
ಗದಗ, ಜು. ೩೧: ದಿ: ೨೯.೦೭.೨೦೨೬ ರಂದು ವಿಶ್ವ ಮೆದುಳು ದಿನಾಚರಣೆಯ ದಿನದ ಅಂಗವಾಗಿ “ಜೀವನ ಸಂಧ್ಯಾ ಸುಖಾಲಯ” ವೃದ್ಧಾಶ್ರಮ ಗದಗದಲ್ಲಿ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕುಷ್ಟರೋಗ ನಿರ್ಮೂಲನ ಅಧಿಕಾರಿಗಳು ಮತ್ತು ಕಬಿ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳು ಆದ ಡಾ. ಜಿ.ಎಸ್.ಪಲ್ಲೆದ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ವಿಶ್ವ ಮೆದುಳು ಆರೋಗ್ಯ ದಿನಾಚರಣೆ ಬಗ್ಗೆ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ, (ಕಭಿ) ಕಾರ್ಯಕ್ರಮದ ಸೇವೆಗಳ ಬಗ್ಗೆ ಮಾಹಿತಿ ನೀಡಿ ಮತ್ತು ಕಾರ್ಯಕ್ರಮದ ಸದುಪಯೋಗವನ್ನು ಪಡೆಸಿಕೊಳ್ಳಬೇಕೆಂದು ತಿಳಿಸಿದರು.
ಕಭಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕರು ಪ್ರವೀಣ ಎಸ್ ರೋಣದರವರು ಕಾರ್ಯಕ್ರಮದ ಉದ್ದೇಶ, ತಂಡದ, ಗುರಿಗಳ ಬಗ್ಗೆ ತಿಳಿಸಿದರು ಮತ್ತು ಈ ಕಾರ್ಯಕ್ರಮದ ಡಾ|| ಅಶ್ವಿನಿ ಎಂ ಕುರಿಯವರ ಫಿಜಿಯೋಥೆರಪಿಸ್ಟ್ ರವರು ಆರೋಗ್ಯಕರ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲು ವಯಸ್ಸಾದ ಜನರು ನಿಯಮಿತವಾಗಿ ಮೂಲಭೂತ ವ್ಯಾಯಾಮಗಳನ್ನು ಮಾಡಬಹುದೆಂದು ಪ್ರದರ್ಶಿಸಿದರು ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು ಆದಂತಹ ಶ್ರೀಯುತ ರೂಪೇಶ್ ಚವಾಣ್ ಅವರು ಮೆದುಳಿನ ರೋಗಲಕ್ಷಣಗಳ ಬಗ್ಗೆ ತಿಳಿಸಿದರು, ವಾಹನ ಚಲಿಸುವಾಗ ತೆಲೆಗೆ ಹೆಲ್ಮೆಟು ಕಡ್ಡಾಯವಾಗಿ ಧರಿಸಬೇಕು, ಮತ್ತು ಜೀವನದ ಒತ್ತಡ ಶೈಲಿಯನ್ನು ಹೇಗೆ ಕಡಿಮೆ ಮಾಡಿಕೊಂಡು ಆರೋಗ್ಯದಿಂದಿರಬೇಕೆAದು ಮಾಹಿತಿ ತಿಳಿಸಿದರು,
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಆದ ಸಂಗಪ್ಪ ಬಿ ಬೆನ್ನೂರು ರವರು ಮತ್ತು “ಜೀವನ ಸಂಧ್ಯಾ ಸುಖಾಲಯ” ವೃದ್ಧಾಶ್ರಮದ ಟ್ರಸ್ಟ÷್ನ ಸದಸ್ಯರು ಉಪಸ್ಥಿತರಿದ್ದರು ಹಾಗೂ ವೃದ್ಧಾಶ್ರಮದ ವಯೋವೃದ್ಧರಿಗೆ ಕಬಿ ಕಾರ್ಯಕ್ರಮದ ನರ್ಸಿಂಗ್ ಸಿಬ್ಬಂದಿ ರವಿ ಎಸ್ ನಂದ್ಯಾಳ್ ಮತ್ತು ವೈ ಆರ್ ನದಾಫ್ ಎನ್.ಸಿ.ಡಿ ಸಿಬ್ಬಂದಿ ಪ್ರಯೋಗ ಶಾಲಾ ತಂತ್ರಜ್ಞರು ವೃದ್ಧಾಶ್ರಮದ ವಯೋವೃದ್ಧರಿಗೆ ತಪಾಸಣೆ ಮಾಡಿದರು. ಮತ್ತು ವೃದ್ಧಾಶ್ರಮದ ವ್ಯವಸ್ಥಾಪಕರಾದ ಶ್ರೀಮತಿ ಲಕ್ಷಿ÷್ಮ ರವರು ವಂದಿಸಿದರು.






























