Home ಜಿಲ್ಲೆ ಬೆಂಗಳೂರು ವಿನಾಯಕ ಉತ್ಸವ ಸಮಿತಿಗಳಿಗೆ ಧನ ಸಹಾಯ

ವಿನಾಯಕ ಉತ್ಸವ ಸಮಿತಿಗಳಿಗೆ ಧನ ಸಹಾಯ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 39;

ಕೆಜಿಎಫ್,ಸೆ.೯:ವಿನಾಯಕ ಉತ್ಸವ ಆಚರಿಸುವ ಸಮಿತಿಗಳಿಗೆ ಶಾಸಕಿ ರೂಪಶಶಿಧರ್ ಧನ ಸಹಾಯವನ್ನು ವಿತರಿಸಲಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ತಿಳಿಸಿದರು.


ನಗರದ ಉರಿಗಾಂ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಶ್ರೀ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಶಾಸಕಿ ರೂಪಶಶಿಧರ್ ನೇತೃತ್ವದಲ್ಲಿ ಧನ ಸಹಾಯ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.


ವಿನಾಯಕ ಉತ್ಸವ ಆಚರಿಸುವ ಸಮಿತಿಗಳು ನಗರಸಭೆಯಿಂದ ಕಾನೂನುಬದ್ಧವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಗರಸಭೆಯಿಂದ ಅನುಮತಿ ಪತ್ರವನ್ನು ಪಡೆದುಕೊಂಡು ಬರಬೇಕು ಎಂದು ವಳ್ಳಲ್ ಮುನಿಸ್ವಾಮಿ ಮನವಿ ಮಾಡಿದರು.


ಶಾಸಕರ ಸೂಚನೆಯ ಮೇರೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರಸಭೆಯಲ್ಲಿ ಏಕಗವಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಗಣೇಶ ಉತ್ಸವಕ್ಕೆ ಅನುಮತಿ ಪಡೆಯಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಈ ವ್ಯವಸ್ಥೆಯ ಮೂಲಕ ಸುಗಮವಾಗಿ ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.


ಅನುಮತಿ ಪಡೆಯುವ ಸಂದರ್ಭದಲ್ಲಿ ನಗರಸಭೆಯಲ್ಲಿ ಪಾವತಿಸುವ ಹಣವನ್ನು ನಂತರ ವಾಪಸ್ ನೀಡಲಾಗುವುದು. ಆದ್ದರಿಂದ ಗಣೇಶ ಉತ್ಸವ ಸಮಿತಿಗಳ ಪದಾಧಿಕಾರಿಗಳು ಯಾವುದೇ ಆತಂಕವಿಲ್ಲದೆ ಕಾನೂನುಬದ್ಧವಾಗಿ ಅನುಮತಿ ಪಡೆದು ಉತ್ಸವವನ್ನು ಆಚರಿಸಬೇಕು ಎಂದು ಮನವಿ ಮಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗೌರವ ಅಧ್ಯಕ್ಷ ಮೋಹನ್ ರಾಜ್, ನಗರಸಭೆ ಸದಸ್ಯ ಕರುಣಕರನ್, ನಂದಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.