
ಅಥಣಿ: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೆÇ್ರೀತ್ಸಾಹ ನೀಡುವುದರ ಜೊತೆಗೆ ಅವರ ಬದುಕಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಶ್ರೀ ರಾಮ್ ಫೈನಾನ್ಸ್ ಬ್ಯಾಂಕ್‍ನ ಸಂಸ್ಥೆಗಳು ಸಾಮಾಜಿಕ ಸೇವಾ ಕಾರ್ಯಗಳಿಗೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ನಗರದ ಆರ್ ಹೆಚ್ ಕುಲಕರ್ಣಿ ಸಭಾಭವನದಲ್ಲಿ ಶನಿವಾರ ಶ್ರೀ ರಾಮ್ ಫೈನಾನ್ಸ್ ಬ್ಯಾಂಕ್‍ನ “ರಾಮ ಸೇವಾ ಸಂಕಲ್ಪ” ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮಕ್ಕೆ ಸಹಕಾರಿ ಸಚಿವ ಲಕ್ಷ್ಮಣ ಸವದಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಷ್ಯ ವೇತನಕ್ಕೆ ಅರ್ಹರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪತ್ರಿಕೆಗಳನ್ನು ನೀಡಿ ಮಾತನಾಡಿದರು
ವಿದ್ಯಾಭ್ಯಾಸಕ್ಕೆ ಪೆÇ್ರೀತ್ಸಾಹ, ಬದುಕಿಗೆ ಸ್ಫೂರ್ತಿ ಎಂಬ ಧ್ಯೇಯವಾಕ್ಯದೊಂದಿಗೆ ಶ್ರೀ ರಾಮ್ ಫೈನಾನ್ಸ್ ಬ್ಯಾಂಕ್‍ನ “ರಾಮ ಸೇವಾ ಸಂಕಲ್ಪ” ಯೋಜನೆಯಡಿ ಅಥಣಿ ಮತಕ್ಷೇತ್ರದ 1 ಸಾವಿರ ವಿದ್ಯಾರ್ಥಿಗಳಿಗೆ ಸುಮಾರು 40 ಲಕ್ಷ ರೂ.ಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಲಾಭಾಂಶದಲ್ಲಿನ ಸಿಎಸ್‍ಆರ್ ನಿಧಿಯನ್ನು ಸಮಾಜದ ಸದ್ವಿನಿಯೋಗಕ್ಕೆ ಬಳಸಿಕೊಂಡು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಉತ್ತಮ ಸೇವಾ ಕಾರ್ಯವಾಗಿದೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರದ ಜೊತೆಗೆ ವಿವಿಧ ಸಂಘ-ಸಂಸ್ಥೆಗಳು, ಬ್ಯಾಂಕ್‍ಗಳು ಹಾಗೂ ಉದ್ಯಮಿಗಳು ಕೈಜೋಡಿಸಿದರೆ ಸಮಾಜದ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಲಕ್ಷ್ಮಣ ಸವದಿ ಹೇಳಿದರು
ಈ ವೇಳೆ ಕವಲಗುಡ್ಡದ ಅಮರೇಶ್ವರ ಮಹಾರಾಜರು, ಜೋನಲ್ ಬಿಸಿನೇಸ್ ಹೇಡ್ ರಾಮಲಿಂಗೇಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಸದಸ್ಯ ರಾಜು ಗುಡೊಡಗಿ, ಅಥಣಿ ಡಿವೈಎಸ್‍ಪಿ ಪ್ರಶಾಂತ ಮುನ್ನೋಳ್ಳಿ, ಜೆ ಎ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ರಾಮ ಕುಲಕರ್ಣಿ, ಬಿಇಓ ಎಮ್ ಆರ್ ಮುಂಜಿ, ಜೆ ಇ ಸಂಸ್ಥೆಯ ಸಹ ಕಾರ್ಯದರ್ಶಿ ಆನಂದ ಟೊನಪಿ, ಮುಖ್ಯಸ್ಥರಾದ ಉದಯ ಚನ್ನವರ, ಶಿವಾನಂದ ಸವದತ್ತಿ, ಆದಿತ್ಯೆ ಕೆ. ಎ, ಈರಣ್ಣ ಧಾಡಿಬಾವಿ, ಶಾಖಾ ವ್ಯವಸ್ಥಾಪಕ ಪ್ರವೀಣ ಪಾಟೀಲ ಸೇರಿದಂತೆ ಶ್ರೀರಾಮ ಪೈನಾಸ್ಸ ಅಥಣಿ ಘಟಕದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಪೆÇಷಕರು ಉಪಸ್ಥಿತರಿದ್ದರು.



























