Home ಜಿಲ್ಲೆ ಗುರುಪೂರ್ಣಿಮೆ ಕಾರ್ಯಕ್ರಮ

ಗುರುಪೂರ್ಣಿಮೆ ಕಾರ್ಯಕ್ರಮ


ಹುಬ್ಬಳ್ಳಿ,ಜು.೩೧:ನಗರದ ರುದ್ರಾಕ್ಷಿಮಠದಲ್ಲಿ ಗುರುಪೂರ್ಣಿಮೆಯಂದು ಭಕ್ತಿ ಪೂರ್ವಕವಾಗಿ ಮಠದ ಪೀಠಾಧಿಪತಿಗಳಾದ ಶ್ರೀ ಬಸವಲಿಂಗ ಸ್ವಾಮಿಜೀಯವರಿಗೆ ಗುರುವಂದನೆಯನ್ನು ಅರ್ಪಿಸಲಾಯಿತು.
ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಧ್ಯಕ್ಷ ಡಾ.ಈರಪ್ಪ ಕ ಎಮ್ಮಿ ಮಾತನಾಡಿ ಗುರುವಿನ ಮಾರ್ಗದರ್ಶನವಿಲ್ಲದೆ ಗುರಿ ತಲಪಲು ಸಾಧ್ಯವಿಲ್ಲಾ ಎಂದರು. ಗುರುವಿನ ಗುಲಾಮನಾಗುವ ತನಕ ಜೀವನಕ್ಕೆ ಮುಕ್ತಿ ಸಿಗದು ಎಂದು ಹೇಳಿದರು.


ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮಹೇಶ ಪಾಟೀಲ್, ಬಸವರಾಜ ಶಿವಶಿಂಪರ, ಅನಸೂಯ ಅರಕೇರಿ, ಶ್ರೀಮತಿ ನಿರ್ಮಾಲ ಅಂಗಡಿ, ಚೆಂತಾಮಣಿ ಸಿಂದಿಗಿ, ಮನೋಹರ ಜಮಖಂಡಿ, ನೀಲಕಂಠ ತಡಸದಮಠ ಉಪಸ್ಥಿತರಿದ್ದರು.