Home ಜಿಲ್ಲೆ ಮನುಷ್ಯ ಜನ್ಮ ಪರಮಾತ್ಮನ ಅಮೂಲ್ಯ ದೇಣಿಗೆ: ಡಾ.ಕೈಲಾಸನಾಥ ಶ್ರೀಗಳು

ಮನುಷ್ಯ ಜನ್ಮ ಪರಮಾತ್ಮನ ಅಮೂಲ್ಯ ದೇಣಿಗೆ: ಡಾ.ಕೈಲಾಸನಾಥ ಶ್ರೀಗಳು

ಕೊಲ್ಹಾರ:ಮೇ.20: ಪಟ್ಟಣದ ಶೀಲವಂತಹಿರೇಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ನಡೆದ ಕೋಟಿ ಜಪಾನುಷ್ಠಾಣ ಇಂದು 4 ನೇ ದಿನ ನಸುಕಿನ 2 ಗಂಟೆ 21 ನಿಮಿಷದಿಂದ ಪ್ರಾರಂಭವಾದ ಇಷ್ಠಲಿಂಗ ಪೂಜಾ ಬೆಳಗಿನ 8 ಗಂಟೆಗೆ ಶ್ರೀ ಘಣ ಮಹಿಮ ಪೂರ್ಣಜ್ಞ ಧರ್ಮರತ್ನ ಭಾರತ ಭೂಷಣ ಡಾ.ಕೈಲಾಸನಾಥ ಮಹಾಸ್ವಾಮಿಗಳವರು ಮಂಗಳಾರತಿ ನೆರವೇರಿಸಿ ಆಸಿರ್ವಚನ ದಯಪಾಲಿಸಿದರು, ಮನುಷ್ಯ ಜನ್ಮ ಪರಮಾತ್ಮ ಕೊಟ್ಟ ದೇಣಿಗೆ ಇರುವಷ್ಟು ದಿನ ಸಾತ್ವಿಕ ಜೀವನ ನಡೆಸಿ ಸಾರ್ಥಕತೆಯಿಂದ ಬಾಳಬೇಕು,ಬೆಕ್ಕು ದಾರಿಗೆ ಅಡ್ಡ ಬಂದರೆ ಅಪಶಕುನವಾದರೆ ನಡಯುವ ದಾರಿಗೆ ಅಡ್ಡಲಾಗಿ ನಿಂತ ದುರಹಂಕಾರ ದುರಭಿಮಾನ ತುಂಬಿದ ಮನುಷ್ಯ ಆ ಬೆಕ್ಕಿನಕಿಂತಲೂ ಕನಿಷ್ಟನಾಗುತ್ತಾನೆ,”ದುರಾಭಿಮಾನ ದುರಂಹಕಾರ ಮನುಷ್ಯನ ಅವನತಿಗೆ ಕಾರಣ” ಸರ್ವರು ಸಾತ್ವಿಕ ಸಹಕಾರ ಜೀವನ ನಡಸೇಕೆಂದು ಕಿವಿ ಮಾತು ಹೇಳಿದರು.