Home ಜಿಲ್ಲೆ ಕಲಬುರಗಿ ಕೋಡ್ಲಿ ವಸತಿ ಶಾಲೆಯಲ್ಲಿ ಚುನಾವಣೆ : ಶಾಲಾ ಸಂಸತ್ತು ರಚನೆ

ಕೋಡ್ಲಿ ವಸತಿ ಶಾಲೆಯಲ್ಲಿ ಚುನಾವಣೆ : ಶಾಲಾ ಸಂಸತ್ತು ರಚನೆ

ಕಾಳಗಿ:ಜು.23. ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತು ರಚನೆಯ ಹಿನ್ನೆಲೆಯಲ್ಲಿ ಇತ್ತೀಚಿಗೆ ಚುನಾವಣೆ ನಡೆಯಿತು. ಚುನಾವಣೆಗಳಲ್ಲಿ ಅನುಸರಿಸುವ ಬಹುತೇಕ ವಿಧಾನಗಳನ್ನು ಅನುಸರಿಸಲಾಯಿತು. ಮಕ್ಕಳು ಖುಷಿಯಿಂದ ಮತ ಚಲಾಯಿಸಿದರು. ಮತ ಎಣಿಕೆ ಮುಗಿದ ನಂತರ ಶಾಲಾ ಸಂಸತ್ತು ರಚಿಸಲಾಯಿತು. ವಿಜೇತ ವಿದ್ಯಾರ್ಥಿನಿಯರಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಯಿತು.ಸಮಾಜ ವಿಜ್ಞಾನ ಶಿಕ್ಷಕಿ ಮಹಾನಂದ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕೋಡ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ದೇವಿಂದ್ರ ಪೂಜಾರಿ, ಬಿಲ್ ಕಲೆಕ್ಟರ್ ನಾಗನಾಥ ರೆಡ್ಡಿ, ಪತ್ರಕರ್ತ ರಮೇಶ್ ಕುಡಳ್ಳಿ,ಪ್ರಾಂಶುಪಾಲ ಡಾ. ರಾಜಶೇಖರ್ ಮಾಂಗ್, ಶಿಕ್ಷಕರಾದ ಅಶೋಕ ಹಡಪದ, ಶಿವಾನಂದ ಬೀಳಗಿ, ನಾಗಶೆಟ್ಟಿ,ಗೋಪಾಲದಾಸ್ ಸಾಹುಕಾರ, ರೇವಣಸಿದ್ದಯ್ಯ ಹಿರೇಮಠ,ರೇಖಾ ಸೇರಿಕಾರ, ತುಕಾರಾಂ ಚವಾಣ್,ಕವಿತಾ ಭರಶೆಟ್ಟಿ, ಅಶೋಕ್, ಜ್ಯೋತಿ, ನಿಲಯಪಾಲಕ ಶಿವಕುಮಾರ್ ಹಿರೇಮಠ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.