Home ಜಿಲ್ಲೆ ಬೆಂಗಳೂರು ಬಾಬುಸಾಪಾಳ್ಯದಲ್ಲಿ ಗುರುವಂದನಾ ಕಾರ್ಯಕ್ರಮ

ಬಾಬುಸಾಪಾಳ್ಯದಲ್ಲಿ ಗುರುವಂದನಾ ಕಾರ್ಯಕ್ರಮ

ಕೆ.ಆರ್.ಪುರ, ಅ.೧೦- ಕ್ಷೇತ್ರದ ಬಾಬುಸಾಪಾಳ್ಯ ವಾರ್ಡ ಸಂಖ್ಯೆ ೪ರಲ್ಲಿ ಶಿಕ್ಷಕರ ದಿನಾಚಣೆಯ ಅಂಗವಾಗಿ ಏರ್ಪಡಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕ ರನ್ನು ಪೂರ್ವ ಜಿಬಿಎ ಜೆಡಿಎಸ್ ಕಾರ್ಯಾಧ್ಯಕ್ಷರಾದ ಶಿವಕುಮಾರ್ ಗೌಡ ಅವರು ಸನ್ಮಾನಿಸಿ ಗೌರವಿಸಿದರು.


ಪೂರ್ವ ಜಿಬಿಎ ಜೆಡಿಎಸ್ ಕಾರ್ಯಾಧ್ಯಕ್ಷ ಶಿವಕುಮಾರ್ ಗೌಡ ಅವರು ಗುರುಗಳು ಸಮಾಜದ ನಿಜವಾದ ಶಿಲ್ಪಿಗಳು. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದವಿದೆ. ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.


ಮಕ್ಕಳ ಜೀವನವನ್ನು ಶಿಲ್ಪಿಗಳಂತೆ ತಿದ್ದುವ ಶಿಕ್ಷಕರಿಗೆ ವೃತ್ತಿ ಜೀವನದಲ್ಲಿ ಹಾಗೂ ನಂತರ ಸರ್ಕಾರ ಸೌಲಭ್ಯಗಳನ್ನು ನೀಡುವ ಮೂಲಕ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.


ಗುರುವಿಗೆ ಗೌರವ ಜ್ಞಾನಕ್ಕೆ ನಮನ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಜೆಡಿಎಸ್ ಆಕಾಂಕ್ಷಿ ದಿವ್ಯಾ ಶಿವಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು ಗುರುಗಳ ಕಾರ್ಯದ ಸ್ಮರಣೆ ಇದರ ಉದ್ದೇಶವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಶಿಕ್ಷಕರನ್ನು ಸನ್ಮಾನಿಸಿ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು.