Home ಜಿಲ್ಲೆ ಗುರುಪೂರ್ಣಿಮೆ ಕಾರ್ಯಕ್ರಮ

ಗುರುಪೂರ್ಣಿಮೆ ಕಾರ್ಯಕ್ರಮ

ಲಕ್ಷೆ÷್ಮÃಶ್ವರ,ಆ೧ ಪಟ್ಟಣದ ಸ್ಕೂಲ್ ಚಂದನದಲ್ಲಿ ಭಾರತ ರತ್ನ ಸಿ ಎನ್ ಆರ್ ರಾವ್ ವಿಜ್ಞಾನ ಭವನದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.


ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ವಿಜಯಪುರ ಜಿಲ್ಲೆಯ ಕನ್ನೂರು ಶಾಂತಿನಿಕೇತನ ಪೂಜ್ಯರಾದ ಶ್ರೀ ಕೃಷ್ಣ ಗುರೂಜಿ ಅವರು ಸನಾತನ ಕಾಲದಿಂದಲೂ ಗುರು ಅಗ್ರಸ್ಥಾನ ಹೊಂದಿದ್ದು ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಗುರಿ ಸಾಯಿಸಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯಂತ ಮಹತ್ವಪೂರ್ಣ ಘಟ್ಟವಾಗಿದೆ.


ಈ ನಿಟ್ಟಿನಲ್ಲಿ ವಿದ್ಯಾರ್ಥ ದೆಸೆಯಲ್ಲಿಯೇ ಏಕಾಗ್ರತೆ ಕಠಿಣ ಪ್ರಯತ್ನ ಮತ್ತು ಛಲದ ಮುಖಾಂತರ ಗುರಿಯನ್ನು ಸಾಧಿಸಿ ಸಮರ್ಪಣಾ ಭಾವದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಸ್ವಾಮಿ ವಿವೇಕಾನಂದರು ಹೇಳಿದಂತೆ ಈ ದೇಶದ ಯುವ ಜನಾಂಗ ಸಮಸ್ಯೆಗಳ ನ್ನು ಪರಿಹರಿಸುವಲ್ಲಿ ಸಿಂಹಗಳಾಗಿ ನಿಲ್ಲುತ್ತಾರೆ ಎಂದು ಘರ್ಜಿಸಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತ್ಯಾಗ ಮನೋಭಾವದ ಮುಖಾಂತರ ಭವಿಷ್ಯ ಉತ್ತಮ ಪಡಿಸಿಕೊಂಡು ಸಮಾಜದ ಭದ್ರ ಬುನಾದಿಗಳಾಗಿ ಕಲಿತ ಶಾಲೆಗೆ ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ಹೇಳಿ ಸ್ಕೂಲ್ ಚಂದನ ಒಂದು ಅತ್ಯಂತ ಮಾದರಿಯ ಶಾಲೆ ಆಗಿದೆ ಎಂದು ಪ್ರಶಂಶಿಸಿದರು.


ಮುಖ್ಯ ಅತಿಥಿಯಾಗಿದ್ದ ಬೈಲಹೊಂಗಲದ ಮಾಜಿ ಶಾಸಕ ಡಾಕ್ಟರ್ ವಿಐ ಪಾಟೀಲ್ ರವರು ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ವಿದ್ಯೆಗಿಂತಲೂ ಕೌಶಲ್ಯ ಮುಖ್ಯವಾಗಿದ್ದು ಅಂಕಗಳಿಗಿAತಲೂ ಕೌಶಲ್ಯವನ್ನು ವಿದ್ಯಾರ್ಥಿಗಳು ಸಂಪಾದಿಸಬೇಕು ಕೇವಲ ಅಂಕ ಮತ್ತು ಪುಸ್ತಕಗಳನ್ನು ಓದುವುದರಿಂದ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ ಗುರಿ ಸಾಧನೆಗಾಗಿ ಗುರು ಮಾರ್ಗದರ್ಶನ ಅತ್ಯವಶ್ಯ ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಸಮಾಜ ಸುಧಾರಣೆಯ ಪರಿಕಲ್ಪನೆಯನ್ನು ಹೊಂದಿ ಪಡೆದ ಜ್ಞಾನವನ್ನು ಸಮಾಜ ಮತ್ತು ದೇಶದ ಒಳಿತಿಗಾಗಿ ಉಪಯೋಗಿಸಬೇಕು ಎಂದು ಹೇಳಿದರು.


ಸಂಸ್ಥೆಯ ಸಂಸ್ಥಾಪಕ ಟಿ ಈಶ್ವರವರು ಪ್ರಾಥಮಿಕವಾಗಿ ಮಾತನಾಡಿ ಶಾಲೆ ನಡೆದು ಬಂದ ದಾರಿಯನ್ನು ವಿವರಿಸಿದರು.


ಕಾರ್ಯಕ್ರಮದಲ್ಲಿ ಎಬಿ ಉಪಿನ್ ಶ್ರೀಮತಿ ಪ್ರೀತಿ ವಿ ಪಾಟೀಲ್ ಗಿರಿಜಾ ಟಿ ಈಶ್ವರ್ ಪ್ರಾಚಾರ್ಯ ರಾಮು ಭಾವನವರ್ ಸೇರಿದಂತೆ ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಸಂಯೋಜಿಸಿದ್ದು ವಿಶೇಷವಾಗಿತ್ತು.