Home ಜಿಲ್ಲೆ ಬೆಂಗಳೂರು ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ- ಮಂಜುನಾಥ್

ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ- ಮಂಜುನಾಥ್

ಕೋಲಾರ,ಸೆ,೮- ಡಿಸಿಸಿ ಬ್ಯಾಂಕ್‌ನ್ನು ಸತ್ಯ, ಧರ್ಮ,ನ್ಯಾಯ ದಿಂದ ಆಡಳಿತ ನಡೆಸಲು ಎಲ್ಲರ ಸಹಕಾರ ಅಗತ್ಯವಿದೆ, ಬ್ಯಾಂಕಿನ ಎಲ್ಲಾ ನಿರ್ದೇಶಕರು, ಎರಡೂ ಜಿಲ್ಲೆಯ ಎಲ್ಲಾ ಶಾಸಕರು ಬ್ಯಾಂಕಿನ ಅಭಿವೃದ್ದಿಗಾಗಿ ಕೈ ಜೋಡಿಸ ಬೇಕಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿ ಕೊಂಡರು.


ಕೋಲಾರ ಚಿಕ್ಕಬಳ್ಳಾಪರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ನೂತನವಾಗಿ ಆಯ್ಕೆಯಾದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಡಿಸಿಸಿ ಬ್ಯಾಂಕ್ ಉಳಿವಿಗಾಗಿ ಅಭಿವೃದ್ದಿಗಾಗಿ ನಾವೆಲ್ಲಾ ದುಡಿದಾಗ ಮಾತ್ರ ಸಾಧ್ಯವಾಗಲಿದೆ ಎಂದರು.


ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ನನ್ನನ್ನು ಮತ್ತು ಉಪಾಧ್ಯಕ್ಷರನ್ನಾಗಿ ಮೋಹನ್ ರೆಡ್ಡಿ ಅವರನ್ನು ಅವಿರೋಧವಾಗಿ ಎಲ್ಲಾ ನಿರ್ದೇಶಕರು ಆಯ್ಕೆ ಮಾಡಿರುವುದಕ್ಕೆ ನಾವುಗಳು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಪ್ರಥಮವಾಗಿ ರೈತರ ಪರ ಕೆಲಸ ನಿರ್ವಹಿಸೋಣಾ, ಡಿಸಿಸಿ ಬ್ಯಾಂಕ್ ರೈತರ ಮತ್ತು ಮಹಿಳೆಯರ ಪರವಾಗಿ ಕೆಲಸ ಮಾಡುವ ಮೂಲಕ ಅವರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸುವ ಕೆಲಸವನ್ನು ಮಾಡೋಣಾ ಎಂದರು.


ಡಿಸಿಸಿ ಬ್ಯಾಂಕ್ ರೈತರಿಗೆ ಮತ್ತು ಮಹಿಳೆಯರಿಗೆ ಈ ಹಿಂದೆ ಯಾವ ರೀತಿ ನೆರವು, ಸಹಾಯ ಮಾಡುತ್ತಿತ್ತು ಅದೇ ರೀತಿ ಮುಂದುವರೆಯುವಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಬ್ಯಾಂಕಿನಿಂದ ಪುನಾರವರ್ತನೆಯಾಗ ಬೇಕಾಗಿದೆ.ಬ್ಯಾಂಕಿನ ಅರ್ಥಿಕ ಪರಿಸ್ಥಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಅರಿಯಲು ೨೫- ೩೦ ದಿನಗಳು ಬೇಕಾಗಲಿದೆ. ಪ್ರಸ್ತುತವಾಗಿ ಬ್ಯಾಂಕಿನ ಅರ್ಥಿಕ ಪರಿಸ್ಥಿತಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರರು.


ಬ್ಯಾಂಕಿನ ನಿರ್ದೇಶಕರೊಂದಿಗೆ ಎಲ್ಲಾ ಶಾಸಕರ ಸಹಕಾರ ಇರುತ್ತದೆ ಬ್ಯಾಂಕ್‌ನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ನಾವೆಲ್ಲಾ ಸಹಕಾರ ನೀಡುತ್ತೇವೆ ಬ್ಯಾಂಕಿನ ಅರ್ಥಿಕ ಪರಿಸ್ಥಿತಿಗಳನ್ನು ಅಧ್ಯಾಯನವನ್ನು ಇನ್ನು ೨೫-೩೦ ದಿನಗಳಲ್ಲಿ ಮಾಡಿ ಬ್ಯಾಂಕಿನ ಠೇವಣಿ, ಸಾಲ. ಬಾಕಿ. ಲಾಭ,ನಷ್ಟ ಎಲ್ಲವನ್ನು ಪರಿಶೀಲಿಸ ಬೇಕಾಗಿದೆ ಎಂದರು.


ಕೋಲಾರ ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಮತ್ತು ಮಹಿಳೆರಿಗೆ ಹೆಚ್ಚಿನ ವಿಶ್ವಾಸವಿದ್ದು ಅದನ್ನು ಉಳಿಸಿ ಕೊಂಡು ನ್ಯಾಯಾ ಸಮ್ಮತವಾಗಿ ಹೋದಾಗ ಮಾತ್ರ ಬ್ಯಾಂಕ್ ತಾನಾಗೀಯ ಬೆಳವಣಿಗೆ ಹೊಂದಿ ಅಭಿವೃದ್ದಿ ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.


ಬ್ಯಾಂಕಿನ ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಸುಬ್ಬರೆಡ್ಡಿ, ಎಸ್.ಎನ್.ನಾರಾಯಣಸ್ವಾಮಿ. ಎಂಎಲ್ ಅನಿಲ್ ಕುಮಾರ್, ಕೆ.ವೈ,ನಂಜೇಗೌಡ, ನಸ್ಸೀರ್ ಆಹಮದ್ ಸೇರಿದಂತೆ ಎಲ್ಲಾ ಶಾಸಕರು ಸಚಿವರುಗಳಾದ ರಾಮಲಿಂಗಾರೆಡ್ಡಿ, ಕೆ.ಹೆಚ್.ಮುನಿಯಪ್ಪ, ಬೈರತಿ ಸುರೇಶ್ ಎಲ್ಲರ ಸಹಕಾರದಿಂದ ಅವಿರೋಧವಾದ ಆಯ್ಕೆ ಸಾಧ್ಯವಾಗಿದೆ. ಮುಖ್ಯವಾಗಿ ಬ್ಯಾಂಕಿನ ನಿರ್ದೇಶಕರುಗಳಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದರು.


ಈ ಸಂದರ್ಭದಲ್ಲಿ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಎಂ .ಎಲ್.ಅನಿಲ್ ಕುಮಾರ್ ಮುಂತಾದವರು ಇದ್ದರು.