Home ಜಿಲ್ಲೆ ಬೆಂಗಳೂರು ಜಿಬಿಡಿಎಯಿಂದ ೪೬ ಕೋಟಿ ಪರಿಹಾರ ಚೆಕ್ ವಿತರಣೆ

ಜಿಬಿಡಿಎಯಿಂದ ೪೬ ಕೋಟಿ ಪರಿಹಾರ ಚೆಕ್ ವಿತರಣೆ

ರಾಮನಗರ,ಜು.೦೪: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಭೂ ಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ ಭೂ ಮಾಲೀಕರಿಗೆ ೪೬ ಕೋಟಿ ಮೊತ್ತದ ಪರಿಹಾರ ಚೆಕ್ ಹಾಗೂ ನಿವೇಶನ ದೃಢೀಕರಣ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಗರದ ಜಿಬಿಡಿಎ ಕಚೇರಿಯಲ್ಲಿ ಮೂರನೇ ಹಂತದಲ್ಲಿ ಭೂ ಮಾಲೀಕರಿಗೆ ಪರಿಹಾರ ವಿತರಿಸಲಾಯಿತು.ಒಟ್ಟು ೧೭ ಭೂ ಮಾಲೀಕರಿಗೆ ಒಟ್ಟು ೪೬.೭ ಕೋಟಿ ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ಇದರೆ ಜೊತೆಗೆ ಇಬ್ಬರು ರೈತರಿಗೆ ನಿವೇಶನ ದೃಢೀಕರಣ ಪ್ರಮಾಣ ಪತ್ರವನ್ನು ಅಧ್ಯಕ್ಷ ಗಾಣಕಲ್ ನಟರಾಜು ನೀಡಿದರು.


ಈ ವೇಳೆ ಗಾಣಕಲ್ ನಟರಾಜು ಮಾತನಾಡಿ,ಇದುವರೆಗೆ ಒಟ್ಟು ೨೭ ಫಲಾನುಭವಿಗಳಿಗೆ ಪ್ರಾಧಿಕಾರದಿಂದ ಚೆಕ್ ವಿತರಣೆ ಮಾಡಿದ್ದು, ಮೂರನೇ ಹಂತದಲ್ಲಿ ಇಂದು ೧೭ ರೈತರಿಗೆ ೪೬ ಕೋಟಿ ೭ ಲಕ್ಷ ರೂ.ಗಳು ಹಾಗೂ ನಿವೇಶನ ದೃಢೀಕರಣ ಪತ್ರವನ್ನು ನಟರಾಜು, ಲೋಕೇಶ್ ಅವರಿಗೆ ವಿತರಣೆ ಮಾಡಿದ್ದೇವೆ ಎಂದರು.


ಇದುವರೆಗೆ ಭೂಮಿ ಕೊಡಲು ಒಪ್ಪಿರುವ ೫೪ ರೈತರಿಗೆ ಸ್ವಾದೀನ ಪರಿಹಾರ ಚೆಕ್ ವಿತರಣೆ ಮಾಡಿದ್ದೇವೆ.ಪ್ರತಿನಿತ್ಯ ಅಗತ್ಯ ದಾಖಲೆಗಳನ್ನು ಒದಗಿಸುತ್ತಿದ್ದಾರೆ.ಅವರಿಗೆ ಸೂಕ್ತ ಪರಿಹಾರದ ಹಣ ನೀಡಲು ಪ್ರಾಧಿಕಾರದ ಅಧಿಕಾರಿಗಳು ಕ್ರಮವಹಿಸುತ್ತಿದ್ದಾರೆ.ಹಾಗಾಗಿ ಎಲ್ಲರಿಗೂ ೩೦ ನಿಮಿಷಗಳಲ್ಲಿ ಆರ್‌ಟಿಜಿಎಸ್ ಮೂಲಕ ಪಾವತಿಯಾಗಲಿದೆ.ಯಾವ ದಲ್ಲಾಳಿಗಳಿಗೂ ಸಹ ಅವಕಾಶ ನೀಡದೆ ರೈತರಿಗೆ ಹಣ ಪಾವತಿಯಾಗುತ್ತಿದೆ.ರೈತರು ಸುಳ್ಳು ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.


ವಿ.ವೆಂಕಟೇಶ್, ಅರುಣ, ಉಮೇಶ್, ಶುಭೋಜಿತ್, ಪ್ರಸಾದ್, ಶಾಂತಮ್ಮ, ಗೀತಾ, ಉಮಾಬಲಗವಿ, ಮಂಜುಳಾ, ಈಶ್ವರ್ ರೆಡ್ಡಿ, ದೊಡ್ಡಾಂಜನಭೋವಿ, ತಿಮ್ಮಯ್ಯ, ಗೌರಮ್ಮ, ದುಂಡಮಾದಯ್ಯ, ನಾರಾಯಣರೆಡ್ಡಿ, ನಟರಾಜು ಕೆ.ಪಿ ನರಸಿಂಹ ರೆಡ್ಡಿ ಚೆಕ್ ಪಡೆದುಕೊಂಡರು. ಈ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಪ್ರಸನ್ನ ಸೇರಿದಂತೆ ಫಲಾನುಭವಿ ರೈತರು ಇದ್ದರು.