Home ಜಿಲ್ಲೆ ಭಾರತ ಆಧ್ಯಾತ್ಮಿಕ- ಧಾರ್ಮಿಕ ,ಸಾಂಸ್ಕøತಿಕ ದೇವಾಲಯಗಳ ತೊಟ್ಟಿಲು: ಶಾಸಕ ಯಶವಂತರಾಯಗೌಡ ಪಾಟೀಲ

ಭಾರತ ಆಧ್ಯಾತ್ಮಿಕ- ಧಾರ್ಮಿಕ ,ಸಾಂಸ್ಕøತಿಕ ದೇವಾಲಯಗಳ ತೊಟ್ಟಿಲು: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ನಂದಿಬಸವೇಶ್ವರ ಜಾತ್ರಾಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು.
ಭಾರತ ದೇಶ ವಿಶ್ವದಲ್ಲಿಯೇ ವಿವಿಧ ಸಾಂಸ್ಕøತಿ, ಅಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇಯಾದ ವಿಶೇಷ ಮಹತ್ವ ಸ್ಥಾನ ಪಡೆದುಕೊಂಡಿದ್ದು. ಭಾರತ ದೇವಾಲಯಗಳ ತೋಟ್ಟಿಲು , ನಮ್ಮ ಪೂರ್ವಜರು ನಮಗೆ ಒಳ್ಳೇಯ ಸಂಸ್ಕಾರ ಹಾಗೂ ಧಾರ್ಮಿಕ ನಂಬಿಕೆಯಲ್ಲಿ ದಾರಿತೋರಿಸಿದ್ದಾರೆ. ಈ ದೇಶದಲ್ಲಿ ಸಂತ -ಮಹಾಂತರ, ದಾರ್ಶನಿಕರ ಪುಣ್ಯ ಪರುಷರು ಮಾನವ ಕುಲಕೋಟಿಗೆ ಹೃದಯವಂತರನ್ನಾಗಿಸಿದ್ದಾರೆ. ಹಬ್ಬ ಹರಿದಿನಗಳು ಜಾತ್ರೆಗಳು ಆಚರಣೆ ಮಾಡುವುದರಿಂದ್ದ ಪರಸ್ಪರ ಸಾಮರಸ್ಯ ಮೂಡುವದರೊಂದಿಗೆ ಮನುಜ ಮತ ವಿಶ್ವ-ಪಥ ಎಂಬ ಪರಿಕಲ್ಪನೆ ಜನರಲ್ಲಿ ಮೂಡುತ್ತದೆ. ಇಂದು ಜಾತ್ರೆಯಲ್ಲಿ ತಾಯಂದಿಯರು ಕುಂಬ ಮೇಳದಲ್ಲಿ ಭಾಗಿಯಾಗಿರುವದು ನೋಡಿದರೆ ರೋಮಾಂಚನ ಜೊತೆ ಭಕ್ತಿಯ ಪರಾಕಾಷ್ಟೆಯಲ್ಲಿ ಇಡೀ ನಾದ ಬಿ.ಕೆ ಗ್ರಾಮ ಮಿಂದೇದಂತೆ ಗೋಚರಿಸಿದೆ, ಬರದ ಛಾಯ ನಡುವೆ ಈ ಭಾಗದ ಜನರ ಭಕ್ತಿ ಕಡಿಮೆಯಾಗಿಲ್ಲ ಎಂದರೆ ತಪ್ಪಾಗದು . ಇಂದು ಬರ ಆವರಿಸಿದೆ ರೈತರು ಸಂಕಷ್ಟದಲ್ಲಿದ್ದಾರೆ ಸರಕಾರದ ಮಟ್ಟದಲ್ಲಿ ಪ್ರಮಾಣಿಕ ಪ್ರಯತ್ನಿಸುತ್ತೇನೆ. ಯಾವುದೇ ಸರಕಾರಗಳು ಎಷ್ಟೇ ಪ್ರಯತ್ನ ಮಾಡಿದರೂ ಅಸಾಧ್ಯೆ ದೇವರ ದಯೇ ಇರಬೇಕು. ಎಲ್ಲಾ ವರ್ಗಗಳಲ್ಲಿ ರೈತಾಪಿ ವರ್ಗ ತೊಂದರೆಯಲ್ಲಿದೆ ಮೇಘರಾಜ ಮುನಿಸಿಕೊಂಡಂತಾಗಿದೆ. ಭಗವಂತ ಇಡೀ ವಿಶ್ವದ ಮಾನವ ಕುಲಕೋಟಿಗೆ ಒಳ್ಳೇಯ ಆರೋಗ್ಯ ,ಸಂಪತ್ತು ಕರುಣಿಸಲಿ. ಮಳೆ ಬೆಳೆ ಸಮೃದ್ದಿಯಿಂದ ಬಂದು ರೈತರ ಬದುಕು ಒಳ್ಳೇಯದಾಗಲಿ, ಪೂಜ್ಯರ ಕೃಪಶೀವಾದ ಸದಾ ನಮ್ಮ ನಿಮ್ಮೇಲ್ಲರ ಮೇಲಿರಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿರಶ್ಯಾಡ ಶ್ರೀಮಠದ ಶ್ರೀ ಅಭಿನವ ಮುರುಘೇಂದ್ರ ಶಿವಾಚಾರ್ಯರು ಆರ್ಶೀವಚನ ನೀಡಿದರು.
ಗೋಳಸಾರ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ದಿವ್ಯಸಾನಿಧ್ಯವಹಿಸಿದರು.ಶಿವಾನಂದ ಶಿವಾಚಾರ್ಯರು ನಾದ ಬಿ.ಕೆ,
ಪ್ರವಚನ ಕೇಸರಿ ಡಾ.ಶಾಂತವೀರ ಶಿವಾಚಾರ್ಯರರು ಗಡಿಗೌಡಗಾಂವ್,ಚಂದ್ರಶೇಖರ ಶಿವಾಚಾರ್ಯರು ಆಲಮೇಲ ಸಾನಿಧ್ಯವಹಿಸಿದರು.

ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣಾ ಕೌಲಗಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೇಪ್ಪ ಚನಗೊಂಡ, ಹಣಮಂತರಾಯಗೌಡ ಪಾಟೀಲ, ನಾದ ಬಿಕೆ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಧರ್ಮರಾಜ .ಸಿ ಅವುಜಿ, ಕಾಸುಗೌಡ ಬಿರಾದಾರ, ವಿರಾಜ ಪಾಟೀಲ, ಗುರಲಿಂಗಪ್ಪಸಾಹುಕಾರ ತೆಗ್ಗೆಳ್ಳಿ, ಮಂಜುನಾಥ ವಂದಾಲ, ವಿರೇಂದ್ರ ಬಿ ಪಾಟೀಲ (ಹಲಸಂಗಿ) ಶರಣಗೌಡ ಬಂಡಿ(ರೋಡಗಿ) ಬಸುಗೌಡ ಬಿರಾದಾರ, ನಾದ ಶುಗರ್ಸ ಘಟಕ -02 ರ ಅಧ್ಯಕ್ಷ ರಾಜುಗೌಡ ಸಂಗಪ್ಪ ಕಡಪಟ್ಟಿ ವೇದಿಕೆಲ್ಲಿದ್ದರು.

ಗುರುರಾಜ ಬಿ ಲಾಳಸಂಗಿ ,ಸ್ವಾಗತಿಸಿ ,ನಿರೂಪಿಸಿ ,ಮಲ್ಲಕಣ್ಣಾಗೌಡ ಪಾಟೀಲ ವಂದಿಸಿದರು.