Home ಜಿಲ್ಲೆ ಏಳು ದಿನಗಳ ಗಣೇಶ ಉತ್ಸವಕ್ಕೆ ವಿಧ್ಯುಕ್ತ ತೆರೆ: ಸಂಭ್ರಮದಿAದ ವಿನಾಯಕನಿಗೆ ವಿದಾಯ

ಏಳು ದಿನಗಳ ಗಣೇಶ ಉತ್ಸವಕ್ಕೆ ವಿಧ್ಯುಕ್ತ ತೆರೆ: ಸಂಭ್ರಮದಿAದ ವಿನಾಯಕನಿಗೆ ವಿದಾಯ

ಸಂಜೆ ವಾಣಿ ವಾರ್ತಾ
ಕಮಲನಗರ: ಶ್ರದ್ಧಾ, ಭಕ್ತಿ ಹಾಗೂ ಸಡಗರ ಸಂಭ್ರಮದಿAದ ಭವ್ಯ ಮೆರವಣಿಗೆ ಮೂಲಕ ಗಣಪನ ಮೂರ್ತಿಗಳ ವಿಸರ್ಜನೆಯೊಂದಿಗೆ ಐದು ದಿನಗಳ ಗಣೇಶ ಉತ್ಸವಕ್ಕೆ ಪಟ್ಟಣದಲ್ಲಿ ರವಿವಾರ ಸಂಜೆ ವಿದ್ಯುಕ್ತವಾಗಿ ತೆರೆ ಬಿತ್ತು.
ಪಟ್ಟಣದ ವಿವಿಧೆಡೆ ಭವ್ಯ ಪೆಂಡಾಲ್, ವಿದ್ಯುತ್ ದೀಪಾಲಂಕಾರ, ಸಂಗೀತ ಕಾರ್ಯಕ್ರಮದ ಮೂಲಕ ಪಟ್ಣದಲ್ಲಿ ಭಕ್ತಿಯ ವಾತವರಣ ಸೃಷ್ಟಿಯಾಗಿತ್ತು.
ವ್ಯಾಪಾರಿ ಗಣೇಶ ಮಂಡಳಿ. ಜೋಷಿ ನಗರ ಗಣೇಶ ಮಂಡಳಿ, ಜೈ ಹನುಮಾನ ಗಣೇಶ ಮಂಡಳಿ, ರೈಲ್ವೇ ಗೇಟ್ ಗಣೇಶ ಮಂಡಳಿ ಸೇರಿದಂತೆ ಪೆಂಡಾಲ್ ನಿಮಿಸಿ ಅದರೊಳಗೆ ಗಣಪನ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ನೇರವೇರಿಸಲಾಯಿತು. ಧಾರ್ಮಿಕ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮಗಳು ಜನರನ್ನು ರಂಜಿಸಿದ್ದವು. ಅಂತಿಮ ದಿನವ ವಿಶೇಷ ಪೂಜೆ ನೆರವೇರಿಸಿ, ಅಲಂಕರಿಸಿದ ವಾಹನಗಳಲ್ಲಿ ಗಣೇಶನ ಮೂರ್ತಿಗಳ ಮೆರವಣಿಗೆ ಮಾಡಲಾಯಿತು.
ಕ್ರಾಂತಿನಗರ ಬಡಾವಣೆ ಗಣೇಶ, ಡಾ. ಚನ್ನಬಸವ ಪಟ್ಟದ್ದೇವರ ಕಾಲೋನಿ ಗಣೇಶ, ಇಂದಿರಾನಗರ ಬಡಾವಣೆಯ ಗಣೇಶ, ಅನೀಲಕುಮಾರ ಬೆಲ್ಲೆ ಗಣಕಯಂತ್ರ ಗಣೇಶ, ಪೊಲೀಸ್ ಕ್ವಾರ‍್ಸ್ ಗಣೇಶ, ಜೋಶಿನಗರ ಬಡಾವಣೆಯ ಗಣೇಶ ಸೇರಿದಂತೆ ವಿವಿಧ ಬಗೆಯ ಮೂರ್ತಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಕಮಲನಗರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮಂಡಳಿ ಮೂರ್ತಿಗಳ ಮೆರವಣಿಗೆ ಭವ್ಯವಾಗಿತ್ತು. ಶನಿದೇವ, ಭಾಗ್ಯವಂತಿ ಗಣೇಶ, ಇಂದಿರಾನಗರ ಬಡಾವಣೆಯ , ಭೀಮನಗರ, ಶಿವಾಜಿ ಚೌಕ್, ಬಸವೇಶ್ವರ ವೃತ್ತ ಗಣೇಶ ಮಂಡಳಿಯ ಮೂರ್ತಿಗಳ ಮೆರವಣಿಗೆ ಭವ್ಯವಾಗಿತ್ತು. ಭಗವಾ ಧ್ವಜಗಳನ್ನು ಬೀಸುತ್ತ, ಡಿಜೆಯ ಸಂಗೀತಕ್ಕೆ ಮೈಮರೆತು ಭಕ್ತಿಭಾವದಿಂದ ಹೆಜ್ಜೆ ಹಾಕಿದರು.