Home ಜಿಲ್ಲೆ ಹೊಳಸಮುದ್ರ; ತಮ್ಮದೇ ಜಮೀನಿಗೆ ಹೋಗಲು ರಸ್ತೆಯಿಲ್ಲದೆ ರೈತರ ಗೋಳಾಟ ತಹಶೀಲ್ದಾರಗೆ ದೂರು

ಹೊಳಸಮುದ್ರ; ತಮ್ಮದೇ ಜಮೀನಿಗೆ ಹೋಗಲು ರಸ್ತೆಯಿಲ್ಲದೆ ರೈತರ ಗೋಳಾಟ ತಹಶೀಲ್ದಾರಗೆ ದೂರು

ಸಂಜೆ ವಾಣಿ ವಾರ್ತಾ:
ಕಮಲನಗರ:ಜು.೨: ತಾಲೂಕಿನ ಹೊಳಸಮುದ್ರ ಗ್ರಾಮದ ರೈತರು ತಮ್ಮದೇ ಜಮೀನಿಗೆ ಹೋಗಲು ರಸ್ತೆಯಿಲ್ಲದೆ ಪರದಾಡುತ್ತಿರುವ ರೈತರ ಗೋಳಾಟ ಕೇಳುವವರಿಲ್ಲ ಎಂದು ಆರೋಪಿಸಿ ಪಿಂಟು ಎಕಲಾರೆ, ಮಾಧವರಾವ ಸಿರಗಿರೆ, ರಾಮ ಪಾಟೀಲ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ತಹಶೀಲ್ದಾರ್ ಅವರಿಗೆ ಬರೆದ ಪತ್ರ ಪ್ರವೀಣ ಬಿರಾದರ ಅವರಿಗೆ ಸಲ್ಲಿಸಲಾಯಿತು.

ರೈತ ಪ್ರಭು ಸಿರಗಿರೆ ಮಾತನಾಡಿ, ಹೊಳಸಮುದ್ರ ಗ್ರಾಮದ ಸರ್ವೇ ನಂಬರ್ ೧೧, ೧೮೦, ೧೮೩ ಹಾಗೂ ೧೭೯ ಹೋಗುವ ದಾರಿಯನ್ನು ವೆಂಕಟ ಲಕ್ಷ್ಮಣ ಎರೋಳೆ, ವೆಂಕಟ ಹಣಮಂತ ಶಿಬಾರೆ ಮತ್ತು ನೀಲಕಂಠ ವಿಠ್ಠಲ ಎರೋಳೆ ಅವರುಗಳು ರೈತರು ತಮ್ಮ ಜಮೀನಿಗೆ ಹಾದುಹೋಗುವ ರಸ್ತೆಗೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದು. ಸದ್ಯ ಜಮೀನಿಗೆ ಹೋಗಲು ರಸ್ತೆಯಿಲ್ಲದೆ ಪರದಾಡುವಂತೆ ಮಾಡಿದೆ ಎಂದು ದೂರಿದ್ದರು.

ರೈತರಿಗೆ ಇದೀಗ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಜಮೀನಿಗೆ ಹೋಗಲು ರಸ್ತೆಯಿಲ್ಲದಂತಾಗಿದೆ. ಮೊದಲು ಅವಕಾಶ ನೀಡುತ್ತಿದ್ದ ರೈತರು ಇದೀಗ ರಸ್ತೆ ಬಂದ್ ಮಾಡಿದ್ದು, ಎತ್ತುಗಳಿರಲಿ ಮನುಷ್ಯರೇ ಬೈ???ನಲ್ಲಿ ಹೋಗುವುದು ಕಷ್ಟವಾಗಿದೆ. ಇದರಿಂದ ೧೫ರಿಂದ ೨೦ ಜನರ ಜಮೀನುಗಳಿಗೆ ರಸ್ತೆಯಿಲ್ಲದೆ ಹೋಗಲು ತೊಂದರೆ ಅನುಭವಿಸುವಂತೆ ಮಾಡಿದೆ. ಹಲವೂ ಬಾರಿ ತಿಳಿಸಿದರೂ ಯಾವುದೇ ರಿತಿ ಸಹಕಾರ ನೀಡುತ್ತೀಲ್ಲ ಎಂದರು.

ಹೀಗಾಗಿ, ತಾವು ಸ್ಥಳ ಪರಿಶಿಲನೆ ನಡೆಸಿ ಸರ್ವೇ ನಂಬರ್ ೧೧, ೧೮೦, ೧೮೩ ಹಾಗೂ ೧೭೯ ಜಮೀನುಗಳಿಗೆ ಹೋಗಲು ಅನುವುಮಾಡಿಕೊಂಡುವAತೆ ಕಾನೂನು ಬದ್ಧ ಕ್ರಮವನ್ನು ಕೈಗೊಂಡು, ಮುಂದಿನ ದಿನಗಳಲ್ಲಿ ಸಹ ಅಡ್ಡಿಪಡಿಸದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಮ ಪಾಟೀಲ, ಪಿಂಟು ಎಕಲಾರೆ, ನಾಗೇಶ ಎಕಲಾರೆ, ಮಾಧವರಾವ ಶಿರಗಿರೆ, ಹೌಗಿ ಬಸವರಾಜ ಶಿರಗಿರೆ, ಸಂಜು ಎರೋಳೆ, ರಾಜಕುಮಾರ ಎರೋಳೆ, ಅಜಯ ಪಾಟೀಲ, ಸಂದೀಪ ಕಲ್ಯಾಣೆ, ಮಲಶೇಟ್ಟಿ ಎರೋಳೆ, ಧನಾಜಿ ಎರೋಳೆ, ರಾಮಚಂದ್ರ ಗಾಯಕವಾಡ, ಜ್ಞಾನೋಬಾ ಶಿಬಾರೆ, ತುಕಾರಾಮ ಶಿಬಾರೆ ಹಾಗೂ ಪ್ರಮುಖ ಗಣ್ಯರು ಇದ್ದರು