
ಕಲಬುರಗಿ: ನಗರದ ಗೋಕುಲ ನಗರ ಜಿ.ಡಿ.ಎ. ಅಕ್ಕ-ತಂಗಿ ದೇವಸ್ಥಾನ ಹತ್ತಿರ ಶ್ರೀ ಗಜಾನನ ಯುವಕರ ಸಂಘದ ವತಿಯಿಂದ ದ್ವಿತೀಯ ವರ್ಷದ ಗಣೇಶೋತ್ಸವ ಆಚರಿಸಲಾಯಿತು. ಕಾಲೋನಿಯ ಯವಕರು ಚಿಕ್ಕ ಚಿಕ್ಕ ಮಕ್ಕಳು ಜೊತೆಗೂಡಿ ಸಾರ್ವಜನಿಕರಿಂದ ಹಾಗೂ ಬಡಾವಣೆಯ ಸದ್ಭಕ್ತರಿಂದ ಹಣ ಸಂದಾಯವನ್ನು ಮಾಡಿ ೮ ಅಡಿ ಎತ್ತರದ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ೭ ದಿವಸಗಳವರೆಗೆ ಹಿರಿಯರಿಗಾಗಿ ಹಾಗೂ ಕಿರಿಯರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಾದವರಿಗೆ ನೋಟ್‌ಬುಕ್, ಪೆನ್ನುಗಳನ್ನು ನೀಡಿ ಗೌರವಿಸಿದರು. ಪ್ರತಿದಿನ ಯುವಕರು ತಮ್ಮ ಮನೆಗಳಲ್ಲಿ ಮಾಡಿಕೊಂಡು ಬಂದು ಬಂದ ಸದ್ಭಕ್ತರಿಗೆ ಪ್ರಸಾದ ಕೂಡ ಹಂಚಿದರು. ಅಲ್ಲದೆ ಪ್ರಥಮ ಬಾರಿಗೆ ಗಣೇಶ ಪೂಜೆಗೆ ತಂದ ಮೋದಕ್ ಹಾಗೂ ಬೊಂದಿ ಲಡ್ಡು ಹರಾಜು ಕಾರ್ಯಕ್ರಮ ಮಾಡಿ ಹಣ ಸಂಗ್ರಹ ಮಾಡಿದ್ದು ವಿಶೇಷವಾಗಿತ್ತು. ಮುದ್ದು ಮಕ್ಕಳು ಮಾಡಿದ ಈ ಕಾರ್ಯಕ್ಕೆ ಸಂತಷವ್ಯಕ್ತಪಡಿಸುತ್ತ ೭ನೇ ದಿವಸದ ವಿಸರ್ಜನೆ ಕಾರ್ಯಕ್ರಮದಲ್ಲಿ ತಾವು ಕೂಡ ಹಲಗೆ ತಮಟೆ ತಾಳಕ್ಕೆ ಕುಣಿಯುತ್ತಾ ಗಣಪತಿ ಬಪ್ಪ ಮೋರಿಯಾ ಪುಡಚಾ ವರಸಿ ಲೌಕರ ಯಾ ಎನ್ನುವ ಘೋಷಣೆಯೊಂದಿಗೆ ಸಂಭ್ರಮಿಸಿದರು ಎಂದು ಸುದ್ಧಿಯಲ್ಲಿ ಬಡಾವಣೆಯ ಸಿದ್ದಾರಾಮ ಹಂಚನಾಳ ತಿಳಿಸಿದರು.































