
ಆಳಂದ: ಕರ್ನಾಟಕ ಭೀಮಸೇನೆಯ ಕಲ್ಯಾಣ ಕರ್ನಾಟಕ ರಾಜ್ಯಧ್ಯಕ್ಷರಾದ ಬಾಬುರಾವ ಅರುಣೋದಯ ಪತ್ರಿಕಾಗೋಷ್ಠಿನಡೆಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಏನೇ ಮಾತನಾಡಿದರು ದಾಖಲೆ ಆಧಾರ ಇಟ್ಟುಕೊಂಡು ಮಾತಾಡ್ತಾರೆ ಅವರ ಪ್ರತಿಯೊಂದು ಮಾತಿನಲ್ಲೂ ತೂಕ ಇರುತ್ತದೆ ಮತ್ತು ಯಾರನ್ನು ಕೂಡ ನಿಂದಿಸಿ ಮಾತನಾಡುವ ಗುಣವಿಲ್ಲ ಮತ್ತು ಅವರ ತಂದೆಯಿಂದ ಬಂದಂತಹ ಬಳುವಳಿ ಸಂಸ್ಕಾರವಾಗಿದೆ. ಮತ್ತು ಈ ದೇಶದಲ್ಲಿರುವ ಎಂತಹ ಪ್ರಬಲ ಎದುರಾಳಿಗೂ ಎದುರಿಸುವ ಎದೆಗಾರಿಕೆ ಹೊಂದಿದ್ದು ದಲಿತರ ನೋವಿನ ಕೂಗೂ ಅವರಬಾಯಿಂದ ಹೊರಹೊಮ್ಮುವುದು ಅದರಲ್ಲಿ ಏನು ತಪ್ಪಿಲ್ಲ ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಈಡೀ ದೇಶವೆ ನೊಡುತ್ತಿದೆ ಅಂತವರ ವಿರುದ್ಧ ಮಾತನಾಡಿದರೆ ದಲಿತ ಸಮುದಾಯ ಸುಮ್ಮನಿರುವುದಿಲ್ಲ ನೀವು ನೀಡುತ್ತಿರುವ ಕೀಳು ಮಟ್ಟದ ಆಕ್ರೋಶ ದ ಹೇಳಿಕೆಯಲ್ಲಿ ನಿಮ್ಮ ಮನಸ್ಥಿತಿ ಗೊತ್ತಾಗುತಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಅಸಂವಿಧಾನಿಕ ಪದ ಬಳಸಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕ್ಷಮೆಯಾಚಿಸಬೇಕು
ಇಲ್ಲದಿದ್ದರೆ ದಲಿತ ಸಮುದಾಯದಿಂದ ರಾಜ್ಯಾದ್ಯಂತ ಬಿರುಸಿನ ಪ್ರತಿಭಟನೆ ನಡೆಸಲಾಗುತ್ತದೆ ಬಲಿತ – ದಲಿತ ನಿಮಗೆ ನಿಮ್ಮಪ್ಪನಿಗೆ ಇನ್ನೂ ಎಷ್ಟು ವರ್ಷ ಮೀಸಲು ಕ್ಷೇತ್ರ ಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿರುವುದು ವ್ಯಕ್ತಿ ಮೇಲಿನ ದಾಳಿಯಲ್ಲ ಇದು ಜಾತಿಯ ಮೇಲಿನ ದಾಳಿಯಾಗಿದೆ ಎಂದು ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸೇನೆ ಯುವ ಘಟಕದ ಸಂ.ಕಾರ್ಯದರ್ಶಿ ಅಪ್ಪು ಗೋಪಾಳೆ. ಲಕ್ಷ್ಮಿಕಾಂತ್ ಭಜನ. ಶಶಿಕಾಂತ್ ಸಿಂಗೆ . ಚಂದ್ರಕಾಂತ ಸಂಗೋಳಗಿ .
ಮುಂತಾದವರು ಉಪಸ್ಥಿತರಿದ್ದರು























