Home ಜಿಲ್ಲೆ ಶೋಷಣೆಯಿಲ್ಲದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ

ಶೋಷಣೆಯಿಲ್ಲದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ


ಧಾರವಾಡ, ಜು.೩೧: ಮಾನವ ಕಳ್ಳ ಸಾಗಾಣಿಕೆಯು ದೇಶಕ್ಕೆ ಒಂದು ದೊಡ್ಡ ಮಾರಕ ರೋಗವಾಗಿದೆ. ಮಾನವ ಕಳ್ಳ ಸಾಗಾಣಿಕೆ ಎಂದರೆ ಮಕ್ಕಳು ಮಾತ್ರ ಅಲ್ಲ, ವಯೋ ವೃದ್ಧರು, ವಯಸ್ಕರರನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ. ಆರ್ಥಿಕ ಲಾಭ, ಸ್ವಾರ್ಥ, ಕುಟುಂಬದ ನಿರ್ವಹಣೆಗಾಗಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಜಾಗೃತಿ, ಶಿಕ್ಷಣ, ಕಾನೂನು ಪಾಲನೆ ಮತ್ತು ಸಮಯೋಚಿತ ಮಾಹಿತಿ ನೀಡುವ ಮೂಲಕ ಈ ಸಾಮಾಜಿಕ ಪಿಡುಗನ್ನು ತಡೆಯಬಹುದು. ಸುರಕ್ಷಿತ, ನ್ಯಾಯಸಮ್ಮತ ಹಾಗೂ ಶೋಷಣೆಯಿಲ್ಲದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರ ಸಹಕಾರ ಅತ್ಯಗತ್ಯ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಅಲ್ಲಪ್ಪ ಎಂ. ಬಡಿಗೇರ ಅವರು ಹೇಳಿದರು.
ಅವರು ಧಾರವಾಡ ಸಿವಿಲ್ ನ್ಯಾಯಾಲಯದ ಎ.ಡಿ.ಆರ್ ಕಟ್ಟಡದ ಆವರಣದಲ್ಲಿ ಆಯೋಜಿಸಿದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.


ಮಾನವ ಕಳ್ಳ ಸಾಗಾಣಿಕೆ ಅಪರಾಧಗಳಲ್ಲಿ ಇನ್ನಷ್ಟು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕಾನೂನಿನ ಉದ್ದೇಶ ಅಪರಾಧಿಗಳನ್ನು ಶಿಕ್ಷಿಸುವುದಷ್ಟೇ ಅಲ್ಲ. ಸಂತ್ರಸ್ತರಿಗೆ ರಕ್ಷಣೆ ಮತ್ತು ಪುನರ್ವಸತಿಯನ್ನು ಒದಗಿಸುವುದಾಗಿದೆ. ಮಾನವ ಕಳ್ಳ ಸಾಗಾಣಿಕೆಯು ದೇಶಕ್ಕೆ ಒಂದು ದೊಡ್ಡ ಮಾರಕ ರೋಗವಾಗಿದೆ. ಮಾನವ ಕಳ್ಳ ಸಾಗಾಣಿಕೆ ಎಂದರೆ ಮಕ್ಕಳು ಮಾತ್ರ ಅಲ್ಲ, ವಯೋ ವೃದ್ಧರು, ವಯಸ್ಕರರನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ. ಆರ್ಥಿಕ ಲಾಭ, ಸ್ವಾರ್ಥ, ಕುಟುಂಬದ ನಿರ್ವಹಣೆಗಾಗಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ


ನಮ್ಮ ದೇಶದಲ್ಲಿ ಮೊದಲು ವಸ್ತುಗಳು, ಸರಕುಗಳು, ಉತ್ಪನ್ನಗಳು ಮಾರಾಟವಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ಮಾರಾಟ, ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಸಮಾಜದಲ್ಲಿ ಇದೆ ರೀತಿ ಮಾನವ ಕಳ್ಳ ಸಾಗಾಣಿಕೆ ಮುಂದುವರಿದರೆ ಅಸಹಜತೆ, ಅಜಾಗೂರುಕತೆ, ಅಭದ್ರತೆಯನ್ನು ಎದುರಿಸಬೇಕಾಗುತ್ತದೆ. ಮಾನವ ಕಳ್ಳ ಸಾಗಾಣಿಕೆ ಎಂದರೆ ಮದುವೆ ವಿ?Àಯದಲ್ಲಿ ಮೋಸ ಮಾಡಿ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ಒಳಪಡಿಸುವುದು ಮತ್ತು ಗಣಿಗಾರಿಕೆ, ಕಾಫಿ ಎಸ್ಟೇಟ್‌ಗಳಲ್ಲಿ ಮಾನವರನ್ನು ದುಡ್ಡಿಗಾಗಿ ಜೀತದಾಳಪದ್ಧತಿಗೆ ದುಡಿಸುವುದಾಗಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆ, ನ್ಯಾಯಾಂಗ, ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಎಲ್ಲರೂ ಸಮನ್ವಯದಿಂದ ಮಾನವ ಕಳ್ಳ ಸಾಗಾಣಿಕೆ ಕಾರ್ಯವನ್ನು ತಡೆಗಟ್ಟಲು ಸಹಕರಿಸಬೇಕು. ಸಮಾಜ ನಮಗೆ ಏನು ಕೊಟ್ಟಿದೆ, ಅನ್ನುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದು ಅರಿತು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.


ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಅವರು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ತಡೆ ಅಂಗವಾಗಿ ಕಾನೂನು ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಜರುಗಿಸಲಾಗುತ್ತಿದೆ. ಆದರೆ ಶಾಲೆಯಿಂದ ಹೋರಗುಳಿದ ಮಕ್ಕಳನ್ನು ಗುರುತಿಸಿ, ಅವರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು. ನಿಮ್ಮ ಹತ್ತಿರದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ, ದೂರವಾಣಿ ಸಂಖ್ಯೆ: ೧೦೯೮ ಗೆ ಕರೆಮಾಡಿ, ಮಾಹಿತಿ ತಿಳಿಸಬೇಕು. ಇಲಾಖೆಯು ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡುತ್ತದೆ. ಎಲ್ಲರೂ ಒಗ್ಗೂಡಿದರೆ ಮಾತ್ರ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾನವ ಕಳ್ಳ ಸಾಗಾಣಿಕೆ ರಹಿತ ಸಮಾಜವನ್ನು ನಿರ್ಮಿಸೋಣ ಎಂದು ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು.


ವೇದಿಕೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಪರಶುರಾಮ ಎಫ್. ಕೆ., ಪೊಲೀಸ್ ಇನ್ಸ್ಪೆಕ್ಟರ್ ರಾಮನಗೌಡ ಸಂಕನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀರನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮಿ ಪಾಟೀಲ, ವಾರ್ತಾ ಇಲಾಖೆಯ ವಾರ್ತಾ ಸಹಾಯಕರು (ಪ್ರ) ನಸೀರಾಬಿ ವೈ ಶೇಖ ಅವರು ಇದ್ದರು.
ಧಾರವಾಡ ಗ್ರಾಮೀಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಕುಂಬಾರ ಅವರು ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಸುನಿತಾ ನಾಡಗೇರ ಅವರು ಕಾರ್ಯಕ್ರಮದಲ್ಲಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಶ್ರೀದೇವಿ ಎಸ್. ಕೋಲಾರ್, ಸಖಿ ಒನ್ ಸ್ಟಾಪ್ ಸೆಂಟರ್ ಪ್ಯಾರಾ ಲೀಗಲ್ ವಕೀಲೆ ಶೋಭಾ ಪವಾರ ಮತ್ತು ಪೋಲಿಸ್ ಇಲಾಖೆಯ ಅಕ್ಕಪಡೆ ಸಿಬ್ಬಂದಿಗಳು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.