Home ಜಿಲ್ಲೆ ಗೌರಿ ಸಕ್ಕರೆ ಕಾರ್ಖಾನೆ: ಬಾಯ್ಲರ್ ಅಗ್ನಿ ಪ್ರದೀಪನಾ ಪೂಜೆ

ಗೌರಿ ಸಕ್ಕರೆ ಕಾರ್ಖಾನೆ: ಬಾಯ್ಲರ್ ಅಗ್ನಿ ಪ್ರದೀಪನಾ ಪೂಜೆ

ಬೀದರ್: ಭಾಲ್ಕಿ ತಾಲ್ಲೂಕಿನ ಬಾಜೋಳಗಾದ ಓಂಕಾರ ಗ್ರೂಪ್‌ನ ಗೌರಿ ಶುಗರ್ ಆಯಿಂಡ್ ಡಿಸ್ಟಲರೀಸ್ ಪ್ರೈವೇಟ್ ಲಿಮಿಟೆಡ್(ಘಟಕ ಸಂಖ್ಯೆ 13) ನಲ್ಲಿ ಬಾಯ್ಲರ್ ಅಗ್ನಿ ಪ್ರದೀಪನಾ ಪೂಜೆ ಹಾಗೂ ಕಬ್ಬು ನುರಿಕೆಗೆ ಚಾಲನೆ ಕಾರ್ಯಕ್ರಮ ನಡೆಯಿತು.
ಓಂಕಾರ ಗ್ರೂಪ್ ಅಧ್ಯಕ್ಷ ಬಾಬುರಾವ್ ಬೋತ್ರೆ ಪಾಟೀಲ ಹಾಗೂ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಬಾಯ್ಲರ್ ಪೂಜೆ ನೆರವೇರಿಸಿದರು. ಇದೇ ವೇಳೆ ಯಂತ್ರಕ್ಕೆ ಕಬ್ಬು ಹಾಕಿ, ಪ್ರಸಕ್ತ ಹಂಗಾಮಿನ ಕಬ್ಬು ನುರಿಕೆಗೆ ಚಾಲನೆ ಕೊಡಲಾಯಿತು.
ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ಜಿಲ್ಲೆಯ ಇತರೆ ಕಾರ್ಖಾನೆಗಳಿಗಿಂತ ರೈತರಿಗೆ ಹೆಚ್ಚು ಬೆಲೆ ಕೊಡಲಿದೆ. ಕಬ್ಬು ಪೂರೈಸಿದ 8 ದಿನಗಳ ಒಳಗೆ ಬಿಲ್ ಪಾವತಿ ಮಾಡಲಿದೆ ಎಂದು ಬಾಬುರಾವ್ ಬೋತ್ರೆ ಪಾಟೀಲ ತಿಳಿಸಿದರು.
ಕಾರ್ಖಾನೆಗೆ 2025-26ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್‌ಗೆ ತಲಾ ರೂ. 100 ಹೆಚ್ಚುವರಿ ಹಣ ಎರಡು ದಿನಗಳಲ್ಲಿ ಪಾವತಿಸಲಾಗುವುದು ಎಂದು ಹೇಳಿದರು.
ಪ್ರಸಕ್ತ ಹಂಗಾಮಿಗೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ರೈತರಿಗೆ ಉಚಿತ ಸಕ್ಕರೆ ಹಾಗೂ ಕಾರ್ಖಾನೆಯ ನೌಕರರಿಗೆ ತಲಾ 10 ಕೆ.ಜಿ. ಉಚಿತ ಸಕ್ಕರೆ ಕೊಡಲಾಗುವುದು ಎಂದು ಘೋಷಿಸಿದರು.
ರೈತರು ಕಾರ್ಖಾನೆಗೆ ಕಬ್ಬು ಸಾಗಿಸಿ, ಸಹಕರಿಸಬೇಕು ಎಂದು ಮನವಿ ಮಾಡಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಮಹಾದೇವ ದೇವರು, ಮಾಜಿ ಸಚಿವ ಸಂಭಾಜಿರಾವ್ ಪಾಟೀಲ, ಓಂಕಾರ ಗ್ರೂಪ್ ಸಿಇಒ ತೇಜಸ್ವಿನಿ ಬರ್ಗೆ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಮಹಾವೀರ ಘೋಡ್ಕೆ, ಕಬ್ಬು ಪ್ರಧಾನ ವ್ಯವಸ್ಥಾಪಕ ಕಾಶಿನಾಥ ಕಾಡಾದಿ, ಮುಖ್ಯ ಎಂಜಿನಿಯರ್ ಅವಿನಾಶ ಬಿರಾದಾರ, ಪ್ರೊಸೆಸ್ ಮುಖ್ಯಸ್ಥ ಸುಭಾಷ್ ಬಿರಾದಾರ, ಎಲೆಕ್ಟ್ರಿಕಲ್ ಡಿಜಿಎಂ ರವಿಶಂಕರ, ಬಾಯ್ಲರ್ ಪ್ರಧಾನ ವ್ಯವಸ್ಥಾಪಕ ಉಲ್ಲಾಸ್ ಭೋಸ್ಲೆ, ಡಿಸ್ಟಲರಿ ವ್ಯವಸ್ಥಾಪಕರಾದ ಕೃಷ್ಣ ಶೇಳಕೆ, ನವನಾಥ ಪವಾರ್, ಮಾನವ ಸಂಪನ್ಮೂಲ ವ್ಯವಸ್ಥಾಪಕ ವೀರೇಶ ಎಸ್. ಹಲಿಂಗೆ, ಮುಖ್ಯ ಲೆಕ್ಕಾಧಿಕಾರಿ ಸಚಿನ್ ಕಾಸೆಕರ್, ರೈತ ಸಂಘ ಪ್ರತಿನಿಧಿಗಳು, ಕಾರ್ಖಾನೆಯ ಎಲ್ಲ ಅಧಿಕಾರಿಗಳು ಹಾಗೂ ಕಾರ್ಮಿಕರು ಹಾಜರಿದ್ದರು.