Home ಜಿಲ್ಲೆ ಕಲಬುರಗಿ ಉದ್ಯೋಗ ನೋಂದಣಿ;ಯುವನಿಧಿ ಯೋಜನೆ ಮಾಹಿತಿ ಕಾರ್ಯಕ್ರಮ

ಉದ್ಯೋಗ ನೋಂದಣಿ;ಯುವನಿಧಿ ಯೋಜನೆ ಮಾಹಿತಿ ಕಾರ್ಯಕ್ರಮ

ಕಲಬುರಗಿ.ಆ.19: ನಗರದ ಜೇವರ್ಗಿ ಕಾಲೋನಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಕಾಲೇಜಿನ ಬಿಎ, ಬಿಕಾಂ, ಬಿಎಸ್ಸಿ ಹಾಗೂ ಬಿಬಿಎ
ವಿದ್ಯಾರ್ಥಿನಿಯರಿಗೆ ಸಂಚಾರಿ ಉದ್ಯೋಗ ನೋಂದಣಿ, ಉದ್ಯೋಗಾವಕಾಶಗಳು ಮತ್ತು ಯುವನಿಧಿ ಯೋಜನೆಯ ಮಾಹಿತಿಯನ್ನು ನೀಡಲು ಕಾಲೇಜಿನ ಉದ್ಯೋಗ ಕೋಶ ದ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಮೋರಗೆ ಪ್ರಕಾಶ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಪವಿತ್ರಾ ನಿರೂಪಿಸಿದರೆ,ವಿದ್ಯಾರ್ಥಿನಿಯರಾದ ಅರುಣಾ ಮತ್ತು ಅನಿತಾ ಸ್ವಾಗತ ಗೀತೆಯನ್ನು ಹಾಡಿದರು. ಕಾಲೇಜಿನ ಉದ್ಯೋಗ ಕೋಶದ ಸಂಚಾಲಕ ಡಾ. ಸಂಗಣ್ಣ ವಿ ನಿಷ್ಠಿ ಎಲ್ಲರನ್ನೂ ಸ್ವಾತಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕನಿರ್ದೇಶಕರಾದ ಭಾರತಿ ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸತೀಶ್ ರಾಠೋಡ ಅವರು ಆಗಮಿಸಿ ಉದ್ಯೋಗಅವಕಾಶಗಳು, ಯುವನಿಧಿ ಯೋಜನೆಯ ಮಹತ್ವದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಉದ್ಯೋಗ ನೊಂದಣಿಯ ಮಹತ್ವವನ್ನು ತಿಳಿಸಿದರು. ಜೊತೆಗೆ ನೆಹರೂ ಯುವ ಕೇಂದ್ರದ ರಾಜು ಅವರು ಮೈ ಭಾರತ್ ಪೆÇೀರ್ಟಲ್ ಗೆ ನೋಂದಣಿಯಾಗಿ
ಸದುಪಯೋಗಪಡಿಸಿಕೊಳ್ಳುವುದರ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಸಹಾಯಕ ಶರಣಪ್ಪ ಒಕ್ಕಲಕುಂಟಿ
ಉಪಸ್ಥಿತರಿದ್ದರು. ಜೊತೆಗೆ, ಪ್ರಾಧ್ಯಾಪಕರಾದ ಡಾ. ವಿನೋದಕುಮಾರ್ ರಾಠೋಡ್, ಗ್ರಂಥಾಪಾಲಕ ಡಾ. ವಿನೋದ್ ಕುಮಾರ, ಅತಿಥಿ ಉಪನ್ಯಾಸಕರು ಹಾಗೂ ಎಲ್ಲಾ ವಿಭಾಗಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸುಮಾರು 210 ವಿದ್ಯಾರ್ಥಿನಿಯರು ಉದ್ಯೋಗ ನೋಂದಣಿ ಮಾಡಿಸಿದರು. ಸೋನಿಯಾ, ಚೈತ್ರಾ ಹಾಗೂ ಲಕ್ಷ್ಮಿ ನೋಂದಣಿಗಾಗಿ ಅಗತ್ಯ ಸಹಾಯ ನೀಡಿದರು. ಸಹನಾ ರವರು ವಂದಿಸಿದರು. ನೋಂದಣಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಅಧ್ಯಾಪಕ ಬಂಧುಗಳು ಹರ್ಷ ವ್ಯಕ್ತಪಡಿಸಿದರು.