
ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನಡೆಸುವ ನೇಕಾರರು ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿದ್ದು ಅವರಿಗೆ ಸರ್ಕಾರ ಸೂಕ್ತ ನೆರವು ಒದಗಿಸಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಹೇಳಿದರು.
ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ೨೭ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ನೇಕಾರರ ಬದುಕು ಇಂದು ತೀವ್ರ ಸಂಕಷ್ಟದಲ್ಲಿದೆ.ಅಗತ್ಯ ಕಚ್ಚಾ ನೂಲು ಬಾರದ್ದರಿಂದ ಉದ್ಯೋಗ ಇಲ್ಲದೇ ಖಾಲಿ ಕುಳಿತುಕೊಳ್ಳುವಂತಾಗಿದೆ.ಬೇರೊAದು ಉದ್ಯೋಗ ಗೊತ್ತಿಲ್ಲದವರಿಗೆ ಸಾಕಷ್ಟು ತೊಂದರೆಯಾಗಿದೆ.ಸರ್ಕಾರ,ಸAಬAಧಪಟ್ಟ ಸಚಿವರು ನೇಕಾರರ ನೆರವಿಗೆ ಬರಬೇಕು ಎಂದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಪ್ಯಾಟಿಗೌಡರ ಮಾತನಾಡಿ, ೨೦೨೬ರ ಮಾರ್ಷ್ ಅಂತ್ಯಕ್ಕೆ ೮.೬೫ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು ಪ್ರಸಕ್ತ ಚಾಲ್ತಿ ಸಾಲಿನಲ್ಲಿ ದುಡಿಯುವ ಬಂಡವಾಳ ಒಂದು ಕೋಟಿ ರೂ.ಗಳಿಗೂ ಅಧಿಕವಾಗಿದೆ.ಸಂಘವು ೧೪.೫೬ ಲಕ್ಷ ರೂ.ಲಾಭ ಮಾಡಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ರಮೇಶ ಹೆಬ್ಬಾಳ ಮಾತನಾಡಿ, ಬನಶಂಕರಿ ಪತ್ತಿನ ಸಹಕಾರಿ ಸಂಘದಲ್ಲಿ ಶೇರು ಹೊಂದಿರುವ ಇತರೆ ಜನಾಂಗದವರ ಮಕ್ಕಳು ಎಸ್.ಎಸ್.ಎಲ್.ಸಿ,ಪಿಯುಸಿಯಲ್ಲಿ ಸಾಧನೆ ತೋರಿದ್ದಲ್ಲಿ ಮುಂದಿನ ವರ್ಷದಿಂದ ಅಂತಹ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ವಿಶೇಷ ಸನ್ಮಾನಿತರಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಅವರು, ಬನಶಂಕರಿ ಪತ್ತಿನ ಸಹಕಾರಿ ಸಂಘವು ನಿರಂತರವಾಗಿ ೨೭ನೇ ವರ್ಷದಲ್ಲಿ ಪ್ರಗತಿಯತ್ತ ಸಾಗಿರುವುದು ಹೆಮ್ಮೆಯ ಸಂಗತಿ.ಸಮಾಜದವರಲ್ಲಿ ಪರಸ್ಪರ ಒಗ್ಗಟ್ಟು ಸಂಘಟನೆಯಿAದ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದರು.
ಸಂಘದ ನಾಲತವಾಡ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಪಣೀಗೋಳ,ಶಿಕ್ಷಕ ಶಿವಾನಂದ ಹೆಬ್ಬಾಳ ಮಾತನಾಡಿದರು.
ಸಂಘದ ನಿರ್ದೇಶಕರಾದ ಸುಭಾಷ ರುದ್ರಗಂಟಿ,ಬಸವರಾಜ ಅಗಸಬಾಳ,ಬಸಪ್ಪ ಹುಣಶ್ಯಾಳ,ಚಂದ್ರಕಾAತ ಹೆಬ್ಬಾಳ,ದ್ಯಾವಪ್ಪ ಹುಣಶ್ಯಾಳ,ಉಮೇಶ ಪ್ಯಾಟಿಗೌಡರ,ಸಂಗಪ್ಪ ಕಲ್ಲುಂಡಿ,ಶAಕ್ರಮ್ಮ ಪ್ಯಾಟಿಗೌಡರ,ಜಯಶ್ರೀ ಹೆಬ್ಬಾಳ,ನಾಲತವಾಡ ಶಾಖೆಯ ಪ್ರಭಾರ ವ್ಯವಸ್ಥಾಪಕ ಚಂದ್ರಶೇಖರ ಪ್ಯಾಟಿಗೌಡರ, ಗಣ್ಯರಾದ ಮುತ್ತಣ್ಣ ಪ್ಯಾಟಿಗೌಡರ,ಶಂಕರಲಿAಗ ಹುಣಶ್ಯಾಳ,ಕಾಶೀನಾಥ ಹೆಬ್ಬಾಳ,ಅಮರೇಶ ಡಂಬಳ ಸೇರಿದಂತೆ,ಮುದ್ದೇಬಿಹಾಳ,ನಾಲತವಾಡ ಶಾಖೆಗಳ ಸಲಹಾ ಸಮೀತಿ ಸದಸ್ಯರು,ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ಆದರ್ಶ ಹೆಬ್ಬಾಳ,ಅರ್ಚನಾ ಪ್ಯಾಟಿಗೌಡರ,ಸೌಭಾಗ್ಯ ರುದ್ರಗಂಟಿ,ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಅಶ್ವಿನಿ ರುದ್ರಗಂಟಿ,ಕುಶಾಲ ಗುಡಗುಂಟಿ,ರಾಧಿಕಾ ಇಂಜಿಗನರಿ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಡಿ.ಬಿ.ಬೇಲಾಳ ಪ್ರಾರ್ಥನಾ ಗೀತೆ ಹಾಡಿದರು.ರಮೇಶ ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿದರು.ದ್ಯಾವಪ್ಪ ಹುಣಶ್ಯಾಳ ವಂದಿಸಿದರು.ಕಾರ್ಯಕ್ರಮಕ್ಕೂ ಮುನ್ನ ಈಚೇಗೆ ನಿಧನರಾದ ಸಂಘದ ಪಿಗ್ಮಿ ಸಂಗ್ರಾಹಕರಾದ ಗುರಯ್ಯ ಮುದ್ನೂರಮಠ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.























