
ಕಲಬುರಗಿ: ನಗರದ ಹೊರವಲಯದ ಕಪನೂರ ಸಿದ್ಧರೂಡ ಕಾಲೋನಿಯಲ್ಲಿ ಹಿಂದೂ ಮುಸ್ಲಿಂ ಸಮುದಾಯದವರು ಒಗ್ಗೂಡಿ ಗಣೇಶೋತ್ಸವ ಆಚರಿಸುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.ಹಿಂದೂ ಹಾಗೂ ಮುಸ್ಲಿಂ ಯುವಕರು ಜತೆಗೂಡಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿದ್ದಾರೆ.
ಚತುರ್ಥಿ ಮುಗಿಯುವವರೆಗೂ ದಿನಗಳು ಬೆಳಿಗ್ಗೆ,ಸಂಜೆ, ರಾತ್ರಿ ಪೂಜೆಗಳಲ್ಲಿ ಎರಡೂ ಧರ್ಮೀಯರು ಸಕ್ರಿಯ ಪಾಲ್ಗೊಳ್ಳುತ್ತಾರೆ. ದಿನಕ್ಕೊಂದು ಸಿಹಿಖಾದ್ಯ ಮಾಡಿ ನೈವೇದ್ಯ ಇಡುತ್ತಾರೆ. ೫ನೇ ದಿನ ಬಡಾವಣೆಯ ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಿ, ಮೂರ್ತಿ ವಿಸರ್ಜನೆ ಮಾಡುವುದು ರೂಢಿ.’ಹಿಂದೂ ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಗಣೇಶೋತ್ಸವ ಆಚರಿಸಿದ್ದಾರೆ.ನಂತರ ಬಡಾವಣೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳನ್ನು ಆಯೋಜಿಸಿ,ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಶರಣಬಸಪ್ಪ ಎಚ್ ಖಂಡು,ಮAಜುನಾಥ ಗುತ್ತೇದಾರ,ಶರಣು ಮೇತ್ರೆ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಗುರುಗಳಾದ ಮೌನೇಶ ನಿಂಬಾಳ, ಆನಂದ ತೆಗನೂರ, ಮಹ್ಮದ ಮಡಕಿ,ಜಗನ್ನಾಥ ಪೂಜಾರಿ,ಸಂಗಯ್ಯ ಗುತ್ತೇದಾರ, ಸುಭಾಶ ಗುತ್ತೇದಾರ,ನರಸಯ್ಯ ಗುತ್ತೇದಾರ,ಜಟೆಪ್ಪ ಪೂಜಾರಿ ಸೇರಿದಂತೆ ಬಡಾವಣೆ ಮುಖಂಡರ ಇದ್ದರು.































