Home ಜಿಲ್ಲೆ ವಿಕ್ರಮ-1 ಯಶಸ್ವಿ ಉಡಾವಣೆಯಲ್ಲಿ ಇಂಜಿನಿಯರ ಶಿಂಧೆ ಪಾತ್ರ ಹೆಮ್ಮೆ ಪಡುವಂತದ್ದು

ವಿಕ್ರಮ-1 ಯಶಸ್ವಿ ಉಡಾವಣೆಯಲ್ಲಿ ಇಂಜಿನಿಯರ ಶಿಂಧೆ ಪಾತ್ರ ಹೆಮ್ಮೆ ಪಡುವಂತದ್ದು

ಔರಾದ್ : ಗಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದು, ಅಚಲವಾದ ಛಲ ಮತ್ತು ಕಠಿಣ ಪರಿಶ್ರಮದಿಂದ ನಮ್ಮೂರಿನ ಯುವಕನೋರ್ವ ರಾಕೆಟ್ ವಿಕ್ರಮ್-1 ಯಶಸ್ವಿ ಉಡಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತಂದಿರುವುದು ಎಲ್ಲರು ಹೆಮ್ಮೆಪಡುವ ವಿಷಯವಾಗಿದೆ ಎಂದು ಮುಖ್ಯಗುರು ರವಿಕಾಂತ ಸೋಮಾಸೆ ಹರ್ಷ ವ್ಯಕ್ತಪಡಿಸಿದರು.

ತಾಲೂಕಿನ ಎಕಂಬಾ ಗ್ರಾಮದ ನರಸಿಂಗ್ ಮಾಧವರಾವ ಶಿಂಧೆ ಅವರನ್ನು ಸೋಮವಾರ ಸ್ವಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ ಅಭಿನಂಧನಾ ಸಮಾರಂಭ ಮತ್ತು ಮಕ್ಕಳಿಗೆ ಹಮ್ಮಿಕೊಂಡ ಪ್ರೇರಣಾ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಮೊದಲ ಖಾಸಗಿ ಸ್ಕೈರೂಟ್ ಸಂಸ್ಥೆಯ ರಾಕೆಟ್ ವಿಕ್ರಮ್-1 ತಂಡದಲ್ಲಿ ಶಿಂಧೆ ತನ್ನನ್ನು ತಾನು ತೊಡಗಿಸಿಕೊಂಡು, ರಾಕೆಟ್ ಇಂಜಿನ್ ಪರೀಕ್ಷೆ, ವಿನ್ಯಾಸ ಮತ್ತು ಅಭಿವೃದ್ಧಿ ಹಂತದಲ್ಲಿ ತಮ್ಮ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಿ ಯಶಶ್ವಿ ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ದೇಶ ಹೆಮ್ಮೆ ಪಡುವ ಕಾರ್ಯದಲ್ಲಿ ಕೈಜೋಡಿಸಿ, ನಾಡಿಗೆ ಕೀರ್ತಿ ತಂದಿದ್ದಾರೆ ಇವರ ಸಾಧನೆ ಮತ್ತು ಸೇವೆ ಮತ್ತು ಅನುಭವ ಎಲ್ಲ ಮಕ್ಕಳಿಗೂ ದೊರೆಯುವಂತಾಗಲಿ ಎಂದರು.

ವಿಜ್ಞಾನ ಶಿಕ್ಷಕ ಚಂದ್ರಕಾಂತ ಕಾಳೆಕರ್ ಪ್ರಸ್ತಾವಿಕವಾಗಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಕಲಿತ ಪ್ರತಿಭೆಗಳಿಗೆನು ಕೊರತೆಯಿಲ್ಲ. ಮಕ್ಕಳು ಯಾವುದೇ ನಕರಾತ್ಮಕ ವಿಷಯಗಳಿಗೆ ತಲೆಕೆಡಿಸಿಕೊಳ್ಳದೇ ಶಿಕ್ಷಕರು ಹೇಳಿದ ಪಾಠಗಳನ್ನು ಸರಿಯಾದ ರೀತಿಯಲ್ಲಿ ಕೇಳಿಕೊಂಡು, ಕಠೀಣ ಪರಿಶ್ರಮದಿಂದ ಓದಿದರೇ ಯಶಸ್ಸು ಕಟ್ಟಿಟ್ಟ ಬುತ್ತಿಯನ್ನುವುದಕ್ಕೆ ನರಸಿಂಗ್ ಮಾಧವರಾವ ಶಿಂಧೆ ಅವರೇ ತಾಜಾ ಉದಾಹರಣೆಯಾಗಿದ್ದಾರೆ. ಅವರಂತೆ ಎಲ್ಲರು ಕೀರ್ತಿ ತರುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಸ್ಥಳೀಯ ಪ್ರೌಢ ಶಾಲೆ ಸೇರಿದಂತೆ ಉರ್ದು ಶಾಲೆ, ಎಂ.ಪಿ.ಎಸ್ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಒಟ್ಟು ನಾಲ್ಕು ಶಾಲೆ ಶಿಕ್ಷಕ ವೃಂಧದವರು ಮತ್ತು ಅಲ್ಲಿನ ಎಲ್ಲ ಮಕ್ಕಳು ಸೇರಿಕೊಂಡು ಸ್ವಗ್ರಾಮದ ಯುವಕ ನರಸಿಂಗ್ ಮಾಧವರಾವ ಶಿಂಧೆ ಅವರನ್ನು ಆತ್ಮಿಯವಾಗಿ ಬರಮಾಡಿಕೊಂಡು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.

ನರಸಿಂಗ ಮಾಧವರಾವ ಶಿಂಧೆ ಅವರು ಬಾಲ್ಯದ ಶಿಕ್ಷಣ, ಮುಂದಿನ ಗುರಿ, ಸಾಧನೆ ಬಗ್ಗೆ ಮಕ್ಕಳಿಗೆ ಪ್ರೇರಣೆದಾಯಕ ಸಂಗತಿಗಳು, ರಾಕೇಟ ಉಡಾವಣೆ , ಆಕಾಶದ ವಿಷ್ಮಯಗಳು ಸೇರಿದಂತೆ ಇನ್ನಿತರ ಕೂತುಹಲಕಾರಿ ವಿಷಯಗಳ ರಸ ದೌತಣ ಮಕ್ಕಳಿಗೆ ಉಣಬಡಿಸಿದರು.

ಈ ಸಂದರ್ಭದಲ್ಲಿ ಉರ್ದು ಶಾಲೆ ಮುಖ್ಯಗುರು ಜಗನ್ನಾಥ ಮೂಲಗೆ, ದತ್ತಾತ್ರಿ ಮುಂಗೆ, ಮಾಧವ ಠಾಕ್ರೆ, ಸತೀಷ ನಾಗೂರೆ, ಪ್ರಕಾಶ, ಸಂಜಿವನ್ ಡೋಣೆ, ಅವಿನಾಶ, ಬಾಬು ಚವ್ಹಾಣ, ಮಂಜುಳಾ, ಇತರರಿದ್ದರು. ಶಿಕ್ಷಕ ಯಶ್ವಂತ ಡೋಂಬಾಳೆ ನಿರೂಪಣೆ ಮಾಡಿದರು.


ವಿದ್ಯಾರ್ಥಿಗಳು ಕಠಿಣ ಛಲ ಮತ್ತು ಶ್ರಮ ಬೆಳೆಸಿಕೊಳ್ಳಿ

ನಮ್ಮೂರಿನ ಸರಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದ ನನಗೆ ಮನೆಯಲ್ಲಿನ ಬಡತನದ ಅರಿವಿತ್ತು. ಉತ್ತಮ ರೀತಿಯಿಂದ ಓದಿ ಮುಂದೆ ಎನಾದರೂ ಸಾಧನೆ ಮಾಡಬೇಕೆಂಬ ಕೊರಗು ಸದಾ ಮನಸ್ಸಿನಲ್ಲಿ ಕಾಡುತ್ತಿತ್ತು. ವಿಜ್ಞಾನ ವಿಷಯದಲ್ಲಿ ಆಸಕ್ತಿದಾಯಕನಾಗಿರುವ ನನಗೆ ಇಂಜಿನಿಯರ ಪದವಿ ಮುಗಿದ ಮೇಲೆ ಇಸ್ರೋ ದಲ್ಲಿ ಕೆಲಸ ಮಾಡುವ ಅವಕಾಶ ದೊರಕಿತು. ಇದೇ ಅವಕಾಶವನ್ನು ಕಠಿಣ ಛಲ ಮತ್ತು ಶ್ರಮದಿಂದ ಬಳಸಿಕೊಂಡ ಪರಿಣಾಮದಿಂದ ರಾಷ್ಟ್ರ ಮಟ್ಟದಲ್ಲಿ ಕೀರ್ತ ಗಳಿಸುವಂತೆ ಮಾಡಿದೆ. ಮಕ್ಕಳು ಉತ್ತಮ ರೀತಿಯಿಂದ ಓದಿದರೇ ಮುಂದೆ ಅವರಿಗೆ ಒಳ್ಳೆಯ ಅವಕಾಶಗಳು ಮನೆ ಬಾಗಿಲಿವೆ ಬರಲಿವೆ. ಸಾಧಿಸುವ ಛಲವಿರಬೇಕು ಎಂದರು.

ನರಸಿಂಗ್ ಮಾಧವರಾವ ಶಿಂಧೆ
ರಾಕೆಟ್ ವಿಕ್ರಮ್-1 ಇಂಜಿನಿಯರ ಎಕಂಬಾ