
ಬೆಂಗಳೂರು, ನ. ೨೮- ಮಳೆ, ಚಳಿ ಯಾವುದನ್ನೂ ಲೆಕ್ಕಿಸದೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳೆದ ೧೧ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಾವಿರಾರು ಆಶಾ ಕಾರ್ಯಕರ್ತೆಯರ ನೋವು, ಸಂಕಟ, ಕಣ್ಣೀರು ಈ ಸರ್ಕಾರಕ್ಕೆ ಕಾಣುತ್ತಿಲ್ಲವೇ? ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ, ಕನಿಷ್ಠ ಗೌರವಧನಕ್ಕಾಗಿ ಬೀದಿಗಿಳಿದಿರುವ ಈ ತಾಯಂದಿರು ಮತ್ತು ಸಹೋದರಿಯರ ಹೋರಾಟಕ್ಕೆ ಸ್ಪಂದಿಸುವ ಕನಿಷ್ಠ ಮಾನವೀಯತೆಯೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ಪ್ರತಿಪಕ್ಷ ನಾಯಕರು ಅಶೋಕ್ ಟೀಕಿಸಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಬ್ರಿಟಿಷರ ಮನಸ್ಸು ಕೂಡ ಒಂದಲ್ಲ ಒಂದು ಹಂತದಲ್ಲಿ ಕರಗುತ್ತಿತ್ತೇನು ಆದರೆ ಈ ಕಾಂಗ್ರೆಸ್ ಸರ್ಕಾರದ ಮನಸ್ಸು ಮಾತ್ರ ಕರಗುತ್ತಿಲ್ಲ ಎಂದಿದ್ದಾರೆ
ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಸತ್ಯಾಗ್ರಹದ ಬೆಲೆ ಗೊತ್ತಿಲ್ಲವೇ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುವ ಇವರಿಗೆ, ನ್ಯಾಯಕ್ಕಾಗಿ ಬೀದಿಗಿಳಿದವರ ನೋವು ಮಾತ್ರ ಅರ್ಥವಾಗುವುದಿಲ್ಲವೇ
ನಕಲಿ ಗಾಂಧಿಗಳ ಕಾಂಗ್ರೆಸ್ನಲ್ಲಿ ಸತ್ಯಾಗ್ರಹಕ್ಕೆ ಗೌರವವಿಲ್ಲ, ಹೋರಾಟಕ್ಕೆ ಮನ್ನಣೆಯಿಲ್ಲ. ಇಂದು ವಾಗ್ದಾಳಿ ನಡೆಸಿದ್ದಾರೆ
ತಮ್ಮ ವೈಫಲ್ಯಗಳನ್ನು ಪ್ರಶ್ನಿಸಿದರೆ ಬ್ಲ್ಯಾಕ್ಮೇಲ್! ತಮ್ಮ ಹಕ್ಕುಗಳನ್ನು ಕೇಳಿದರೆ ರಾಜಕೀಯ ಕುತಂತ್ರ!
ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೇಳಿದರೆ ಅದು ಒತ್ತಡ ತಂತ್ರ!
ಸಂತ್ರಸ್ತರ ಧ್ವನಿಯನ್ನು ಆಲಿಸುವ ಬದಲು ಉಡಾಫೆ ಮಾತುಗಳನ್ನು ಆಡುತ್ತಾ ಹೋರಾಟವನ್ನೇ ಹಗುರವಾಗಿ ಕಾಣುವ ಇಂತಹ ಅಹಂಕಾರದ ಆಡಳಿತಕ್ಕೆ ಏನೆನ್ನಬೇಕು ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ
ಆಶಾ ಕಾರ್ಯಕರ್ತೆಯರು ಭಿಕ್ಷೆ ಕೇಳುತ್ತಿಲ್ಲ, ತಮ್ಮ ಹಕ್ಕು ಕೇಳುತ್ತಿದ್ದಾರೆ. ಅವರ ಬೆವರಿಗೂ, ಶ್ರಮಕ್ಕೂ, ಸೇವೆಗೂ ನ್ಯಾಯ ಕೇಳುತ್ತಿದ್ದಾರೆ.
ಗಾಂಧೀಜಿಯವರ ಹೆಸರನ್ನು ಅಧಿಕಾರಕ್ಕಾಗಿ ಬಳಸಿಕೊಳ್ಳುವ ಕಾಂಗ್ರೆಸ್ ಗೆ, ಅವರ ಸತ್ಯಾಗ್ರಹದ ಮೌಲ್ಯಗಳನ್ನು ಪಾಲಿಸುವ ನೈತಿಕತೆಯೂ ಇಲ್ಲದಿರುವುದು ದುರಂತ. ಮುಖ್ಯಮಂತ್ರಿಗಳೇ, ಮೊದಲು ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ನಂತರ ಗಾಂಧೀಜಿಯವರ ಆದರ್ಶಗಳ ಬಗ್ಗೆ ಮಾತನಾಡಿ ಎಂದು ಅಶೋಕ್ ಹೇಳಿದ್ದಾರೆ






















