Home ಜಿಲ್ಲೆ ತಾಲೂಕಾಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟನೆ

ತಾಲೂಕಾಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟನೆ

ಬಾದಾಮಿ,ಆ೪: ನಮಗೆ ಜೀವಿಸಲು ಭೂಮಿ ಸಂರಕ್ಷಣೆ ಅತ್ಯಗತ್ಯವಾಗಿ ನಮ್ಮ ಜೀವನ ಕ್ರಮ ವನ್ನು ಬದಲಿಸಿಕೊಂಡು ಜೀವ ಜಲ ನೀರನ್ನು ಮಿತವಾಗಿ ಬಳಸುವಲ್ಲಿ ಯುವಕರ ಪಾತ್ರ ಮಹತ್ತರವಾದುದು ವಿದ್ಯಾರ್ಥಿ ಜೀವನದಿಂದಲೇ ನಮ್ಮ ಭೂಮಿ, ನಮ್ಮ ನೀರು ನಮ್ಮ ಶಕ್ತಿಯನ್ನು ಸದ್ವಿನಿಯೋಗ ಮಾಡಿಕೊಳ್ಳಲು ಪ್ರೇರಣೆ ನೀಡಲು ಇಂತಹ ಕಾರ್ಯಕ್ರಮಗಳು ಅನುಕೂಲಕರ ಎಂದು ಬಾದಾಮಿ ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಹೇಳಿದರು.


ಅವರು ನಗರದ ಶಾಸಕರ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕಾಮಟ್ಟದ ಚಿತ್ರ ಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.


ಜಿಲ್ಲಾ ಅಂತರ್ಜಲ ಕಚೇರಿ ಹಾಗೂ ನಿರಾಣಿ ಶುಗರ್ಸ್ ಲಿಮಿಟೆಡ್ ಘಟಕ -೫ ಹಾಗೂ ಶಾಲಾ ಶಿಕ್ಷಣ ಇಲಾಖೆ, ಬಾದಾಮಿ ಇವರ ಸಹಯೋಗದಲ್ಲಿ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ. ಬಾದಾಮಿ ಇಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.


ಮಕ್ಕಳು ವಿ?Àಯಕ್ಕೆ ಅನುಗುಣವಾಗಿ ಚಿತ್ರವನ್ನು ಸ್ಮರಣೆಯಿಂದ ಬಿಡಿಸಿ ವಿಜೇತರಾಗುವಂತೆ ಶುಭಾಶಯಗಳನ್ನು ತಿಳಿಸಿದರು. ಪ್ರಶಸ್ತಿಯನ್ನು ತಾಲೂಕು ಹಂತದ ಸ್ವಾತಂತ್ರ‍್ಯ ದಿನಾಚರಣೆಯ ಸಮಯದಲ್ಲಿ ಪ್ರಥಮ-೫೦೦೧ ದ್ವಿತೀಯ :-೨೦೦೧ ತೃತೀಯ -೧೦೦೧ ನಗದು ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಸಹಾಯಕ ವ್ಯವಸ್ಥಾಪಕ ಎಚ್.ಯು.ಮಜ್ಜಗಿ ಇವರು ತಿಳಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಬಿ.ಟಿ.ಹಳ್ಳಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿ ಬಿ ಎಚ್ ಹಳಗೇರಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ ಬಡಿಗೇರ ನಿರ್ಣಾಯಕರಾದ ಕೇಶವ ರಾಠೋಡ್, ವಿ ಎನ್ ಪಕಾಲಿ, ಕೇಶವ ರಘುವೀರ ಚಿತ್ರ ಕಲಾ ಶಿಕ್ಷಕರು ಉಪಸ್ಥಿತರಿದ್ದರು.