Home ಜಿಲ್ಲೆ ಜನರ ಸಂಸ್ಕöÈತಿ ಮೌಲ್ಯಗಳ ಅಭಿವ್ಯಕ್ತಿಯೇ ಜಾನಪದ

ಜನರ ಸಂಸ್ಕöÈತಿ ಮೌಲ್ಯಗಳ ಅಭಿವ್ಯಕ್ತಿಯೇ ಜಾನಪದ

ಉಪ್ಪಿನಬೆಟಗೇರಿ,ಆ೭ : ನಮ್ಮ ನೆಲದ ಬದುಕಿನ ಜೀವನಾನುಭವದ ಜ್ಞಾನ, ನಂಬಿಕೆಗಳು, ಕಲಾಪರಂಪರೆಯ ಜೊತೆಗೆ ಜನರ ಸಂಸ್ಕöÈತಿ ಮೌಲ್ಯಗಳ ಅಭಿವ್ಯಕ್ತಿಯೇ ಜಾನಪದ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.

ಅವರು ಹತ್ತಿರದ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ಧಾರವಾಡದ ಡಾ.ಎಸ್.ಎಸ್. ಜೀವಣ್ಣವರ ಎಜ್ಯೂಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ-೨೦೨೬ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪಾಲಿ ಭಾಷಾ ವಿದ್ವಾಂಸ ಪಬ್ಬಜ್ಜೋರವಿತಿಪಾಲಿ ವಿಜ್ಜಾಮುನಿಯೋ ಮಾತನಾಡಿದರು.

ಅಧ್ಯಕ್ಷತೆವಹಿಸಿದ್ದ ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಜನರ ಬದುಕಿನ ವಿಭಿನ್ನ ವಿದ್ಯಮಾನಗಳ ಸಮಷ್ಟಿ ಪ್ರಜ್ಞೆಯನ್ನೇ ಕೇಂದ್ರೀಕರಿಸಿರುವ ಜಾನಪದವು ನಮ್ಮ ನೆಲದ ಮೂಲ ತತ್ವಗಳ ನೆಲೆಯಲ್ಲಿ ಹುಟ್ಟಿಕೊಂಡಿರುವ ವಿಭಿನ್ನ ಕಲಾಪ್ರಕಾರಗಳಲ್ಲಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರು.

ಕೊಟಬಾಗಿಯ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಾಂತಯ್ಯ ಹಿರೇಮಠ, ಪ್ರೌಢ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ ಜಿನ್ನಪ್ಪನವರ, ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮುತ್ತಯ್ಯ ಹಿರೇಮಠ, ಪಿಡಿಓ ಶಶಿರೇಖಾ ಚಕ್ರಸಾಲಿ, ಪ್ರೌಢ ಶಾಲೆ ಮುಖ್ಯಾಧ್ಯಾಪಕ ರಾಜಗುರು ತಳವಾರ, ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಮಹಾವೀರ ಅಣ್ಣಿಗೇರಿ, ಪಂಡಿತ ಬಸವರಾಜ ಮನಸೂರ ಟ್ರಸ್ಟ್ ಅಧ್ಯಕ್ಷ ಶಿವಾನಂದ ಅಮರಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪ್ರಶಸ್ತಿ ಪ್ರದಾನ : ಇದೇ ಸಂದರ್ಭದಲ್ಲಿ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ, ಸವಿತಾ ಅಮರಶೆಟ್ಟಿ, ಗುರುಮೂರ್ತಿ ಯರಗಂಬಳಿಮಠ, ಪ್ರಭಾಕರ ದೇಶಪಾಂಡೆ, ಶಿವಾನಂದ ಅಮರಶೆಟ್ಟಿ, ಶಶಿರೇಖಾ ಚಕ್ರಸಾಲಿ, ಶ್ರೀಶೈಲಗೌಡ ಕಮತರ, ಅಶ್ವಿನ ಭೂಸಾರೆ ಅವರಿಗೆ `ಶ್ರೀಜೀವಮಾನ ಸಾಧನಾಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.