ಕೋಲಾರ,ಜು,೧- ಬೆಂಗಳೂರು-ಚೆನ್ನೈ ನಡುವಿನ ಬಹುನಿರೀಕ್ಷಿತ ಎಕ್ಸ್ಪ್ರೆಸ್ ಕಾರಿಡಾರ್ನ ಮಹತ್ವದ ಮೈಲಿಗಲ್ಲೊಂದು ಅನಾವರಣ ಗೊಂಡಿದೆ. ಕೋಲಾರ ಜಿಲ್ಲೆಯ ಮೂಲಕವೇ ೭೧ ಕಿ.ಮೀ.ಹಾದು ಹೋಗಿರುವ ಈ ಹೆದ್ದಾರಿಯು ಒಟ್ಟು ೧೦೦ ಕಿ.ಮೀ.ಮಾರ್ಗ ಈಗಾ ವಾಹನಗಳ ಸಂಚಾರಕ್ಕೆ ಮುಕ್ತವಾಗಿ ಲೋಕಾರ್ಪಣೆಯಾಗಿದೆ.
ಇದರಿಂದಾಗಿ ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ತಿರುಪತಿ, ಚೆನ್ನೈ ಸೇರಿದಂತೆ ವಿವಿಧ ಭಾಗಗಳಿಗೆ ಸಂರ್ಪಕ ಕಲ್ಪಿಸಿ ಕೊಡಲು ಸಾಕಷ್ಟು ಸಮೀಪವಾಗಿರುವುದು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವುಂಟಾಗುವುದರ ಜೂತೆಗೆ ಸಮಯವನ್ನು ಉಳಿತಾಯವಾಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತ್ತೀಚೆಗೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಕೆ.ಜಿ.ಎಫ್.ತಾಲ್ಲೂಕಿನ ಬೇತಮಂಗಲ ಮತ್ತು ಬೈರೆಡ್ಡಿಪಲ್ಲಿಯ ನಡುವಿನ ೨೫ ಕಿ.ಮಿ. ಮಾರ್ಗವನ್ನು ಲೋಕಾರ್ಪಣೆ ಮಾಡಿದೆ ಇದರಿಂದ ಕೋಲಾರ ಭಾಗದ ವಾಹನ ಸವಾರರಿಗೆ ಚಿತ್ತೂರು,ತಿರುಪತಿ ಮತ್ತು ಚೆನ್ನೈ ಕಡೆಗೆ ಸುಗಮವಾದ ಸಂಚಾರಕ್ಕೆ ಹಸಿರು ನಿಶಾನೆ ನೀಡಿದೆ.
ಕಳೆದ ವರ್ಷ ಹೊಸಕೋಟೆ – ಬೇತಮಂಗಲ ೭೧ ಕಿ.ಮಿ. ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಇದು ಹೊಸಕೋಟೆ ಮತ್ತು ಕೆ.ಜಿ.ಎಫ್. ತಾಲ್ಲೂಕುಗಳ ಮೂಲಕ ಹಾದು ಹೋಗಲಿದೆ. ಈಗಾಗ ಬೇತಮಂಗಳ- ಬೈರೆಡ್ಡಿಪಲ್ಲಿ ೨೫ ಕಿ.ಮಿ. ಮಾರ್ಗವನ್ನು ಲೋಕಾರ್ಪಣೆ ಮಾಡಿರುವುದರಿಂದ ಕೋಲಾರ ಜಿಲ್ಲೆಯ ಜನತೆಗೆ ಒಟ್ಟು ೯೬ ಕಿ.ಮಿ
ಈ ಅತ್ಯಾಧುನಿಕ ಕಾರಿಡಾರ್ನಿಂದಾಗಿ ಸಾರ್ವಜನಿಕರ ಅಮೂಲ್ಯ ಸಮಯ ಉಳಿತಾಯವಾಗಲಿದೆ. ತಿರುಪತಿಗೆ ಕೋಲಾರದಿಂದ ಪ್ರಯಾಣ ಸಮಯದಲ್ಲಿ ೪೫ ನಿಮಿಷಗಳು ಕಡಿತವಾಗಲಿದೆ. ಚೆನ್ನೈಗೆ ಸದ್ಯಕ್ಕೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಉಳಿತಾಯವಾಗಲಿದೆ
ಈಗಾ ಕೋಲಾರದಿಂದ ಬೈರೆಡ್ಡಿಪಲ್ಲಿ ತಲುಪಿ ಅಲ್ಲಿಂದ ಜಿಲ್ಲಾ ರಸ್ತೆಗಳ ಮೂಲಕ ಹಳೆಯ ಚೆನ್ನೈ ಹೆದ್ದಾರಿ ತಲುಪಬಹುದಾಗಿದೆ.
ತಮಿಳು ನಾಡು ವಿಭಾಗ ಸೇರಿದಂತೆ ಸಂಪೂರ್ಣ ೨೬೨ ಕಿ.ಮಿ ಹೆದ್ದಾರಿ ಕಾಮಗಾರಿಯು ಈ ವರ್ಷದ ಅಂತ್ಯಕ್ಕೆ ಡಿಸೆಂಬರ್ ವೇಳಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆ ಬಳಿಕ ಬೆಂಗಳೂರಿನಿಂದ ಚೆನ್ನೈಗೆ ಕೇವಲ ೩ ಕಿ.ಮಿ. ಗಂಟೆಗೆ ತಲುಪ ಬಹುದಾಗಿದೆ. ಕೋಲಾರದಿಂದ ಚೆನ್ನೈಗೆ ಕೇವಲ ೨.೫ ಗಂಟೆ ಸಾಕಾಗಲಿದೆ.
































