Home ಕ್ರೈಂ ಸುದ್ದಿಗಳು ಹಿಪ್ಪರಗಿ ಕಾರು ಸ್ಫೋಟ ಪ್ರಕರಣ: ನಾಲ್ವರು ಆರೋಪಿಗಳ ಬಂಧನ: ಎಸ್ಪಿ ಸಿದ್ದಾರ್ಥ ಗೋಯಲ್40 ಲಕ್ಷ ಸಾಲದ...

ಹಿಪ್ಪರಗಿ ಕಾರು ಸ್ಫೋಟ ಪ್ರಕರಣ: ನಾಲ್ವರು ಆರೋಪಿಗಳ ಬಂಧನ: ಎಸ್ಪಿ ಸಿದ್ದಾರ್ಥ ಗೋಯಲ್40 ಲಕ್ಷ ಸಾಲದ ಹಣಕ್ಕಾಗಿ ಕೊಲೆ ಸ್ಕೆಚ್; ಸ್ಫೋಟಕ ವಸ್ತುಗಳ ವಶ

ಜಮಖಂಡಿ: ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಯುವರಾಜ ವೈನ್ ಅಂಗಡಿ ಎದುರು ಮಹೀಂದ್ರಾ ಘಿUಗಿ300 ಕಾರಿನಲ್ಲಿ ನಡೆದ ಸ್ಫೋಟ ಪ್ರಕರಣವನ್ನು ಜಮಖಂಡಿ ಗ್ರಾಮೀಣ ಪೆÇಲೀಸರು ಭೇದಿಸಿದ್ದು, ಕೊಲೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ವಿರುದ್ಧವೂ ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ. ಕಾರು ಸ್ಫೋಟದ ಬಳಿಕ ಬಾಂಬ್ ಸ್ಫೋಟದ ಶಂಕೆ ವ್ಯಕ್ತವಾಗಿದ್ದು, ಪೆÇಲೀಸರು ತನಿಖೆ ತೀವ್ರಗೊಳಿಸಿದ್ದರು.
ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಪ್ರಕರಣದ ತನಿಖೆಯ ವಿವರಗಳನ್ನು ನೀಡಿದರು.
ಹಿಪ್ಪರಗಿ ಗ್ರಾಮದ ಯುವರಾಜ ವೈನ್ ಅಂಗಡಿಯನ್ನು ನಿರ್ವಹಿಸುತ್ತಿದ್ದ ಹನುಮಂತ್ ಅಥಣಿ ಅವರ ಮಹೀಂದ್ರಾ ಘಿUಗಿ300 ಕಾರು ಕಳೆದ ತಿಂಗಳ 25ರಂದು ರಾತ್ರಿ ಸುಮಾರು 10.30ರಿಂದ 10.40ರ ವೇಳೆಯಲ್ಲಿ ಸ್ಫೋಟಗೊಂಡಿತ್ತು. ಘಟನೆಯ ಮಾಹಿತಿ ದೊರೆತ ತಕ್ಷಣ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಸ್ಫೋಟದ ಹಿಂದೆ ಯಾರಿದ್ದಾರೆ, ಯಾವ ಕಾರಣಕ್ಕಾಗಿ ಹನುಮಂತ್ ಅಥಣಿ ಅವರನ್ನು ಗುರಿಯಾಗಿಸಲಾಗಿದೆ ಹಾಗೂ ಸ್ಫೋಟಕವನ್ನು ಹೇಗೆ ಅಳವಡಿಸಲಾಗಿದೆ ಎಂಬ ಮೂರು ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ಡಿವೈಎಸ್‍ಪಿ ಸಯ್ಯದ್ ರೋಷನ್ ಜಮೀರ್ ಹಾಗೂ ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದ ತಂಡ ತನಿಖೆ ನಡೆಸಿತು ಎಂದು ಎಸ್‍ಪಿ ಸಿದ್ದಾರ್ಥ ಗೋಯಲ್ ತಿಳಿಸಿದರು.
?40 ಲಕ್ಷ ಸಾಲವೇ ಕೊಲೆ ಸಂಚಿಗೆ ಕಾರಣ?
ತನಿಖೆಯಲ್ಲಿ ಪ್ರಮುಖ ಆರೋಪಿಗಳಾದ ಶಿವಾನಂದ್ ಜಾಲಿ (29) ಹಾಗೂ ರೇವಣಸಿದ್ದನ ಜಾಲಿ (24) ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನವರು ಎಂದು ಗುರುತಿಸಲಾಗಿದೆ.
ಶಿವಾನಂದ್ ಜಾಲಿ ಅವರ ದೊಡ್ಡಪ್ಪ ನಿಂಗಪ್ಪ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ತುರ್ತು ಅಗತ್ಯಕ್ಕಾಗಿ ಹನುಮಂತ್ ಅಥಣಿ ಅವರಿಂದ ?40 ಲಕ್ಷ ಸಾಲ ಪಡೆದಿದ್ದರು. ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಮಾರು ಐದು ಎಕರೆ ಜಮೀನು ಹನುಮಂತ್ ಅಥಣಿ ಅವರ ಹೆಸರಿಗೆ ವರ್ಗಾವಣೆಯಾಗಿತ್ತು ಎಂದು ಎಸ್‍ಪಿ ತಿಳಿಸಿದ್ದಾರೆ.
ನಂತರ ಜಮೀನು ಮರಳಿ ಪಡೆಯಲು ಶಿವಾನಂದ್ ಜಾಲಿ ಹಾಗೂ ಹನುಮಂತ್ ಅಥಣಿ ನಡುವೆ ಹಣಕಾಸಿನ ವ್ಯವಹಾರ ನಡೆದಿದ್ದು, ಬಡ್ಡಿ ಸೇರಿ ಸುಮಾರು ?62 ಲಕ್ಷ ಹಣವನ್ನು ಹಂತ ಹಂತವಾಗಿ ಮರುಪಾವತಿಸುವ ಒಪ್ಪಂದವಾಗಿತ್ತು. ಹಣ ಪಾವತಿಸುವ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಹನುಮಂತ್ ಅಥಣಿ ಅವರನ್ನು ಗುರಿಯಾಗಿಸಿಕೊಂಡು ಕೊಲೆ ಸಂಚು ರೂಪಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್‍ಪಿ ಹೇಳಿದ್ದಾರೆ.
ಕಾರಿನ ಕೆಳಗೆ ಸ್ಫೋಟಕ ಅಳವಡಿಕೆ
ಆರೋಪಿಗಳು ಹನುಮಂತ್ ಅಥಣಿ ಪ್ರತಿದಿನ ವೈನ್ ಅಂಗಡಿಗೆ ಬರುವ ಮತ್ತು ತೆರಳುವ ಸಮಯವನ್ನು ಗಮನಿಸಿದ್ದರು. ಘಟನೆಯ ದಿನ ಆರೋಪಿಗಳು ಟಿವಿಎಸ್ ಸ್ಕೂಟಿ ವಾಹನದಲ್ಲಿ ಹಿಪ್ಪರಗಿಗೆ ತೆರಳಿ, ಸಿಸಿಟಿವಿ ಕ್ಯಾಮೆರಾಗಳನ್ನು ತಪ್ಪಿಸಿ ಕಬ್ಬಿನ ತೋಟದ ಮಾರ್ಗವಾಗಿ ಬಂದು, ಹನುಮಂತ್ ಅಥಣಿ ಅವರ ಕಾರಿನ ಎಡಭಾಗದ ಚಕ್ರದ ಕೆಳಗೆ ಸ್ಫೋಟಕ ಅಳವಡಿಸಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಕಾರಿನಿಂದ ಹನುಮಂತ್ ಅಥಣಿ ಹೊರಬಂದ ಕೆಲವೇ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆ ಬಳಿಕ ಆರೋಪಿಗಳು ತಮ್ಮ ಯೋಜನೆ ವಿಫಲವಾಗಿರುವುದು ತಿಳಿದು ಮತ್ತೊಂದು ರೀತಿಯಲ್ಲಿ ಬೆದರಿಕೆ ಹಾಕಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಮೆಸೇಜ್ ಮೂಲಕ ಬೆದರಿಕೆ
ಕೊಲೆ ಯತ್ನ ವಿಫಲವಾದ ಬಳಿಕ ಆರೋಪಿಗಳು ಹೊಸ ಮೊಬೈಲ್ ಸಂಖ್ಯೆ ಹಾಗೂ ಫೆÇೀನ್ ಬಳಸಿ ಹನುಮಂತ್ ಅಥಣಿಗೆ ಬೆದರಿಕೆ ಸಂದೇಶ ಕಳುಹಿಸಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಈ ಸಂದೇಶದ ನಂಬರ್‍ನಿಂದ ತನಿಖೆಗೆ ಪ್ರಮುಖ ಸುಳಿವು ದೊರೆತಿದ್ದು, ಮೊಬೈಲ್ ಹಾಗೂ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೆÇಲೀಸರು ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿದ್ದಾರೆ.
ಆರೋಪಿಗಳು ಮೊಬೈಲ್ ಬಳಕೆಯಲ್ಲೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು. ತಮ್ಮ ಮನೆಯಲ್ಲಿ ಫೆÇೀನ್ ಸ್ವಿಚ್ ಆಫ್ ಮಾಡಿ ಬೇರೆ ಪ್ರದೇಶಕ್ಕೆ ತೆರಳಿ ಹೊಸ ಸಿಮ್ ಹಾಗೂ ಫೆÇೀನ್ ಬಳಸುತ್ತಿದ್ದರು. ಸಿಸಿಟಿವಿ ಇಲ್ಲದ ಸ್ಥಳಗಳಲ್ಲಿ ಮೊಬೈಲ್ ಖರೀದಿಸಿ, ಬೇರೆ ಊರಿಗೆ ತೆರಳಿ ಸಿಮ್ ಅಳವಡಿಸಿಕೊಂಡು ಸಂದೇಶ ಕಳುಹಿಸುತ್ತಿದ್ದರು ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.
ಸ್ಫೋಟಕ ವಸ್ತುಗಳು ಪತ್ತೆ
ತನಿಖೆಯ ವೇಳೆ ಆರೋಪಿಗಳ ಮನೆಯಲ್ಲಿ ಬಳಕೆಯಾಗದೆ ಉಳಿದಿದ್ದ ಸ್ಫೋಟಕ ವಸ್ತುಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ದೊಡ್ಡ ಪ್ರಮಾಣದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.
ಸ್ಫೋಟಕ ವಸ್ತುಗಳ ಖರೀದಿ, ಆರೋಪಿಗಳ ಮೊಬೈಲ್ ಚಲನವಲನ, ಸಿಸಿಟಿವಿ ದೃಶ್ಯಗಳು ಹಾಗೂ ಟವರ್ ಡಂಪ್ ಅನಾಲಿಸಿಸ್ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ.
ನಾಲ್ವರು ಆರೋಪಿಗಳ ಬಂಧನ
ಪ್ರಕರಣದಲ್ಲಿ ಶಿವಾನಂದ್ ಜಾಲಿ ಹಾಗೂ ರೇವಣಸಿದ್ದನ ಜಾಲಿ ಪ್ರಮುಖ ಆರೋಪಿಗಳಾಗಿದ್ದು, ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಮಾದನ ಬೀರಪ್ಪ ಸಂಗಾಪುರ ಹಾಗೂ ಮಲ್ಲಿಕಾರ್ಜುನ ಎಂಬವರನ್ನೂ ಬಂಧಿಸಲಾಗಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸ್ಫೋಟಕ ವಸ್ತುಗಳನ್ನು ಪೂರೈಸಿದ ಆರೋಪದ ಹಿನ್ನೆಲೆಯಲ್ಲಿ ಎರಡು ಅಂಗಡಿಗಳ ಮಾಲೀಕರು/ನಿರ್ವಹಣಾಕಾರರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
20 ದಿನಗಳ ನಿರಂತರ ತನಿಖೆ
ಪ್ರಕರಣ ಭೇದಿಸಲು ಡಿವೈಎಸ್‍ಪಿ ಸಯ್ಯದ್ ರೋಷನ್ ಜಮೀರ್, ಹೆಚ್ಚುವರಿ ಎಸ್‍ಪಿ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‍ಐ ಗಂಗಾಧರ ಪೂಜೇರಿ, ಶಿವಾನಂದ ಸಿಂಗನ್ನವರ, ಅಪ್ಪಣ್ಣ ಐಗಳಿ ಹಾಗೂ ಅಪರಾಧ ವಿಭಾಗದ ಪಿಎಸ್‍ಐ ವಾಲೇಕಾರ ಸೇರಿದಂತೆ ವಿವಿಧ ತಂಡಗಳು ಸುಮಾರು 20 ದಿನಗಳ ಕಾಲ ಹಗಲು-ರಾತ್ರಿ ಶ್ರಮಿಸಿವೆ.
ಎಫ್‍ಎಸ್‍ಎಲ್, ಸೂಕೋ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸೇರಿದಂತೆ ತಾಂತ್ರಿಕ ತಂಡಗಳ ಸಹಕಾರ ಪಡೆಯಲಾಗಿದೆ ಎಂದು ಎಸ್‍ಪಿ ಸಿದ್ದಾರ್ಥ ಗೋಯಲ್ ತಿಳಿಸಿದರು.
ಪ್ರಕರಣವನ್ನು ಭೇದಿಸುವಲ್ಲಿ ಪೆÇಲೀಸರು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡದಂತೆ ಶೀಘ್ರವಾಗಿ ಆರೋಪಿಗಳನ್ನು ಪತ್ತೆಹಚ್ಚುವುದು ಪ್ರಮುಖ ಉದ್ದೇಶವಾಗಿತ್ತು. ತನಿಖೆಯಲ್ಲಿ ಸಹಕರಿಸಿದ ಎಲ್ಲ ಪೆÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಎಸ್‍ಪಿ ಶ್ಲಾಘಿಸಿ, ಪ್ರಶಂಸಾಪತ್ರ ನೀಡಿ ಗೌರವಿಸಿದರು.