Home ಜಿಲ್ಲೆ ಕಲಬುರಗಿ ಹಲಕರಟಿ: ವೀರಭದ್ರೇಶ್ವರ ಭವ್ಯ ರಥೋತ್ಸವ 29ರಂದು

ಹಲಕರಟಿ: ವೀರಭದ್ರೇಶ್ವರ ಭವ್ಯ ರಥೋತ್ಸವ 29ರಂದು

ವಾಡಿ: ಪಟ್ಟಣ ಸಮೀಪದ ಹಲಕರಟಿ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ ನ.24 ರಂದು ಪ್ರಾರಂಭವಾಗಲಿದ್ದು, ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಭಿನವ ಶ್ರೀಮುನೀಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ಗುರುವಾರ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡ ವೀರಭದ್ರೇಶ್ವರ ಜಾತ್ರೆ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಎಲ್ಲಾ ಕ್ರಾರ್ಯಕ್ರಮಗಳು ಸಂಜೆ ಮತ್ತು ರಾತ್ರಿ ನಡೆಯುವುದೇ ಇಲ್ಲಿನ ವಿಶೇಷವಾಗಿದೆ. ಧಾರ್ಮಿಕ ವಿಧಿ ವಿಧಾನಗಳಿಗೂ ಅದರದೇಯಾದ ವಿಶೇಷತೆ ಪಡೆದುಕೊಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಹೊರ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದರು.

ನ. 24 ಮಂಗಳವಾರ ರಾತ್ರಿ 10 ಗಂಟೆಗೆ ಚಿಕ್ಕವೀರಪ್ಪನವರ ಮನೆಯಿಂದ ಮೈಲಾರಲಿಂಗನ ದೇವಸ್ಥಾನಕ್ಕೆ ಸಕಲ ವಾದ್ಯಗಳೊಂದಿಗೆ ಅಂಬಲಿ ಬಂಡಿ ಆಗಮನ. 25 ರಂದು ಬುಧವಾರ ಸಂಜೆ 4 ಗಂಟೆಗೆ ಜೋಡು ಪಲ್ಲಕ್ಕಿ ಉತ್ಸವದೊಂದಿಗೆ ರುದ್ರ ಬಸವಣ್ಣಗೆ ಹೋಗುವುದು. 6 ಗಂಟೆಗೆ ಚೌಡಮ್ಮನ ಗಂಗಸ್ಥಳಕ್ಕೆ ತೆರಳವುದು. ನ.26 ಗುರುವಾರ ರಾತ್ರಿ 11 ಗಂಟೆಗೆ ಪಲ್ಲಕ್ಕಿ ಸೇವಾ ಹಾಗೂ ಸಕಲ ವಾದ್ಯ ವೃಂದಗಳೊಂದಿಗೆ ಶೆಟ್ಟಿಯವರ ಮನೆಗೆ ಆಗಮನ. 27. ಶುಕ್ರವಾರ ರಾತ್ರಿ 1 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಒಗ್ಗಯ್ಯಗಳಿಂದ ಕಳ್ಳಸರಪಳಿ ಹರಿಯುವುದು. ನ. 28 ಶನಿವಾರ ಸಾಯಂಕಾಲ 4 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೈವದ ಸರಪಳಿ ಮತ್ತು ಒಗ್ಗಯ್ಯಾಗಳಿಗೆ ಸನ್ಮಾನ ಸಮಾರಂಭ ನಡೆಯುತ್ತದೆ. 11 ಗಂಟೆಗೆ ಅಗ್ನಿ ಪ್ರವೇಶ, ಪುರವಂತರು ಆಡವಿಕೆ ಹಾಗೂ ಭಕ್ತಸಮೂಹದಿಂದಲೂ ಪುರವಂತರ ಸೇವೆ ನಡೆಯುವುದು. ನ. 29 ರವಿವಾರ ಸಾಯಂಕಾಲ 4 ಗಂಟೆಗೆ ಮೈಲಾರಲಿಂಗ ದೇವಸ್ಥಾನದಲ್ಲಿ ಶ್ರೀಚೌಡೇಶ್ವರಿ ಅಡುವಿಕೆ ಮತ್ತು ಉಡಿ ತುಂಬಿ ಸನ್ಮಾನಿಸುವ ಸಂಪ್ರದಾಯ ಜರುಗತ್ತದೆ. ಸಂಜೆ 6 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀವೀರಭದ್ರೇಶ್ವರ ಭವ್ಯ ರಥೋತ್ಸವ ಜರುಗುವುದು. ಭಕ್ತರಾದ ಈರಣ್ಣ ಕೋಲಕುಂದಿ ಹಲಕರಟಿ ಅವರ ನಿವಾಸದಿಂದ ದೇವಸ್ಥಾನಕ್ಕೆ ಕುಂಭ ತರವಿಕೆ. ವಿಜಯಪುರದ ಶ್ರೀಶಂಕರ ಮಹಾದೇವಪ್ಪ ಮತ್ತು ವೀರೇಶ ಮಹಾದೇವಪ್ಪ ಹಳಕಟ್ಟಿ ಇವರಿಂದ ರಾತ್ರಿ ಮದ್ದು ಸುಡುವ ಕಾರ್ಯಕ್ರಮ ಜರುಗುವುದು ಎಂದು ಶ್ರೀಗಳು ವಿವರಿಸಿದರು.

ಶ್ರೀವೀರಭದ್ರೇಶ್ವರ ದೇವಸ್ಥಾನದ ಅರ್ಚಕರಾದ ಮಲ್ಲಿಕಾರ್ಜುನ ಪೂಜಾರಿ, ಮುಖಂಡರಾದ ರವಿಂದ್ರಕುಮಾರ ಸಂಗಶೆಟ್ಟಿ, ಸುಗಣ್ಣ ಚಂದನಕೇರಿ, ರಾಜುಗೌಡ ಪೆÇಲೀಸ್ ಪಾಟೀಲ, ಮಲ್ಲಿಕಾರ್ಜುನ ಕಟ್ಟಿಮನಿ, ಸುಭಾಷ್ ಸಾಹು ಚಂದನಕೇರಿ, ಹೇಮಂತ ವಾಕಡೆ, ಪ್ರಕಾಶ ಚಂದನಕೇರಿ, ಬಸವರಾಜಗೌಡ ಪೆÇಲೀಸ್ ಪಾಟೀಲ, ಗುರುನಾಥ ಮಣಿಗಿರಿ, ಸಿದ್ದಯ್ಯ ಶಾಸ್ತ್ರೀ ನಂದೂರಮಠ, ರಾಘವೇಂದ್ರ ಅಲ್ಲಿಪುರಕರ್, ಈರಣ್ಣ ಇಸಬಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.