Home ಜಿಲ್ಲೆ ಬೆಂಗಳೂರು ಮಳೆ ಅಭಾವ ನಿಭಾಯಿಸಲು ಸರ್ಕಾರದಿಂದ ಸಿದ್ದತೆ

ಮಳೆ ಅಭಾವ ನಿಭಾಯಿಸಲು ಸರ್ಕಾರದಿಂದ ಸಿದ್ದತೆ

ಕೆಜಿಎಫ್.ಜು:೭: ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಕಂಡು ಬಂದರು ಹಲವು ಕಡೆ ಮಳೆ ಅಭಾವ ತೀವ್ರವಾಗಿ ಕಾಡುತ್ತಿದ್ದು ಬರಗಾಲವನ್ನು ಸಮರ್ಥವಾಗಿ ನಿಭಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲಾ ಸಂಪುಟ ದರ್ಜೆ ಸಚಿವರೊಂದಿಗೆ ನಾಳೆ ಸಮಾಲೋಚನೆ ನಡೆಸಿ ಮೋಡ ಬಿತ್ತನೆ ಮಾಡುವುದರ ಬಗ್ಗೆಯು ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಉಸ್ತುವಾರಿ ಸಚಿವನಾಗಿರುವುದರಿಂದ ಬರಗಾಲವನ್ನು ನಿಭಾಯಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ ಎಂದು ಹೇಳಿದರು.


ರಾಜ್ಯದಲ್ಲಿ ೪ ಕೋಟಿ ೬೦ ಲಕ್ಷ ಪಡಿತರ ಕಾರ್ಡ್‌ಗಳಿಗೆ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗುತ್ತಿದೆ.ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಆಧಾರದ ಮೇರೆಗೆ ರಾಜ್ಯದಲ್ಲಿ ಶೇ.೭೦ರಷ್ಟು ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ,ಕೇಂದ್ರ ಸರ್ಕಾರ ಪಡಿತರ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿ ೭.೫೦ ಲಕ್ಷ ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸಿದೆ.


ಆದರೆ ರಾಜ್ಯದಲ್ಲಿ ೧೩ ರಿಂದ ೧೪ ಲಕ್ಷ ಅನರ್ಹ ಪಡಿತರ ಕಾರ್ಡ್‌ದಾರರು ಇನ್ನು ಇದ್ದು,ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಲಭ್ಯವಾಗ ಬೇಕಿದ್ದ ಪಡಿತರ ಕಾರ್ಡ್‌ಗಳು ಎಪಿಎಲ್ ಹೊಂದಿರಬೇಕಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವರೇ ಸ್ವಯಂ ತೀರ್ಮಾನ ಕೈಗೊಂಡು ತಮ್ಮ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾವಣೆ ಮಾಡಿಕೊಳ್ಳಿ.ಇದರಿಂದ ಲಕ್ಷಾಂತರ ಅರ್ಹ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರ ಕುಟುಂಬ ಗಳ ಆದಾಯ ಮೀತಿಯನ್ನು ೩ ಲಕ್ಷಗಳಿಗೆ ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ ಸದ್ಯದಲ್ಲೇ ಆದೇಶ ಹೊರಡಿಸಲಿದೆ ಎಂದು ಹೇಳಿದರು.