Home ಜಿಲ್ಲೆ ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ


ಲಕ್ಷೆ÷್ಮÃಶ್ವರ,ಜು.೩೦:
ಪಟ್ಟಣದ ದೊಡ್ಡೂರು ರಸ್ತೆಯಲ್ಲಿರುವ ಎಂಜಿಎA ಫೌಂಡೇಶನ್ ನ ಯುನಿವರ್ಸಲ್ ಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಗುರುಕುಲ ಮಾದರಿಯ ಶಿಕ್ಷಣ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾಗಿ ವಿನಮ್ರತೆಯಿಂದ ನಡೆದುಕೊಂಡು ಶಿಕ್ಷಣ ಸಂಪಾದಿಸಿ ಸಮಾಜದ ಆಸ್ತಿಯಾಗಿ ಹೊರಹೊಮ್ಮುತ್ತಿದ್ದರು.


ಇಂದು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಶಿಸ್ತು ಮೌಲ್ಯಗಳನ್ನು ನೀಡಬೇಕಿದೆ ಸಂಸ್ಕಾರಯುತ ಮಕ್ಕಳು ಈ ದೇಶದ ಆಸ್ತಿಯಾಗುತ್ತಾರೆ ಎಲ್ಲಿ ಶಾಲಾ-ಕಾಲೇಜುಗಳಲ್ಲಿ ಈ ಮೂರುಗಳನ್ನು ಅಭ್ಯಾಸದ ಜೊತೆಗೆ ನೀಡುತ್ತಾರಯೋ ಅಲ್ಲಿ ಭಯ ಭಕ್ತಿ ಶ್ರದ್ಧೆ ಮನೆಮಾತಾಗಿರುತ್ತದೆ ಎಂದು ಹೇಳಿ ಪ್ರತಿನಿತ್ಯ ಮಕ್ಕಳಿಗೆ ನೈತಿಕ ಮೌಲ್ಯಗಳ ಬಗ್ಗೆ ವಿಶೇಷ ಪಾಠವನ್ನು ಮಾಡಬೇಕು ಎಂದು ಹೇಳಿದರು.
ಸಂಸ್ಥೆಯ ಧರ್ಮದರ್ಶಿಗಳಾದ ವಿಜಯ ಮಹಾಂತ ಶೆಟ್ಟರ್ ಬಸವೇಶ ಮಹಾಂತ ಶೆಟ್ಟರ ಪ್ರಾಚಾರ್ಯ ಪುರುಷೋತ್ತಮ್ ಎನ್ ರಮೇಶನವಲೆ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಬಸಿರ ಅಹಮದ್ ಚೌರಿ ಸಿಮ್ರಾನ್ ಕುಡಚಿ ಅಬ್ದುಲ್ ಸಿ ಅರುಣಾ ಉಮಚ್ಗಿ ಕುಬೇರಪ್ಪ ಕೊಸ್ಟಿ ಶ್ವೇತಾ ಕೆ ಕಾರ್ಯಕ್ರಮ ನಿರ್ವಹಿಸಿದರು.