Home ಜಿಲ್ಲೆ ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

ಲಕ್ಷೆ÷್ಮÃಶ್ವರ,ಜು೩೧: ಸಮೀಪದ ಹೂವಿನ ಶಿಗ್ಲಿಯ ವಿರಕ್ತಮಠದಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿ ಗೌರವಗಳಿಂದ ಆಚರಿಸಲಾಯಿತು.


ಗುರುಪೂರ್ಣಿಮೆ ಅಂಗವಾಗಿ ಬೀದರ್ ಜಿಲ್ಲೆ ಸೋನಾಳ ಗ್ರಾಮದ ಲೋಕೇಶ್ ಧನರಾಜ್ ಹನುಮ ಶೆಟ್ಟಿ ಹಾಗೂ ಶಿವಕುಮಾರ್ ದಂಪತಿಗಳು ಮಠದ ಅಧ್ಯಕ್ಷರಾದ ಚನ್ನವೀರ ಮಹಾ ಸ್ವಾಮಿಗಳ ಪಾದಪೂಜೆ ನೆರವೇರಿಸಿ ನಂತರ ಶಾಲಾ ಮಕ್ಕಳಿಗೆ ಸಮವಸ್ತç ವಿತರಿಸಿದರು.


ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಗುರುವಿಗಿಂತ ಶ್ರೇಷ್ಠವಾದದ್ದು ಯಾವುದು ಇಲ್ಲ ಗುರುಗಳೇ ಶ್ರೇಷ್ಠ ಸಂತರು ಮಹಾಂತರು ಮಹಾತ್ಮರು ಮತ್ತು ಸಾಧಕರು.


ಗುರುಗಳ ಮಾರ್ಗದರ್ಶನವಿಲ್ಲದೆ ಏನನ್ನು ಸಾಧಿಸಲಾಗದು ಎರಡಕ್ಷರ ಕಲಿಸಿದ ಆತನೇ ಗುರು ಸ್ಥಾನ ಪಡೆಯುತ್ತಿದ್ದು ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯಿಂದಲೂ ಗುರುಗಳನ್ನು ಅತ್ಯಂತ ಶ್ರದ್ಧೆ ಭಕ್ತಿ ಗೌರವಗಳಿಂದ ಕಂಡು ಅವರಿಂದ ಶಿಕ್ಷಣ ಸಂಪಾದಿಸಿ ಮುಂದೆ ಅವರೇ ಸಮಾಜ ಸುಧಾರಕರಾಗಿ ಸಮಾಜ ಮತ್ತು ದೇಶದ ಆಧಾರ ಸ್ತಂಭಗಳಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ನಾಗೇಂದ್ರ ಕೊಳ್ಳಿ ಮಾರುತಿಕೊಳ್ಳಿ ಎಲ್‌ಎಸ್ ಅರಳಹಳ್ಳಿ ಎಸ್ ಹೆಚ್ ಪೂಜಾ ರ ಎನ್ ಎಸ್ ನೆಗಳೂರ ಎಂಜಿ ಆರಾಧ್ಯ ಮಠ ಮತ್ತು ಆರ್ ಜಿ ಕಲ್ಮಠವರನ್ನು ಸನ್ಮಾನಿಸಲಾಯಿತು.


ಎನ್ ಬಿ ನಾಗರಹಳ್ಳಿ ಮಹದೇವ ಬಿಷ್ಟಣ್ಣವರ್ ಕೆಎಸ್ ಇಟಗಿಮಠ ಪಿ ಎಚ್ ಪಾಟೀಲ್ ನಿರ್ವಹಿಸಿದರು.