
ಕಾಳಗಿ : ಜಾತಿ-ಜಾತಿಗಳ ನಡುವೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಕಲಬುರಗಿ ನಗರದಲ್ಲಿ ಸೆ.27ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಲಾಗಿದೆ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.
ಪಟ್ಟಣದ ಶಿವಬಸವ ಹಿರೇಮಠದಲ್ಲಿ ರವಿವಾರ ಸಮಾವೇಶದ ನಿಮಿತ್ತ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ ಕನ್ಹೇರಿಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ಸಾನ್ನಿಧ್ಯ ಹಾಗೂ ಚಂದು ಪಾಟೀಲರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಅಖಂಡ ಹಿಂದೂ ಸಮಾಜದ ಎಲ್ಲ ಜಾತಿ-ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ಬಸವಾದಿ ಶಿವಶರಣರ ತತ್ವಗಳನ್ನು ಸಾರುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಕಲಬುರಗಿ ನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ ಸಮಾವೇಶದ ಅಂಗವಾಗಿ ಶಿವಶರಣರ ಭಾವಚಿತ್ರಗಳೊಂದಿಗೆ ಭವ್ಯ ಮೆರವಣಿಗೆಯನ್ನು ಕಲಬುರಗಿ ನಗರದ ಜಗತ್ ವೃತ್ತದಿಂದ ನೂತನ ವಿದ್ಯಾಲಯ ಮೈದಾನದವರೆಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾಲಯದ ಆವರಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಈ ಸಮಾವೇಶವು ಯಾವುದೇ ಸಮಾಜ, ಜಾತಿ ಅಥವಾ ಸಮುದಾಯದ ವಿರುದ್ಧವಾಗಿ ಆಯೋಜಿಸಲಾಗುತ್ತಿಲ್ಲ. ಬದಲಾಗಿ ಸಮಾಜದಲ್ಲಿ ಸೌಹಾರ್ದ, ಸಮಾನತೆ, ಒಗ್ಗಟ್ಟು ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಉದ್ದೇಶದಿಂದ ಎಲ್ಲರನ್ನು ಒಳಗೊಂಡು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪೂಜ್ಯ ಶ್ರೀ ನೀಲಕಂಠ ಮರೀದೇವರು, ರವಿರಾಜ ಕೊರವಿ, ವಿಜಯಕುಮಾರ ಚೇಂಗಟಿ, ಶಿವಶರಣಪ್ಪ ಕಮಲಾಪುರ, ಪ್ರಶಾಂತ ಕದಂ, ಶಿವಕುಮಾರ ಕಮಲಾಪುರ ಜಗದೀಶ ಪಾಟೀಲ, ಪುರುಷೋತ್ತಮ ಗುತ್ತೇದಾರ, ರಮೇಶ ಕಿಟ್ಟದ, ಮಲ್ಲಿನಾಥ ಪಾಟೀಲ ಕೋಲಕುಂದಿ, ಮಲ್ಲಿನಾಥ ಪಾಟೀಲ ಕಾಳಗಿ, ಶೇಖರ ಪಾಟೀಲ, ನಾಗರಾಜ ಕೇಶ್ವರ, ಕಾಳಪ್ಪ ಕರೆಮನೋರ, ರಾಜು ಸೀಳಿನ್, ಜಗನ್ನಾಥ ತೇಲಿ, ಶಿವಕುಮಾರ ಕಮಕನೂರ,ಗಣೇಶ ಸಿಂಗಶೆಟ್ಟಿ, ರಾಜು ಗುಡದಾ, ಚಂದ್ರಶೇಖರ ಮಾನಶೆಟ್ಟಿ, ಶಂಕರ ಚೋಕಾ, ನಾಗರಾಜ ಪಾಟೀಲ, ಸುಂದರ ಸಾಗರ, ಮಹೇಂದ್ರ ಪೂಜಾರಿ, ಇಂದ್ರಜೀತ ಕಟ್ಟಿಮನಿ, ಶಿವಕುಮಾರ ಪಾಟೀಲ ಅರಣಕಲ್, ಮಲ್ಲಿಕಾರ್ಜುನ ಸಿಂಗೆ, ರಾಜು ಜಾಧವ, ಸುನಿಲ ರಾಜಾಪುರ, ತಿಮ್ಮಯ್ಯ ಒಡೆಯರಾಜ, ಈಸು ಪಾಟೀಲ, ಲಕ್ಷ್ಮಣ ಭೋವಿ, ಹಣಮಂತ ಒಡೆಯರಾಜ ಸೇರಿದಂತೆ ಅನೇಕರಿದ್ದರು.































