Home ಜಿಲ್ಲೆ ಕಲಬುರಗಿ ಯತಿರಾಜ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಯತಿರಾಜ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಅಫಜಲಪುರ : ತಾಲ್ಲೂಕಿನ ಶ್ರೀಕ್ಷೇತ್ರ ಗಾಣಗಾಪುರದ ಯತಿರಾಜ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 80ನೇ ಸ್ವತಂತ್ರೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಭೀಮರಾವ್ ಜ.ಚೌಡಾಪೂರಕರ್ ಮಾತನಾಡಿ, ಅನೇಕ ವೀರ ಯೋಧರು ಮಹಾನ್ ನಾಯಕರ ತ್ಯಾಗ ಬಲಿದಾನಗಳ ಮುಖಾಂತರ ನಮಗೆ ಸ್ವತಂತ್ರ ದೊರಕಿತು ಎಂದು ಹೇಳಿದರು. ಅನೇಕ ನಾಯಕರು ದೇಶಕ್ಕಾತಿ ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದರು ನೆನಪಿಸಿದರು. ನಂತರ ಯತಿರಾಜ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಈರಪ್ಪ ಅಣ್ಣಾರಾಯಗೌಡ ಪಾಟೀಲ್ ಅವರಿಗೆ ಸಂಸ್ಥೆಯವತಿಯಿಂದ ಬೀಳ್ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಋಷಿಕೇಶ್.ಅ. ಚೌಡಾಪೂರಕರ್, ಉಪಾಧ್ಯಕ್ಷ ನಾಗೇಶ್.ವಾ. ಪೂಜಾರಿ, ಕಾರ್ಯದರ್ಶಿ ಪ್ರಖ್ಯಾತ.ದ. ಪೂಜಾರಿ, ಖಜಾಂಚಿಯಾದ ರತ್ನಾಕರ.ಆರ್.ಪೂಜಾರಿ, ಸಂಸ್ಥೆಯ ಆಡಳಿತ ಅಧಿಕಾರಿ ಗೋವಿಂದರಾವ್. ಜ.ಚೌಡಾಪೂರಕರ್ ಮತ್ತು ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಭರತ್ ಎನ್ ಪೂಜಾರಿ, ದತ್ತಾತ್ರೇಯ ಪಿ ಪೂಜಾರಿ ಮತ್ತು ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರ ವಿಲಾಸ್ ಆರ್. ಪೂಜಾರಿ ಜೊತೆಗೆ ಶೇಷಗಿರಿರಾವ್ ಕುಲಕರ್ಣಿ, ನಾಗೇಶ್ ಕುಲಕರ್ಣಿ, ಚುಚೋಲ ಅರ್ಜುಣಗಿ, ಶಾಲೆಯ ದೈಹಿಕ ಶಿಕ್ಷಕರಾದ ರಾಜು ವಾಗ್ಮೊರೆ ಮತ್ತು ಸುಜಾತ ವಾಗ್ಮೊಡೆ, ಊರಿನ ಗಣ್ಯರು ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಚಟುವಟಿಕೆಗಳು ನೆರವೇರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಗೇಶ್ ಕುಲಕರ್ಣಿ ಅವರು 2025-26 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದಿರುವ ವಿದ್ಯಾರ್ಥಿಗಳಿಗೆ ವಿಶೇಷವಾದ ಬಹುಮಾನದ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಿದರು. ಸಂತೋμï ಶಂಡಿಗೆ ನಿರೂಪಿಸಿದರು. ಮುಖ್ಯ ಗುರುಗಳಾದ ಬಸವರಾಜ ಎಮ್. ಹಡಪದ ಮತ್ತು ವಿಕಾಸ ಜಿ.ಪಂಚಾಳ ತಿಳಿಸಿದ್ದಾರೆ.