Home ಜಿಲ್ಲೆ ಕಾಮಗಾರಿಗೆ ಗುದ್ದಲಿ ಪೂಜೆ

ಕಾಮಗಾರಿಗೆ ಗುದ್ದಲಿ ಪೂಜೆ


ಚನ್ನಮ್ಮನ ಕಿತ್ತೂರು,ಜು.೩೦
: ಕ್ಷೇತ್ರದ ಖೋದಾನಪೂರ ಗ್ರಾಮದಲ್ಲಿ ಸೇತುವೆ ನಿರ್ಮಾಣ ಹಾಗೂ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಸಂಪಗಾAವ ರಸ್ತೆ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಗೆ ಗುದ್ದಲಿ ಪೂಜೆಯನ್ನು ಶಾಸಕ ಬಾಬಾಸಾಹೇಬ ಪಾಟೀಲ ನೇರವೇರಿಸಿದರು.


ನಂತರ ಅವರು ಮಾತನಾಡಿ ಸದ್ಯದಲ್ಲಿ ಪ್ರಗತಿಯಲ್ಲಿದ ಕಾಮಗಾರಿಗಳು ಮುಗಿಯಲಿ ತಕ್ಷಣವೆ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರು, ರೈತರು ತಮ್ಮ ಹೊಲಕ್ಕೆ ಹೋಗಲು ಸುರಕ್ಷಿತವಾಗಿ ಸಂಚರಿಸಲು ಸೇತುವೆ ಹಾಗೂ ರಸ್ತೆಗಳು ಅನುಕೂಲವಾಗಲಿದೆ. ಸರ್ಕಾರಕ್ಕೆ ಹಣದ ಬರಯಿಲ್ಲ ಕ್ಷೇತ್ರದ ಅಭಿವೃದ್ದಿಗೆ ಬದ್ದನಿದ್ದೇನೆಂದರು.
ಈ ಎರಡು ಸೇತುವೆಗಳು ಕ್ಷೇತ್ರಕ್ಕೆ ಅತಿ ಮುಖ್ಯವಾಗಿದ್ದವು ಇವುಗಳನ್ನು ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರಿಗೆ ಉಪಯುಕ್ತವಾಗಿವೆ ಎಂದರು.


ಕಾರ್ಯಕ್ರಮದಲ್ಲಿ ಪಿಡಬ್ಲೂಡಿ ಎಇಇ ಅನಿಲ್ ಬಂಗಾರ, ಕಿತ್ತೂರು ಜಯವಂತ ಗುಂಜಟ್ಟಕರ, ಪಪಂ ಅಧ್ಯಕ್ಷ ಸುರೇಶ ಮುತ್ನಾಳ, ಪಿಡಬ್ಲೂಡಿ ಸಹಾಯಕ ಇಲಾಖಾಧಿಕಾರಿಗಳು, ಪ್ರಥಮ ಗುತ್ತಿಗೆದಾರ ಅಪ್ಪಾಸಾಬ ಶಿಲ್ಲೇದಾರ, ಅಶಪಾಕ ಹವಾಲ್ದಾರ, ಮ.ಸ.ಸ.ಕಾ. ನಿರ್ದೇಶಕ ಫಕ್ಕೀರಪ್ಪ ಸಕ್ರೇನ್ನವರ, ಮಾಜಿ ಪಪಂ ಅಧ್ಯಕ್ಷ ಸಿದ್ದಪ್ಪ ಗೋರÀಕೊಳ್ಳಿ, ಬಾಳಪ್ಪ ಪಾಗಾದ, ಎಂ.ಎಸ್.ಕಲ್ಮಠ, ಎಂಕೆಹುಬ್ಬಳ್ಳಿ ಪಪಂ ಅಧಿಕಾರಿಗಳು ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿದಿಗಳು, ಮುಖಂಡರು, ಪಪಂ ಮಾಜಿ-ಹಾಲಿ ಸದಸ್ಯರು, ಗ್ರಾಮಸ್ಥರು, ಇತರರಿದ್ದರು.