
ಹುಬ್ಬಳ್ಳಿ,ಆ೩: ಇಲ್ಲಿನ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಾರಾಯಣ ಹೃದಯಾಲಯ (ಧಾರವಾಡ) ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಧಾರವಾಡ ಜಿಲ್ಲಾ ಘಟಕ) ಇವುಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಕೆ. ಎಸ್. ಶರ್ಮಾ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಾರಾಯಣ ಹೃದಯಾಲಯದ ಪ್ರಮುಖ ಹೃದಯ ರೋಗ ತಜ್ಞರು, ಆಯುಷ್ ಫೆಡರೇಷನ್ ಸಂಸ್ಥೆಯ ನುರಿತ ವೈದ್ಯರು ಹಾಗೂ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ತಜ್ಞ ವೈದ್ಯರ ತಂಡವು ಸಾರ್ವಜನಿಕರಿಗೆ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿ, ಉಚಿತ ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಿತು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಹಿರಿಯ ವೈದ್ಯರಾದ ಡಾ. ಅಮೂಲ್ಯ ಆಡಿ ಪ್ರಕಾಶ್, ಹೃದಯ ರೋಗ ತಜ್ಞರು ,ನಾರಾಯಣ ಹೃದಯಾಲಯ ಪ್ರಮುಖರಾದ ಡಾ. ಸೋಮಶೇಖರ ಹುದ್ದಾರ, ಅಧ್ಯಕ್ಷರು ಜಡಿ ರವೀಂದ್ರ ಎಲ್ಕನ, ಆಡಿ ಆನಂದ್ ಹುಲಮನಿ, ಆಡಿ ಸಂದೀಪ್ ಕುಲಕರ್ಣಿ, ಹೊಮಿಯೋ ಪತಿ ಬೋರ್ಡ್ ಸದಸ್ಯರು ಆಡಿ ನದಾಫ್, ಅಶೋಕ್ ಶಿವಳ್ಳಿ ವಿರೂಪಾಕ್ಷ ಗಿಡ್ಡಣ್ಣವರ, ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಆಡಿ ಸಿ ಸಿ ಹಿರೇಮಠ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದ ಡಾ. ಕೆ. ಎಸ್. ಶರ್ಮಾ ಅವರು, “ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ಇಂದಿನ ವೇಗದ ಜೀವನಶೈಲಿಯಲ್ಲಿ ಅತ್ಯಂತ ಪ್ರಸ್ತುತವಾಗಿದೆ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಪ್ರಾAಶುಪಾಲರಾದ ಡಾ. ಶ್ರೀನಿವಾಸ ಬನ್ನಿಗೋಳ ಅವರು ಮಾತನಾಡಿ, ಮಹಾವಿದ್ಯಾಲಯವು ಸದಾ ಸಾರ್ವಜನಿಕರ ಆರೋಗ್ಯ ಸೇವೆಗೆ ಕಟಿಬದ್ಧವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಹಲವು ಜನಪರ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.






























