು೩೦: ಪತ್ರಿಕೋದ್ಯಮ ಎಂಬುದು ಕೇವಲ ವೃತ್ತಿಯಲ್ಲ ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಪವಿತ್ರವಾದ ಸೇವೆ. ಅನ್ಯಾಯ ಭ್ರಷ್ಟಾಚಾರ ಮತ್ತು ದುಷ್ಟಶಕ್ತಿಗಳ ವಿರುದ್ಧ ನಿರ್ಭಯವಾಗಿ ಧ್ವನಿ ಎತ್ತುವುದೇ ನಿಜವಾದ ಪತ್ರಕರ್ತನ ಶಕ್ತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹಾಗೂ ವಿಶ್ವ ದರ್ಶನ ದಿನಪತ್ರಿಕೆಯ ಸಂಪಾದಕ ಡಾ. ಎಸ್. ಎಸ್. ಪಾಟೀಲ್ ಹೇಳಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನೆರವೇರಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ (ರಿ.) ಯ ಗದಗ ಜಿಲ್ಲಾ ಘಟಕ, ರೋಣ ಹಾಗೂ ಗಜೇಂದ್ರಗಡ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಉದ್ಘಾಟನೆ ಆದೇಶ ಪತ್ರ ಹಾಗೂ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಾ. ಎಸ್. ಎಸ್. ಪಾಟೀಲ್, ಸಂಘಟನೆಯು ಪ್ರತಿಯೊಬ್ಬ ನಿಷ್ಠಾವಂತ ಪತ್ರಕರ್ತನ ಬೆನ್ನಲುಬಾಗಿ ನಿಲ್ಲುತ್ತದೆ. ಗದಗ ಜಿಲ್ಲೆಯಲ್ಲಿ ಅನ್ಯಾಯದ ವಿರುದ್ಧ ಸದಾ ಹೋರಾಡುವ ಅಂದಪ್ಪ ರಾಮಪ್ಪ ಮಾದರ್ ಅವರ ನಾಯಕತ್ವದಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ರೈತ ಸಂಘಟನೆಯ ಗದಗ ಜಿಲ್ಲಾಧ್ಯಕ್ಷ ಮುತ್ತಣ್ಣ ಚೌರಡ್ಡಿ ಹಾಗೂ ಹಿರಿಯ ರೈತ ಮುಖಂಡ ಶಿವಲಿಂಗಪ್ಪ ಭೂಪಳಾಪುರ ಮಾತನಾಡಿ, ರೈತರ ಮತ್ತು ಶೋಷಿತರ ಹೋರಾಟಗಳಿಗೆ ಮಾಧ್ಯಮಗಳು ಸದಾ ಧ್ವನಿಯಾಗಿವೆ. ಸತ್ಯದ ಹಾದಿಯಲ್ಲಿ ನಡೆಯುವ ಪತ್ರಕರ್ತರಿಗೆ ಸಮಸ್ತ ರೈತ ಸಮುದಾಯದ ಪೂರ್ಣ ಬೆಂಬಲವಿರುತ್ತದೆ ಎಂದರು.

ಕೆ. ಎಸ್. ಎಸ್. ಕಾಲೇಜಿನ ಪ್ರಾಚಾರ್ಯ ಸಿ. ಬಿ. ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.

ಗಜೇಂದ್ರಗಡ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ್ ಗೊಗೇರಿ ಸೇರಿದಂತೆ ಹಲವು ನಾಯಕರು ಅನಿಸಿಕೆ ಹಂಚಿಕೊAಡರು.