
ಕಲಬುರಗಿ, ನ.14: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಾರ್ವಜನಿಕ ಆಡಳಿತ ವಿಭಾಗವು, ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಹಯೋಗದೊಂದಿಗೆ, ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ತರಗತಿಗಳಲ್ಲಿ ಸಿದ್ಧಾಂತಗಳನ್ನು ಬೋಧಿಸುವ ಬೋಧನಾ ವಿಧಾನಗಳು ಎಂಬ ವಿಷಯದ ಕುರಿತು ಒಂದು ದಿನದ ಅಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ ಬುಧವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಯುಕೆ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು, ಪದವೀಧರರ ನಿರುದ್ಯೋಗ ಮತ್ತು ಯುವಜನರಲ್ಲಿನ ಕೌಶಲ್ಯ ಕೊರತೆಯಂತಹ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಅಧ್ಯಾಪಕರು ತಮ್ಮ ಬೋಧನಾ ವಿಧಾನಗಳ ಬಗ್ಗೆ ಮರುಚಿಂತನೆ ನಡೆಸಿ, ಪರಿಣಾಮಕಾರಿ ಹಾಗೂ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ತರಗತಿಗಳಲ್ಲಿ ನೀಡಲಾಗುವ ಸೈದ್ಧಾಂತಿಕ ಜ್ಞಾನ ಮತ್ತು ಕಾರ್ಯಕ್ಷೇತ್ರದಲ್ಲಿ ಅದರ ಪ್ರಾಯೋಗಿಕ ಅನ್ವಯದ ನಡುವಿನ ಅಂತರದಿಂದಾಗಿ ಅನೇಕ ಪದವೀಧರರು ಉದ್ಯೋಗ ಪಡೆಯಲು ಪರದಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಸಿದ್ಧಾಂತ ಮತ್ತು ಪ್ರಾಯೋಗಿಕ ಜ್ಞಾನವನ್ನು ಸಮನ್ವಯಗೊಳಿಸುವ ಮಹತ್ವವನ್ನು ಒತ್ತಿಹೇಳಿದ ಅವರು, ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಹಾಗೂ ವೃತ್ತಿಪರ ಸವಾಲುಗಳನ್ನು ಎದುರಿಸಲು ಅಗತ್ಯವಾದ ಸಾಮಥ್ರ್ಯ, ಪ್ರಾಯೋಗಿಕ ಜ್ಞಾನ ಮತ್ತು ಉದ್ಯೋಗಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸುವಂತೆ ಅಧ್ಯಾಪಕರಿಗೆ ಕರೆ ನೀಡಿದರು.
ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ನಿರ್ದೇಶಕ ಪೆÇ್ರ. ಪ್ರಭಾಕರನ್ ಸೆಲ್ವರಾಜ್ ಅವರು ಕಾರ್ಯಾಗಾರದಲ್ಲಿ ನಡೆದ ಮೂರು ತಾಂತ್ರಿಕ ಅವಧಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಂಡಿಸಿದರು. ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮದ ಸಂಯೋಜಕ ಡಾ. ಕಿರಣ್ ಎಂ. ಗಾಜನೂರ ಅವರು ಸಮಾರೋಪ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿನಿಧಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಪೆÇ್ರ. ಜಿ. ಆರ್. ಅಂಗಡಿ, ಪೆÇ್ರ. ವಿಜಯೇಂದ್ರ ಪಾಂಡೆ, ಪೆÇ್ರ. ಚಂದನ್ ಕುಮಾರ್ ಪಾಂಡಾ, ಮಹೇಂದ್ರ ಎಂ., ಡಾ. ವಾಣಿಶ್ರೀ ಜೆ., ಡಾ. ಬ ಮಲ್ಲಿಕಾರ್ಜುನ ಹೂಗಾರ ಹಾಗೂ ಡಾ. ಸಂದೀಪ್ ಇನಾಂಪುಡಿ ಸೇರಿದಂತೆ ವಿ.ವಿ.ಯ ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳು, ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಶೋಧನಾ ವಿದ್ಯಾರ್ಥಿನಿ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರೋಪ ಸಮಾರಂಭ ಮುಕ್ತಾಯವಾಯಿತು.





















