
ಯಾದಗಿರಿ:ಜು.27: ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ನೀಡುವ ಸಂದೇಶಗಳು ದೇಶದ ಅಭಿವೃದ್ಧಿ ಮತ್ತು ಸಮಾಜದ ಉನ್ನತಿಗೆ ಮಾರ್ಗದರ್ಶಿಯಾಗಿದ್ದು, ಯುವಜನತೆ ಅವುಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಕರೆ ನೀಡಿದರು.
ತಾಲೂಕಿನ ಅಭಿಶಾಳ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಮಹಾದೇವರೆಡ್ಡಿ ಅವರ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 136ನೇ ‘ಮನ್ ಕಿ ಬಾತ್’ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಭಾರತದ ಪಾರಂಪರಿಕ ಸಂಗೀತ ಹಾಗೂ ಸಾಂಸ್ಕøತಿಕ ಕಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದೇಶದ ಜನತೆ ಉತ್ತೇಜನ ನೀಡಬೇಕು ಎಂಬ ಪ್ರಧಾನಿ ಮೋದಿ ಅವರ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಪ್ರಧಾನಿ ಮೋದಿ ಸ್ಮರಿಸಿರುವುದನ್ನು ಉಲ್ಲೇಖಿಸಿದ ಅವರು, ಯುವಕರು ಕಲಾಂ ಅವರ ಸರಳತೆ, ಶಿಸ್ತು ಮತ್ತು ದೇಶಸೇವೆಯ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಗಸ್ಟ್ 15ರ ಸ್ವಾತಂತ್ರ್ಯೋತ್ಸವವು ದೇಶಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹನೀಯರ ಸ್ಮರಣೆಯ ದಿನವಾಗಿದೆ. ಪ್ರಧಾನಿ ಮೋದಿ ಅವರ ಕರೆಯಂತೆ ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸಬೇಕು ಎಂದು ಮುದ್ನಾಳ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾದೇವರೆಡ್ಡಿ ಗೌಡ, ಶರಣುಗೌಡ ಅಥಿತಿ ಪಾಟೀಲ್, ಅಮ್ಮಣಗೌಡ ಅನುಸೂಗುರು, ದೇವು ಮುತ್ಯಾ, ಸಂತೋಷಗೌಡ ಹಿಟಿಗಿ, ದುರ್ಗುಪ್ಪ ಅರಿಜನ್, ದರೇಶ್ ಚಪ್ಪರಮನಿ, ಚಂದ್ರಮ್ಮ ಅರಿಜನ್, ಭಾಷಾ ನಡಲಮನಿ, ನಾಭಿಸಾಬ್ ದೊಡ್ಡಮನಿ, ಸೈದಾಪ್ಪ ನಾಟೇಕಾರ, ಚಾಂದ್‍ಸಾಬ್ ದೊಡ್ಡಮನಿ, ಮುನ್ನಾಬಾಯಿ, ಅಮೀನರೆಡ್ಡಿ ಕದರಪೂರ್, ಶಶಿಕುಮಾರ್ ಸೂಗುರ, ದೇವದ್ರಯ್ಯ ಸ್ವಾಮಿ, ಶರಣಪ್ಪ ಪೂಜಾರಿ, ಜಲಾಲ್‍ಸಾಬ್ ಮಮ್ಮಣಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.































